ಉದ್ಯೋಗವಾರ್ತೆ

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ

ಮೆ.21 ಮತ್ತು 22 ರಂದು ಪರೀಕ್ಷೆ

ಸುದ್ದಿಲೈವ್. ಕಾಂ/ಶಿವಮೊಗ್ಗ

ಮೇ 21 ಮತ್ತು 22 ರಂದು ಜಿಲ್ಲೆಯಲ್ಲಿ ನಡೆಯಲಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ-2022 ರ ವೇಳಾಪಟ್ಟಿಯು ಈ ಕೆಳಕಂಡಂತೆ ಇದೆ.

ಮೇ 21 ರಂದು ಅಧಿವೇಶನ-1 ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ ಪೇಪರ್-1 ಸಾಮಾನ್ಯ ಅಧ್ಯಯನ(ಬಹು ಆಯ್ಕೆ ಪ್ರಶ್ನೆಗಳು.ಅಧಿವೇಶನ-2 ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ ಪೇಪರ್-2 ಆಂಗ್ಲ ಭಾಷಾ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ (2.30 ರಿಂದ 3.30 ರವರೆಗೆ ಬಹು ಆಯ್ಕೆ ಮತ್ತು 3.30 ರಿಂದ 5.30 ರವರೆಗೆ ವಿವರಣಾತ್ಮಕ ಪರೀಕ್ಷೆ).

ಮೇ 22 ರಂದು ಅಧಿವೇಶನ-3 ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಪೇಪರ್-2 ಗಣಿತ ಮತ್ತು ವಿಜ್ಞಾನ/ಜೀವ ವಿಜ್ಞಾನ/ಸಮಾಜ ಪಾಠಗಳು, ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ (10 ರಿಂದ 11 ರವರೆಗೆ ಬಹು ಆಯ್ಕೆ ಪರೀಕ್ಷೆ ಮತ್ತು 11 ರಿಂದ 01 ಗಂಟೆವರೆಗೆ ವಿವರಣಾತ್ಮಕ ಪರೀಕ್ಷೆ). ಅಧಿವೇಶನ-4 ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆವರೆಗೆ ಪೇಪರ್-3 (ವಿವರಣಾತ್ಮಕ ಪರೀಕ್ಷೆ) ಅರ್ಜಿ ಸಲ್ಲಿಸಿದ ಹುದ್ದೆಯ ಮಾಧ್ಯಮದ ಭಾಷಾ ಸಾಮಥ್ರ್ಯ ಪರೀಕ್ಷೆ ನಡೆಯಲಿದೆ.

ಅಭ್ಯರ್ಥಿಗಳು ಕೇಂದ್ರೀಕೃತ ದಾಖಲಾತಿ ಘಟಕದ ಅಂತರ್ಜಾಲ ತಾಣದಿಂದ ಪ್ರವೇಶ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು(ಆಡಳಿತ) ತಿಳಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button