ಶಿವಮೊಗ್ಗದಲ್ಲಿ ಧಾರಕಾರ ಮಳೆಯಿಂದಾಗಿ ಕೆರೆಯಂತಾಯಿತು ನಗರ
ತಗ್ಗುಪ್ರದೇಶ,ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ರಸ್ತೆಗಳೆ ಕೆರಗಳಾದವು


ಸುದ್ದಿಲೈವ್.ಕಾಂ/ಶಿವಮೊಗ್ಗ
ಶಿವಮೊಗ್ಗ ನಗರದಲ್ಲಿ ರಾತ್ರಿಯಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಕೆಲ ತಗ್ಗುಪ್ರದೇಶದಲ್ಲಿ ರಸ್ತೆಗಳೆ ಕೆರೆಯಂತಾಗಿವೆ.
ಆರ್ ಎಂ ಎಲ್ ನಗರದ 9 ನೇ ತಿರುವಿನಲ್ಲಿರುವ ರಸ್ತೆಗಳು ಕೆರೆಯಂತಾಗಿ ಮನೆಗಳಿಗೆ ನೀರು ನುಗ್ಗುವ ಹಂತದಲ್ಲಿವೆ. ಅದರಂತೆ ಅಮೀರ್ಅಹ್ಮದ್ ಕಾಲೋನಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಮತ್ತು ಪಿಡಬ್ಲೂಡಿ ಕಾಮಗಾರಿಯ ನಡುವಿನ ಬಿಗ್ ಫೈಟ್ ನಿಂದಾಗಿ ನೀರು ಹರಿಯದೆ ಕೆರೆಯಂತಾಗಿ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗುವ ಅಪಾಯದ ಅಂಚಿನಲ್ಲಿವೆ. ಶಿವಮೊಗ್ಗದಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿರುವುದರಿಂದ ತಗ್ಗು ಪ್ರದೇಶದ ಒಂದಿಷ್ಟು ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ.

ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯ ಕರ್ಮಕಾಂಡದ ಹಿನ್ನಲೆಯಲ್ಲಿ ಬಾಕ್ಸ್ ಚರಂಡಿಯಲ್ಲಿ ಡ್ರೈನೇಜ್ ನೀರು ಹರಿಯದೆ ರಸ್ತೆಯ ಮೇಲೆ ಹರಿಯುವಂತಾಗಿದೆ. ಈ ಪರಿಸ್ಥಿತಿ ವಿನೋಬ ನಗರ 60 ಅಡಿ ರಸ್ತೆಯಲ್ಲಿ ನಿರ್ಮಾಣವಾಗಿದೆ.
ಅದರಂತೆ ನ್ಯೂ ಮಂಡ್ಲಿಯ ಸರ್ಕಾರಿ ಶಾಲೆಯ ಆವರಣ ಕೆರೆಯಂತಾಗಿ ಕೆರೆಯಾಗಿದೆ.ರಣಭೀಕರ ಮಳೆಯಿಂದಾಗಿ ರತ್ನಾಕರ ಲೇಔಟ್ ನ ಗಾರೆ ಚಾನೆಲ್ ತುಂಬಿದ್ದು ಜಲಪಾತದಂತೆ ಬೀಳುವ ದೃಶ್ಯ ಲಭ್ತವಾಗಿ.

ಅದರಂತೆ ಬಾಲರಾಜ್ ಅರಸ್ ನ ಡಬ್ಬಲ್ ರಸ್ತೆಯಲ್ಲಿ ಒಂದು ಮುಖ ರಸ್ತೆ ನೀರಿನಿಂದ ಆವರಿಸಿಕೊಂಡಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಅದರಂತೆ ವಿದ್ಯಾನಗರ, ಕಾಂಗ್ರೆಸ್ ಕಚೇರಿ ಮುಂಭಾಗದ ರಸ್ತೆಗಳು ಕೆರೆಯಂತಾಗಿವೆ.
