ಊರೆಲ್ಲಾ ತಿರುಗಿ ಬಂದರೂ ಏನೂ ಆಗದ ಅಪಘಾತ, ಮನೆಯ ಮುಂದೆ ವೃದ್ಧೆಯ ಕಾಲು ಮುರಿತಕ್ಕೆ ಕಾರಣವಾಯಿತು!
ಚಾಲಕನ ಅಜಾಗರೂಕತೆಯಿಂದ ವೃದ್ಧೆಯ ಕಾಲು ಮುರಿತ

ಸುದ್ದಿಲೈವ್.ಕಾಂ/ಶಿವಮೊಗ್ಗ
ಬೇರೆ ಊರಿಗೆ ಹೋಗಿ ಸುರಕ್ಷಿತವಾಗಿ ಬಂದ ಕುಟುಂಬವೊಂದಕ್ಕೆ ಇನ್ಬೇನು ಮನೆ ಒಳಗೆ ಕಾಲಿಡಬೇಕು ಎನ್ನು ಅಷ್ಟರಲ್ಲಿ ಕಾರಿನ ಚಾಲಕ ದಿಡೀರಂತ ವೃದ್ಧೆಯ ಮೇಲೆ ಕಾರು ಹತ್ತಿಸಿರುವ ಘಟನೆ ಉಂಬ್ಳೇಬೈಲಿನಲ್ಲಿ ನಡೆದಿದೆ.
ಸಂಜೀವಿನಿ ಎಂಬ 85 ವರ್ಷದ ವೃದ್ಧೆ ಚಿಕ್ಕಮಗಳೂರು ಜಿಲ್ಲೆಯ ಮಡಬೂರು ಗ್ರಾಮದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಅಜ್ಜಿಯ ಮಗ ರಾಘವೇಂದ್ರ, ಸಂಜೀವ, ನವೀನ್ ಎಂಬುವರು ಕೆಎ14 ಪಿ 5206 ಕ್ರಮ ಸಂಖ್ಯೆಯ ಶಿಫ್ಟ್ ಕಾರಿನಲ್ಲಿ ತೆರಳಿದ್ದು ಮದುವೆ ಮುಗಿಸಿಕೊಂಡು ಶಿವಮೊಗ್ಗಕ್ಕೆ ವಾಪಾಸಾಗಿದ್ದರು.
ಶಿವಮೊಗ್ಗದ ಉಂಬ್ಳೇಬೈಲಿನಲ್ಲಿರುವ ಮನೆಗೆ ತಡರಾತ್ರಿ ಮನೆಗೆ ಬಂದಿದ್ದು, ಇನ್ನೇನು ಮನೆಯ ಗೇಟ್ ನಿಂದ ಕಾರಿನಿಂದ ಇಳಿದು ಮನೆಯ ಒಳಗೆ ಹೋಗ ಬೇಕು ಎನ್ನುವಷ್ಟರಲ್ಲಿ ಕಾರಿನ ಚಾಲಕ ಅಜಾಗರೂಕತೆಯಿಂದ ಸಂಜೀವಿನಿ ಅಮ್ಮನವರ ಕಾಲಿನಮೇಲೆ ಹತ್ತಿಸಿದ್ದಾನೆ.
ಕಾರನ್ನ ರಿವರ್ಸ್ ತೆಗೆದುಕೊಳ್ಳುವಾಗ ಸಂಜೀವಿನಿಯವರ ಎಡಗಾಲು, ಸೊಂಟ ಮತ್ತು ಪಾದಕ್ಕೆ ನೋವಾಗಿದೆ. ತಕ್ಷಣವೇ ಅದೇ ಕಾರಿನಲ್ಲಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿದೆ. ಅಜಾಗರೂಕತೆಯಿಂದ ಕಾರನ್ನ ಚಲಿಸಿದ ಚಾಲಕ ಅನಿಲ್ ವಿರುದ್ಧ ಸಂಜೀವಿನಿ ಅಮ್ಮನ ವಿರುದ್ಧ ತುಂಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
