ಸಾಗರದ ಗ್ರಾಮಾಂತರ ಭಾಗಗಳಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತ!
ಉಳ್ಳೂರು ಬಳಿ ವಿದ್ಯುತ್ ಕಂಬಕ್ಕೆ ಪಿಕಪ್ ವಾಹನ ಡಿಕ್ಕಿ-ಗೌರಿಕೆರೆಯ ಬಳಿ ಪರಸ್ಪರ ಕಾರು ಡಿಕ್ಕಿ

ಸುದ್ದಿಲೈವ್.ಕಾಂ/ಸಾಗರ
ಸಾಗರದ ಗ್ರಾಮಾಂತರ ಭಾಗಗಳಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತವಾಗಿದ್ದು ಎರಡು ಅಪಘಾತಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಆದರೆ ಸಣ್ಣಪುಟ್ಟ ಗಾಯಗಳೊಂದಿಗೆ ವಾಹನ ಚಾಲಕ ಮತ್ತು ಸವಾರರಿಗೆ ಉಂಟಾಗಿದೆ.
ಸಾಗರ ತಾಲೂಕು ಉಳ್ಳೂರು ಗ್ರಾಮದಲ್ಲಿ ಕೋಳಿಗಳನ್ನ ಸಾಗಿಸುತ್ತಿದ್ದ ಬೊಲೆರೋ ಪಿಕಪ್ ವಾಹನ ರಸ್ತೆಯ ಎಡಭಾದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕಬ್ಬಿಣದ ವಿದ್ಯುತ್ ಕಂಬ ಬೆಲೆರೋ ಹೊಡೆದ ಡಿಕ್ಕಿಗೆ ಬೆಂಡಾಗಿದೆ.
ಸಾಗರದಿಂದ ಶಿವಮೊಗ್ಗ ಕಡೆ ಹೊರಟಿದ್ದ ಬೊಲೆರೋ ಪಿಕಪ್ ವಾಹನ ಓವರ್ ಟೇಕ್ ಮಾಡುವಾಗ ಎದುರಿನಿಂದ ಬಂದ ವಾಹನವನ್ನ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ವಾಹನದ ಮುಂಭಾಗ ನುಜ್ಜುಗುಜ್ಜಾಗಿದೆ. ಅದೃಷ್ಣವಶಾತ್ ವಾಹನದಲ್ಲಿದ್ದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅದರಂತೆ ಸಾಗರ ತಾಲೂಕಿನ ಗೌರಿಕೆರೆಯಲ್ಲಿ ಕ್ವಿಡ್ ಮತ್ತು ಟಾಯೋಟಾ ಕಾರುಗಳೆರಡು ಪರಸ್ಪರ ಡಿಕ್ಕಿ ಹೊಡೆದಿವೆ. ಈ ಅಪಘಾತದಲ್ಲಿ ಯಾರಿಗೂ ಪ್ರಾಣಾಪಾಯ ಕಂಡುಬಂದಿಲ್ಲ. ಬದಲಿಗೆ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
