ಕ್ರೈಂ
ಮಾಚೇನ ಹಳ್ಳಿಯಲ್ಲಿ ಹಿಟ್ ಅಂಡ್ ರನ್-ಪೊಲೀಸ್ ಅಧಿಕಾರಿಗೆ ಗಾಯ

ಸುದ್ದಿಲೈವ್.ಕಾಂ/ಶಿವಮೊಗ್ಗ
ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಪ್ರಕರಣ ನಡೆದಿದ್ದು ಪ್ರಕರಣದಲ್ಲಿ ಕೆಎಸ್ ಆರ್ ಪಿ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.
ಕೆಎಸ್ ಆರ್ ಪಿ ಬ್ಯಾಟಾಲಿಯನ್ ನ ಇನಾಮುಲ್ಲಾ ಹುಸೇನ್ ಎಂಬ ಪೊಲೀಸ್ ಅಧಿಕಾರಿಗೆ ದ್ವಿಚಕ್ರವಾಹನದಲ್ಲಿ ಬಂದ ವ್ಯಕ್ತಿ ಡಿಕ್ಕಿ ಪಡಿಸಿ ಪರಾರಿಯಾಗಿದ್ದಾನೆ.
ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಇನಾಮುಲ್ಲಾ ಹುಸೇನ್ ಗೆ ಕೈ ಮತ್ತು ಎಡಗಾಲಿಗೆ ರಕ್ತಗಾಯಗಳಾಗಿವೆ. ಅಜಾಗರೂಕತೆ ಮತ್ತು ಅತಿವೇಗದಿಂದ ಬಂದ ದ್ವಿಚಕ್ರ ವಾಹನ ಸವಾರ ಈ ಅಪಘಾತ ಉಂಟು ಮಾಡಿದ್ದಾನೆ.
ಮಾಚೇನಹಳ್ಳಿ ವೃತ್ತದ ಬಳಿ ಬಂದ ಪೊಲೀಸ್ ಅಧಿಕಾರಿ ಊಟ ಮಾಡಿ ವಾಪಾಸ್ ಮಾಚೇನಹಳ್ಳಿ ಕ್ವಾಟ್ರಸ್ ಗೆ ವಾಪಾಸ್ ಆಗುವ ವೇಳೆ ಅತಿವೇಗದಿಂದ ಬಂದ ವ್ಯಕ್ತಿ ಡಿಕ್ಕಿ ಉಂಟು ಮಾಡಿ ಪರಾರಿಯಾಗಿದ್ದಾನೆ.
