ಶಿಕ್ಷಣ

ಜಿಲ್ಲೆಯಲ್ಲಿ ಶೇ.84.60 ರಷ್ಟು ಫಲಿತಾಂಶ-87 ಶಾಲೆಯಲ್ಲಿ ಶೇ.100 ರಷ್ಟು ಫಲಿತಾಂಶ

ತೀರ್ಥಹಳ್ಳಿ ತಾಲೂಕು ಜಿಲ್ಲೆಯಲ್ಲಿ ಅತಿಹೆಚ್ಚು ಅಂಕಪಡೆದ ತಾಲೂಕು

ಸುದ್ದಿಲೈವ್.ಕಾಂ/ಶಿವಮೊಗ್ಗ

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಆನ್ ಲೈನ್ ಮೂಲಕ ಪ್ರಕಟವಾಗಿದ್ದು ಜಿಲ್ಲೆಯಲ್ಲಿ ಶೇ.84.60 ಫಲಿತಾಂಶ ದೊರೆತಿದ್ದು ಎ ಗ್ರೇಡ್ ಸ್ಥಾನ ದೊರೆತಿದೆ.

ಅದರಂತೆ ಜಿಲ್ಲೆಯಲ್ಲಿ ಒಟ್ಟು 23136 ಜನ‌ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 19574 ಜನ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಿಲ್ಲೆಯ 7 ತಾಲೂಕಿನ ಪ್ರಕಾರ ತೀರ್ಥಹಳ್ಳಿಯಲ್ಲಿ 1654 ವಿದ್ಯಾರ್ಥಿಗಳಲ್ಲಿ 1516 ಜನ ಮಕ್ಕಳು ತೇರ್ಗಡೆಯಾಗಿದ್ದು ಶೇ.91.66 ರಷ್ಟು ಫಲಿತಾಂಶ ಬಂದಿದೆ. ಜಿಲ್ಲೆಯಲ್ಲಿ ತೀರ್ಥಹಳ್ಳಿಯಲ್ಲಿ ಹೈಯಸ್ಟ್ ಅಂಕಪಡೆದ ತಾಲೂಕಾಗಿದೆ.

ಹೊಸನಗರದಲ್ಲಿ 1613 ಜನ ಮಕ್ಕಳಲ್ಲಿ 1436 ಮಕ್ಕಳು ತೇರ್ಗಡೆಯಾಗಿದ್ದು ಶೇ.89.03 ರಷ್ಟು ಫಲಿತಾಂಶ ಬಂದರೆ, ಸಾಗರದಲ್ಲಿ 3043 ಜನ ವಿದ್ಯಾರ್ಥಿಗಳಲ್ಲಿ 2657 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು,ಶೇ. 87.32 ರಷ್ಟು ಫಲಿತಾಂಶ ಬಂದಿದೆ. ಸೊರಬದಲ್ಲಿ 2592 ಮಕ್ಕಳಲ್ಲಿ 2188 ಜನ ಮಕ್ಕಳು ತೇರ್ಗಡೆಯಾಗಿದ್ದು ಶೇ. 84.41 ಮಕ್ಕಳು ಉತ್ತೀರ್ಣರಾಗಿದ್ದಾರೆ.

ಭದ್ರಾವತಿಯಲ್ಲಿ 4186 ಜನ ಮಕ್ಕಳಲ್ಲಿ 3497 ಜನ ತೇರ್ಗಡೆಯಾಗಿದ್ದು ಶೇ.83.54 ರಷ್ಟು ಫಲಿತಾಂಶ ಬಂದಿದೆ. ಶಿವಮೊಗ್ಗದಲ್ಲಿ 6671 ಜನ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು ಇದರಲ್ಲಿ 5501 ಜನ ಮಕ್ಕಳು ಉತ್ತೀರ್ಣರಾಗಿದ್ದಾರೆ. ಶೇ. 82.46 ಮಕ್ಕಳು ತೇರ್ಗಡೆಯಾಗಿದ್ದಾರೆ. ಶಿಕಾರಿಪುರದಲ್ಲಿ 3377 ಜನ ಮಕ್ಕಳಲ್ಲಿ 2779 ಮಕ್ಕಳಲ್ಲಿ ಶೇ.82.29 ಜನ ಮಕ್ಕಳು ತೇರ್ಗಡೆಯಾಗಿದ್ದಾರೆ.

ಅದರಂತೆ 625 ಅಂಕಕ್ಕೆ 625 ಅಂಕ ತೆಗೆದ ವಿದ್ಯಾರ್ಥಿಗಳಲ್ಲಿ ಜಿಲ್ಲೆಯಲ್ಲಿ 87 ಶಾಲೆಗಳು ಶೇ.100 ರಷ್ಟು ಫಲಿತಾಂಶ ತೆಗೆದಿದ್ದು ಇದರಲ್ಲಿ ಭದ್ರಾವತಿಯಲ್ಲಿ 18 ಶಾಲೆ ಶೇ100 ರಷ್ಟು ಅಂಕ ತೆಗೆದರೆ, ಹೊಸನಗರದಲ್ಲಿ 6 ಶಾಲೆ, ಸಾಗರದಲ್ಲಿ 12 ಶಾಲೆ, ಶಿಕಾರಿಪುರದಲ್ಲಿ 13 ಶಾಲೆ, ಶಿವಮೊಗ್ಗದಲ್ಲಿ17 ಶಾಲೆ, ಸೊರಬದಲ್ಲಿ 10 ಶಾಲೆ, ತೀರ್ಥಹಳ್ಳಿಯಲ್ಲಿ 11 ಶಾಲೆ ಶೇ.100 ರಷ್ಟು ಫಲಿತಾಂಶ

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button