ಶಿವಮೊಗದಲ್ಲಿ ರೆಡ್ ಅಲರ್ಟ್ ಘೋಷಣೆ-ಈ ದಿನ ಭಾರಿ ಮಳೆಯಾಗುವ ನಿರೀಕ್ಷೆ
ಮುಂದಿನ ಎರಡು ಗಂಟೆಯಲ್ಲಿ 6 ಸಿಎಂ ಮಳೆ ನಿರೀಕ್ಷೆ

ಸುದ್ದಿಲೈವ್.ಕಾಂ/ಶಿವಮೊಗ್ಗ
ಶಿವಮೊಗ್ಗದಲ್ಲಿ ಅಧಿಕ ಮಳೆ ಹಿನ್ನಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ನಿರೀಕ್ಷೆಯಂತೆ ಇಂದು ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚಿಸಿದೆ.
ರಾಜ್ಯದಲ್ಲಿ 7 ಜಿಲ್ಲೆಯನ್ನ ರೆಡ್ ಅಲರ್ಟ್ ಘೋಷಿಸಲಾಗಿದ್ದು ಶಿವಮೊಗ್ಗವೂ ಇದರಲ್ಲಿ ಒಂದಾಗಿದೆ. ಹವಮಾನ ಇಲಾಖೆಯ ಪ್ರಕಾರ ಇಂದು ಮಧ್ಯರಾತ್ರಿ 12 ಗಂಟೆಯಿಂದ ಶಿವಮೊಗ್ಗದ ಸುತ್ತಮುತ್ತ ಬೆಳಗಿನ ಜಾವ 3 ಗಂಟೆಯ ವರೆಗೆ ಭಾರಿ ಮಳೆಯಾಗಲಿದ್ದು 10 ಸಿಎಂ ಮಳೆಯಿಂದ 15 ಸೆಂಟಿ ಮೀಟರ್ ಮಳೆಯಾಗಲಿದೆ ಎಂದು ತಿಳಿಸಿದೆ. ಅರಂತೆ ಭಾರಿ ಮಳೆಯಾಗಿದೆ.
ಮುಂದಿನ ಮೂರು ಗಂಟೆಯಲ್ಲಿ ಅಂದರೆ ಇಂದು ಬೆಳಗ್ಗಿನ ಜಾವ 6 ರಿಂದ 9 ಗಂಟೆಯ ವರೆಗೂ 6 ಸೆಂಟಿ ಮೀಟರ್ ಮಳೆಯಾಗುವ ನಿರೀಕ್ಷೆ ಇದೆ. ಬೆಳಿಗ್ಗೆ 10 ರಿಂದ 11 ರವರೆಗೆ 5 ಮಿಲಿಮೀಟರ್ ಮಳೆಯಾಗುವ ನಿರೀಕ್ಷೆ ಇದೆ. ಮಧ್ಯಾಹ್ನ 12 ಗಂಟೆಯ ವರೆಗೆ 5 ಮಿಮಿ ಮಧ್ಯಾಹ್ನ 3 ರಿಂದ 4 ರವರೆಗೆ 10 ಮಿಮಿ ಸಂಜೆಯ 4 ರಿಂದ 5 ರವರೆಗೆ 10 ಮಿಮಿ ಮಳೆಯಾಗಲಿದೆ.
ರಾತ್ರಿ 7 ರಿಂದ 11 ಗಂಟೆಯವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ರಾತ್ರಿ 12 ರ ನಂತರ ಮಳೆಕೊಂಚ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚಿಸಿದೆ.
