ಕ್ರೈಂ

ನದಿಯ ದಡದಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆ ಕಲ್ಲೇಟು

ತುಂಗನದಿ ದಡದ ಮೇಲೆ ಆಟವಾಡುತ್ತಿದ್ದ ಬಾಲಕಿಗೆ ಕಲ್ಲೇಟು

ಸುದ್ದಿಲೈವ್.ಕಾಂ/ಶಿವಮೊಗ್ಗ

ಆಟವಾಡುತ್ತಿದ್ದ ಬಾಲಕಿಯ ಮೇಲೆ ವ್ಯಕ್ತಿಯೋರ್ವ ಕಲ್ಲಿನಿಂದ ಹಲ್ಲೆ ನಡೆಸಿದ್ದು ಆಕೆಗೆ‌ ಮಾತುಬಾರದಂತೆ ಆಗಿರುವ ಘಟನೆ ನಡೆದಿದೆ.

ರಾಜೀವ್ ಗಾಂಧಿ ಬಡಾವಣೆಯಲ್ಲಿ ಆಟವಾಡುತ್ತಿದ್ದ 10 ವರ್ಷದ ಆಯೇಷಾ ಸಿದ್ದಕಿ ಎಂಬ ಬಾಲಕಿಗೆ ಅದೇ ಬಡಾವಣೆಯ ಮಂಜ ಎಂಬ ವ್ಯಕ್ತಿ ಇಲ್ಲಿಗೆ ಬರಬೇಡ ಎಂದು ಕಲ್ಲು ತೂರಿದ್ದಾನೆ.

ಕಲ್ಲಿನ ಏಟಿಗೆ ಬಾಲಕಿ ಸಿದ್ದಕಿ ಗಾಯಗೊಂಡಿದ್ದು, ಮಾತು ಆಡದ ಸ್ಥಿತಿಗೆ ತಲುಪಿದ್ದಾಳೆ. ಮಗುವಿಗೆ ಕಣ್ಣಿಗೆ ಹೊಡೆತ ಬಿದ್ದಿದ್ದು, ಮೆಗ್ಗಾನ್ ಗೆ ದಾಖಲಿಸಲಾಗಿದೆ. ಮದ್ಯ ಸೇವಸಿ ಮಂಜು ಬಾಲಕಿಯ ಮೇಲೆ ಥಳಿಸಿರುವುದಾಗಿ ತಿಳಿದುಬಂದಿದೆ.

ತಾಯಿ ಮಂಜು ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.‌ ಸೇತುವೆಯ ದಡದ ಮೇಲೆ ಆಯೇಷ ಆಟವಾಡುವಾಗ ಈ ಘಟನೆ ನಡೆದಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button