
ಸುದ್ದಿಲೈವ್.ಕಾಂ/ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಧಾರಕಾರ ಮಳೆಯಾಗುತ್ತಿದ್ದು 203.54 ಮಿಮಿ ಮಳೆಯಾಗಿದೆ. ತಾಲೂಕು ವಾರು ಮಳೆ ವರದಿ ಹೀಗಿದೆ.
ಜಿಲ್ಲೆಯ ಹೊಸನಗರ ತಾಲೂಕಿನಲ್ಲಿಯೇ ಅತಿ ಹೆಚ್ಚು ಮಳೆಯಾಗಿದೆ. 588.60 ಮಿಮಿ ಮಳೆಯಾಗಿದೆ. ಕಳೆದ ವರ್ಷ ಇಷ್ಟುಹೊತ್ತಿದೆ 548.20 ಮಳೆಯಾಗಿತ್ತು.
ಅದರಂತೆ ಶಿವಮೊಗ್ಗ ನಗರ ಮತ್ತು ತಾಲೂಕು ಸೇರಿ 146.80 ಮಿಮಿ ಮಳೆಯಾಗಿದ್ದರೆ. ಕಳೆದ ವರ್ಷ 110.80 ಮಿಮಿ ಮಳೆಯಾಗಿತ್ತು. ಭದ್ರಾವತಿಯಲ್ಲಿ 183. ಮಿಮಿನಷ್ಟು ಮಳೆಯಾದರೆ ಕಳೆದ ವರ್ಷ ಈ ತಾಲೂಕಿನಲ್ಲಿ 52.80 ಮಿಮಿ ನಷ್ಟು ಮಳೆಯಾಗಿತ್ತು.
ತೀರ್ಥಹಳ್ಳಿಯಲ್ಲಿ ಇಂದು 83.60 ಮಿಮಿ ಮಳೆಯಾದರೆ ಕಳೆದ ವರ್ಷ 178.50 ಮಿಮಿ ನಷ್ಟು ಮಳೆಯಾಗಿದೆ. ಸಾಗರದಲ್ಲಿ 144.40 ಮಿಮಿ ಮಳೆಯಾಗಿದ್ದು, ಕಳೆದ ವರ್ಷ 136 ಮಿಮಿ ಮಳೆಯಾಗಿದೆ. ಶಿಕಾರಿಪುರದಲ್ಲಿ 149.40 ಮಳೆಯಾಗಿದೆ
ಕಳೆದ ವರ್ಷ ಶಿಕಾರಿಪುರದಲ್ಲಿ 152.80 ಮಿಮಿ ಮಳೆಯಾಗಿತ್ತು. ಸೊರಬದಲ್ಲಿ ನಿನ್ಬೆ 129 ಮಿಮಿ ಮಳೆ ಅಗಿದ್ದರೆ, ಕಳೆದ ವರ್ಷ 74.20 ಮಿಮಿ ಮಳೆಯಾಗಿತ್ತು. ಹೊಸನಗರದಲ್ಲಿ ಇಂದು 588.60 ಮಿಮಿ ಮಳೆಯಾಗಿದ್ದು ಕಳೆದ ವರ್ಷ 548.20 ಮಳೆಯಾಗಿತ್ತು.
ಅದರಂತೆ ನದಿಗಳ ನೀರಿನ ಮಟ್ಟ ಹೆಚ್ಚಳವಾಗಿದೆ. ತುಂಗನದಿಯ ಗಾಜನೂರು ಅಣೆಕಟ್ಟಿನಲ್ಲಿ 588.24 ಅಡಿ ಗರಿಷ್ಟ ಮಟ್ಟದ ನೀರು ಸಂಗ್ರಹವಾದರೆ, 5000 ಕ್ಯೂಸೆಕ್ಸ್ ನೀರು ಒಳಹರಿವಾಗಿದೆ. 5200 ಕ್ಯೂಸೆಕ್ಸ್ ನೀರು ಹೊರಹರಿವಿದೆ.
186 ಅಡಿ ಎತ್ತರದ ಭದ್ರಾ ಅಣೆಕಟ್ಟಿಯಲ್ಲಿ 148.90 ಅಡಿ ಎತ್ತರ ನೀರು ಸಂಗ್ರಹವಾಗಿದೆ. ಇಲ್ಲಿ 5656 ಕ್ಯೂ ಸೆಕ್ಸ್ ನೀರು ಹರಿದು ಬಂದರೆ 193 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ. ಲಿಂಗನಮಕ್ಕಿ ಡ್ಯಾಂನಲ್ಲಿ 1819 ಅಡಿ ಎತ್ತರದ ಡ್ಯಾಂನಲ್ಲಿ 1763 ಅಡಿ ನೀರು ಸಂಗ್ರಹವಾಗಿದೆ.
