ಮಳೆಯಿಂದ ಹಾನಿಗೊಳಗಾದ ಬಡಾವಣೆಗಳಿಗೆ ಸಂಸದ ಭೇಟಿ-ಶಾಶ್ವತ ಪರಿಹಾರಕ್ಕೆ ಭಾನುವಾರ ಸಭೆ
ಬಾಪೂಜಿ ನಗರ,ವೆಂಕಟೇಶ್ ನಗರ,ಶಾಂತಮ್ಮ ಲೇಔಟ್ ಮೊದಲಾದ ಬಡಾವಣೆಗೆ ಭೇಟಿ

ಸುದ್ದಿಲೈವ್.ಕಾಂ/ಶಿವಮೊಗ್ಗ
ವೆಂಕಟೇಶ್ ನಗರದ ಚಾನೆಲ್ ಏರಿಯಾದಜನ ಇಂದು ಸಹ ಜನಪ್ರತಿನಿದಿಗಳಿಗೆ ಮತ್ತು ಅಧಿಕಾರಿಗಳಿಗೆ ಹಿಡಿ ಶಾಪಹಾಕಿದ್ದಾರೆ.
ಇಂದು ಬೆಳಿಗ್ಗೆ ಸಂಸದ ಬಿ.ವೈ.ರಾಘವೇಂದ್ರ ವಿನೋಬನಗರ 60 ಫೀಟ್ ರಸ್ತೆ, ವೆಂಕಟೇಶ್ ನಗರದ ಚಾನೆಲ್ ಏರಿಯಾದ ಮೇಲಿನ ಮನೆಗಳಿಗೆ ಭೇಟಿ ನೀಡಿದರು. ಸಂಸದರು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಜನ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಆದರೆ ನಿನ್ನೆ ನೀರಿನ ಹೊಡೆತಕ್ಕೆ ನಗರದ ಬಹುತೇಕಮನೆಗಳಲ್ಲಿ ನೀರು ನುಗ್ಗಿದೆ. ನೀರಿನಿಂದ ಮನೆಗಳು ಹಾಳಾಗಿವೆ.ಆದರೆ ಮನೆಗಳಿಗೆ ಬಂದು ಏನಾಗಿದೆ ಎಂದು ಸಂಸದರು ಕೇಳಿಲ್ಲವೆಂಬುದು ಜನರ ಅಳಲಾಗಿದೆ.
ವೆಂಕಟೇಶ್ ನಗರದ ಚಾನೆಲ್ ಏರಿಯಾದ ಮಾರಮ್ಮನ ದೇವಸ್ಥಾನದ ರಸ್ತೆಯಲ್ಲಿ ನೀರು ಹರಿದು ಬಂದಿದ್ದು ರಸ್ತೆಗಳು ಕಿತ್ತುಕೊಂಡುಹೋಗಿದೆ. ಮನೆಗಳ ಬಾಗಿಲುಗಳಿಗೆ ಜಲ್ಲಿ ಮತ್ತು ಮರಳನ್ನ ಚೀಲಗಳನ್ನ ಇಡಲಾಗಿದೆ. ಬಾಕ್ಸ್ ಚರಂಡಿಗಳಲ್ಲಿ ನೀರು ಹರಿಯದೆ ರಸ್ತೆಯ ಮೇಲೆ ಹರಿದಿದ್ದರ ಪರಿಣಾಮ ಅವಾಂತರ ಕಂಡು ಬಂದಿದೆ.
ಗರಂ ಆದ ಬಿವೈಆರ್
ಲಕ್ಷ್ಮೀ ಚಲನಚಿತ್ರ ಮಂದಿರದ ಹಿಂಭಾಗದ ಚಾನೆಲ್ ಬ್ರಿಡ್ಜ್ ಮೇಲೆ ಸ್ಮಾರ್ಟ್ ಸಿಟಿ ಕಾಮಗಾರಿಯಾದರೂ ನೀರು ನಿಲ್ಲುವಂತಾಗಿದೆ. ಇಲ್ಲಿ ಗ್ರಿಲ್ ಗಳನ್ನಅಳವಡಿಸುವಂತೆ ಸೂಚಿಸಿದರು. ಗ್ರಿಲ್ ಬಳಕೆಯಾಕೆ ಮಾಡಲಿಲ್ಲ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಗರಂ ಆದರು.
ಶಾಶ್ವತ ಪರಿಹಾರಕ್ಕೆ ಭಾನುವಾರ ಸಭೆ
ಮಳೆ ಅವಾಂತರ ಹಾಗೂ ಚಾನೆಲ್ ಗಳಿಂದ ಮನೆಗೆ ಹರಿದು ಬಂದ ನೀರಿನಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಂಸದರು ಅಧಿಕಾರಿಗಳಿಗೆ ತಿಳಿಸಿದರು. ಅದಕ್ಕೆ ಅಧಿಕಾರಿಗಳು ಭಾನುವಾರ ಇಟ್ಟುಕೊಳ್ಳೋಣವೆಂದು ಅಧಿಕಾರಿಗಳು ತಿಳಿಸಿದರು.
ನಂತರ ಬಾಪೂಜಿ ನಗರ, ಶಾಂತಮ್ಮ ಬಡಾವಣೆ, ಮಂಡ್ಲಿ, ಗಂಧರ್ವ ನಗರ ಮೊದಲಾದಲ್ಲಿ
