ಕ್ರೈಂ

ಗಾಂಜಾ ಸೇವಿಸಿದ ವ್ಯಕ್ತಿ ಅರೆಸ್ಟ್

ಮಿಳಘಟ್ಟದ ದೇವಸ್ಥಾನದ ಹಿಂಭಾಗದಲ್ಲಿ ಗಾಂಜಾ ಸೇವಿಸಿ ಕುಳಿತಿದ್ದ ವ್ಯಕ್ತಿ ಅರೆಸ್ಟ್

ಸುದ್ದಿಲೈವ್.ಕಾಂ/ಶಿವಮೊಗ್ಗ

ಗಾಂಜಾ ಗಮ್ಮತ್ತಿನಲ್ಲಿದ್ದ ವ್ಯಕ್ತಿಯನ್ನ ದೊಡ್ಡಪೇಟೆ ಪೊಲೀಸರು ಬಂದಿಸಿದ್ದಾರೆ. ಮಿಳಘಟ್ಟದಲ್ಲಿ ಗಾಂಜಾ ಸೇವಿಸಿ ಕುಳಿತಿದ್ದ ವ್ಯಕ್ತಿ ಯನ್ನು ವಶಕ್ಕೆ ಪಡೆಯಲಾಗಿದೆ.

ಮಿಳಘಟ್ಟದ ಬಸವಣ್ಣನ ದೇವಸ್ಥಾನದ ಹಿಂಭಾಗದಲ್ಲಿ ದಾದ್ ಪೀರ್ ಎಂಬ 20 ವರ್ಷದ ಯುವಕ ಗಾಂಜೇ ಸೇವಿಸಿ ಕುಳಿತಿದ್ದು ಈತನ ಬಳಿ ಹೋದ ಪೊಲೀಸರಿಗೆ ಆತನ ವರ್ತನೆ ಅನುಮಾನ ಸ್ಪದವಾಗಿ ಕಂಡುಬಂದಿದೆ.

ಆತನನ್ನ ಮೆಗ್ಗಾನ್ ಗೆ ಕರೆದುಕೊಂಡು ಹೋಗಿ ಗಾಂಜಾ ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷೆಯಲ್ಲಿ ಈತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಗಾಂಜಾ ಸೇವಿಸಿ‌ ಸಾರ್ವಜನಿಕರಿಗೆ ಉಪಟಳ ನೀಡುವ ಸಾಧ್ಯತೆ ಹಿನ್ನಲೆಯಲ್ಲಿ ಪೊಲೀಸರು ವಶಕ್ಕೆ ಪಡೆದು ಎಫ್ಐಆರ್‌ದಾಖಲಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button