
ಸುದ್ದಿಲೈವ್.ಕಾಂ/ಶಿವಮೊಗ್ಗ
ರಾತ್ರಿಯಿಂದ ಬಿಡದ ಮಳೆ ನಗರದಲ್ಲಿ ಅವಾಂತರಗಳನ್ನ ಸೃಷ್ಠಿಸಿದೆ. ನಗರದಲ್ಲಿಯೇ 15 ಮನೆಗಳಿಗೆ ನೀರಿ ನುಗ್ಗಿದ್ದು ಮನೆಯಿಂದ ಜರನ್ನ ಸುರಕ್ಷಿತ ಪ್ರದೇಶಗಳಿಗೆ ಅಗ್ನಿಶಾಮಕ ದಳದವರು ಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾತ್ರಿ ಇಡೀ ಬಿಡದಂತೆ ಸುರಿಯುತ್ತಿರುವ ಮಳೆಯಿಂದಾಗಿ, ಆರ್ ಎಂ ಎಲ್ ನಗರ, ಬುದ್ಧ ನಗರ, ಶರಾವತಿ ನಗರಗಳಲ್ಲಿ ಅಗ್ನಿಶಾಮಕದಳದವರು ಜನರನ್ನ ಸುರಕ್ಷಿತ ಜಾಗಕ್ಕೆ ಕರೆದುಕೊಂಡು ಹೋಗುತ್ತಿರುವ ದೃಶ್ಯಗಳು ಲಭ್ಯವಾಗಿದೆ.
ಶರಾವತಿ ನಗರದಲ್ಲಿ ರಮ್ಯ ಎಂಬುವರ ಮನೆಗೆ ನೀರು ನುಗ್ಗಿದ್ದು ನೆಲದ ಮಟ್ಟದಿಂದ ನಾಲ್ಕು ಅಡಿ ನೀರು ನಿಂತಿದೆ. ರಮ್ಯ ಹಾಗೂ ಅವರ ತಂದೆ ತಾಯಿಯವರನ್ನ ಅಗ್ನಿಶಾಮಕದಳದವರು ಎತ್ತಿಕೊಂಡು ಸುರಕ್ಷಿತಸ್ಥಳಕ್ಕೆ ಸಾಗಿಸಲಾಗಿದೆ.
ಆರ್ ಎಂಎಲ್ ನಗರದ ಮೊದಲನೇ ಮುಖ್ಯ ರಸ್ತೆ 4 ನೇ ತಿರುವಿನಲ್ಲಿ ಮೆಹಬೂಬ್ ಖಾನ್, ಭಾರತೀ ಸಭಾಭವನದ ಮುಖ್ಯ ರಸ್ತೆಯಲ್ಲಿರುವ ಮಾರುತಿಯವರ ಮನೆಗೆ ನೀರು ನುಗ್ಗಿದ್ದು, ಇವರನ್ನೂ ಸುರಕ್ಷತ ಸ್ಥಳಕ್ಕೆ ಸಾಗಿಸಲಾಗಿದೆ. ಗೋಪಾಳಗೌಡದ ಎ ಬ್ಲಾಕ್ ನಲ್ಲಿ ರವೀಶ್ ಎಂಬುವರ ಮನೆಗೆ ನೀರು ನುಗ್ಗಿದ್ದು ಇವರನ್ನೂ ರೋಪ್ ಮೂಲಕ ರಕ್ಷಿಸಲಾಗಿದೆ.
ಇದುವರೆಗೂ 50 ಕ್ಕೂ ಹೆಚ್ಚು ಜನರನ್ನ ಅಗ್ನಿಶಾಮಕದಳದ ಸಿಬ್ಬಂದಿಗಳು ಮತ್ತುಅಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ರವಾನಿಸಿರುವುದಾಗಿ ಮಾಹಿತಿಲಭ್ಯವಾಗಿದೆ.
