
ಸುದ್ದಿಲೈವ್.ಕಾಂ/ಶಿವಮೊಗ್ಗ
ಶಿವಮೊಗ್ಗದಲ್ಲಿ ಅಧಿಕ ಮಳೆ ಹಿನ್ನಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಆಗಿದ್ದು ಅದರಂತೆ ರಾತ್ರಿ ಇಡೀ ಮಳೆ ಸುರಿದಿದೆ. ರಾತ್ರಿ ಮತ್ತು ಬೆಳಗ್ಗಿನ ಜಾವ ಸುರಿದ ಅಧಿಕ ಮಳೆಯಿಂದಾಗೊ ಶಾಲೆಗಳಿಗೂ ರಜೆ ಘೋಷಿಸಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್, ಇಂದು ರಾತ್ರಿ ಮತ್ತು ಬೆಳಗ್ಗಿನ ಜಾವದಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನಾದ್ಯಂತ ರಜೆ ಘೋಷಿಸಿದ್ದಾರೆ.
ಮೇ.16 ರಂದು ರಾಜ್ಯಾದ್ಯಂತ ಬೇಸಿಗೆ ರಜೆ ಮುಗಿದು ಶಾಲೆಗಳು ಆರಂಭವಾಗಿದ್ದವು. ಅದರಂತೆ ಶಿವಮೊಗ್ಗದಲ್ಲಿಯೂ ಎಲ್ಲಾ ಶಾಲೆಗಳು ಆರಂಭಗೊಂಡಿತ್ತು. ಆದರೆ ಹವಮಾನದ ವೈಪರಿತ್ಯ ಹಾಗೂ ಅಧಿಕ ಮಳೆಯ ಹಿನ್ನಲೆಯಲ್ಲಿ ಇಂದು ರಜೆ ಘೋಷಿಸಲಾಗಿದೆ.
ನಗರದ ಮತ್ತು ತಾಲೂಕಿನಲ್ಲಿರುವ ಖಾಸಗಿ, ಅನುದಾನಿತ, ಅನುದಾನ ರಹಿತ ಹಾಗೂ ಸರ್ಕಾರದ ಶಾಲೆಗಳಿಗೆ ಸಧ್ಯಕ್ಕೆ ಒಂದು ದಿನದ ಮಟ್ಟಿಗೆ ಶಾಲೆಗಳು ರಜೆ ಘೋಷಿಸಿವೆ.
