
ಸುದ್ದಿಲೈವ್.ಕಾಂ/ಶಿವಮೊಗ್ಗ
ಶಿವಮೊಗ್ಗದಲ್ಲಿ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು ಮಳೆ ಸುರಿಯುವ ಮಳೆಯ ಜೊತೆಗೆ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ.
ನಿನ್ನೆ ಕೆಲ ಕಡೆ ನೀರು ನಿಗದಿತ ಸಮಯಕ್ಕಿಂತ ಕಡಿಮೆ ಅವಧಿಗೆ ಕುಡಿಯುವ ನೀರು ಬಿಡಲಾಗಿದ್ದು, ಇವತ್ತು ಮತ್ತು ನಾಳೆಯೂ ಕುಡಿಯುವ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಡಿಯುವ ನೀರಿನ ಪಂಪ್ ಮುಳುಗಡೆಯಾಗಿದ್ದು, ಏರು ಕೊಳವೆ ಮಾರ್ಗವೂ ಸಹ ಮುಳುಗಡೆಯಾಗಿರುವುದರಿಂದ ಇಂದು ಮತ್ತು ನಾಳೆ ಕುಡಿಯುವ ನೀರು ಈ ಕೆಳಕಂಡ ಬಡಾವಣೆಯಲ್ಲಿ ಬರುವುದಿಲ್ಲ ಎಂದು ತಿಳಿಸಲಾಗಿದೆ.
ವಾದಿ ಎ ಹುದಾ, ಊರುಗಡೂರು, ಸೂಳೆಬೈಲು,ಸಹ್ಯಾದ್ರಿ ಕಾಲೇಜು, ಸಹ್ಯಾದ್ರಿ ನಗರ, ಪುರಲೆ, ಗುಡ್ಡೇಕಲ್, ನವುಲೆ, ಡಿ.ಡಿ.ಅರಸು, ಬಸವೇಶ್ವರ ನಗರ, ಬೊಮ್ಮನ್ ಕಟ್ಟೆ, ಶಾಂತಿ ನಗರ, ಆರ್ ಎಂ ಎಲ್ ನಗರ, ರವೀಂದ್ರ ನಗರ, ತುಂಗಾನಗರ, ಮಿಳಘಟ್ಟ,
ಜಿಲ್ಲಾ ಪಂಚಾಯತ್, ಬಸ್ ಸ್ಟ್ಯಾಂಡ್, ಪಿಡಬ್ಲೂಡಿ ಕ್ವಾಟ್ರಸ್, ಜಿಲ್ಲಾಪಂಚಾಯತ್, ಸ್ಟೇಡಿಯಂ ಟ್ಯಾಂಕ್ ನಿಂದ ಸರಬರಾಜು ಆಗುವ ಕುಡಿಯುವ ನೀರಿನ ಟ್ಯಾಂಕ್ ನಿಂದ ನೀರು ಎರಡು ದಿನಗಳ ವರೆಗೆ ಸರಬರಾಜು ಆಗುತ್ತಿಲ್ಲ.
