ಸ್ಥಳೀಯ ಸುದ್ದಿಗಳು

ಮುಂಗಾರು ಮಳೆಗೂ ಮುನ್ನ ಮಲೆನಾಡಿನಲ್ಲಿ ಆರಂಭವಾದ ಜಿಟಿ ಜಿಟಿ ಮಳೆ

IMG_20220518_114215

ಸುದ್ದಿಲೈವ್.ಕಾಂ/ಶಿವಮೊಗ್ಗ

ಮುಂಗಾರು ಮಳೆ ಆರಂಭಕ್ಕೂ ಮುನ್ನ ಜಿಲ್ಲೆಯಲ್ಲಿ ಇಂದಿನಿಂದ ಜಿಟಿ ಜಿಟಿ ಮಳೆ ಆರಂಭವಾಗಿದೆ. ಹೊಸನಗರದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು 19.80 ಮಿಮಿ ಮಳೆಯಾಗಿದೆ.

ಮೊನ್ನೆ ಸಂಜೆಯಿಂದ ನಿನ್ಬೆ ಬೆಳಗ್ಗಿನ ಜಾವದಿಂದ ಬೀಳಿತ್ತಿರುವ ಜಿಟಿ ಹೊಡೆದ ಮಳೆ ನಿನ್ನೆ ಹಗಲೆಲ್ಲ ಕೊಂಚ ವಿರಾಮ ನೀಡಿತ್ತು. ಆದರೆ‌ ರಾತ್ರಿಯಿಂದ ಮಳೆ ಜಿಟಿ ಜಿಟಿ ಮಳೆಯಾಗುತ್ತಿದೆ.

ಇಷ್ಟೆಲ್ಲಾ ಮಳೆಯಾದರೂ ಮೇ ತಿಂಗಳ 18 ದಿನಗಳಲ್ಲಿ ಬಿದ್ದ ಮಳೆಗಳಲ್ಲಿ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಈಗ ಸೈಕ್ಲೋನ್ ಮಳೆ ಆರಂಭವಾಗಿದ್ದು ವಾಡಿಕೆ ಮಳೆಯಾಗದ ತಾಲೂಕುಗಳಲ್ಲಿ ಹೆಚ್ಚಿನ ಮಳೆ ಸುರಿಯುವ ಸಾಧ್ಯತೆ ಹೆಚ್ಚಿದೆ.

ಅದರಂತೆ ಶಿವಮೊಗ್ಗ ತಾಲೂಕಿನಲ್ಲಿ ಈ ತಿಂಗಳ 18 ದಿನಗಳಲ್ಲಿ 92 ಮಿಮಿ ನಷ್ಟು ವಾಡಿಕೆ ಮಳೆಯಾಗಬೇಕಿತ್ತು. ಆದರೆ 62.20 ಮಿಮಿ ಮಳೆಯಾಗಿದೆ. ಭದ್ರಾವತಿ ತಾಲೂಕಿನಲ್ಲಿ 89 ಮಿಮಿ‌ಮಳೆಯಾಗ ಬೇಕಿತ್ತು. ಆದರೆ 96.60 ಮಿಮಿ ಮಳೆಯಾಗಿದೆ. ತೀರ್ಥಹಳ್ಳಿಯಲ್ಲಿ ವಾಡಿಕೆ ಮಳೆ 100 ಮಿಮಿ ಇದ್ದರೆ 43 ಮಿಮಿ ಮಳೆಯಾಗಿದೆ.

ಸಾಗರದಲ್ಲಿ 90 ಮಿಮಿ ವಾಡಿಕೆ ಮಳೆಯಾಗಬೇಕಿತ್ತು. 18 ದಿನಗಳಲ್ಲಿ 86.80 ಮಿಮಿ ಮಳೆಯಾಗಿದೆ. ಶಿಕಾರಿಪುರದಲ್ಲಿ ವಾಡಿಕೆ ಮಳೆ 99 ಮಿಮಿ ಇದ್ದರೆ ಇದುವರೆಗೂ 69.40 ಮಿಮಿ ಮಳೆಯಾಗಿದೆ. ಸೊರಬದಲ್ಲಿ ವಾಡಿಕೆ ಮಳೆ 80 ಮಿಮಿ ಇದ್ದರೆ 76.70 ಮಿಮಿ ಮಳೆಯಾಗಿದೆ. ಹೊಸನಗರದಲ್ಲಿ ವಾಡಿಕೆ ಮಳೆ 110 ಮಿಮಿ ಇದ್ದರೆ 3347 ಮಿಮಿ ಮಳೆಯಾಗಿದೆ.

ಒಟ್ಟಾರೆ ಜಿಲ್ಲೆಯ ಸರಾಸರಿ ವಾಡಿಕೆ ಮಳೆಗಿಂತ ಹೆಚ್ಚಿಗೆ ಆಗಿದೆ. ಜಿಲ್ಲೆಯ 94.29 ಮಿಮಿ ವಾಡಿಕೆ ಮಳೆಯಾಗಬೇಕಿತ್ತು. 111.67 ಮಿಮಿ ಆಗಿದೆ. ಇಂದು ಬೆಳಗ್ಗೆಯಿಂದ ಸುರಿದ ಜಿಡಿ ಜಿಡಿ‌ಮಳೆ ಶಿವಮೊಗ್ಗ ತಾಲೂಕಿನಲ್ಲಿ 7.60 ಮಿಮಿ ಮಳೆಯಾದರೆ ಭದ್ರಾವತಿಯಲ್ಲಿ 14.60 ಮಿಮಿ, ತೀರ್ಥಹಳ್ಳಿ 9.20 ಮಿಮಿ, ಸಾಗರ 1.20 ಮಿಮಿ, ಶಿಕಾರಿಪುರ 4 ಮಿಮಿ, ಸೊರಬ 2.30 ಮಿಮಿ, ಹೊಸನಗರದಲ್ಲಿ 19.80 ಮಿಮಿ, ಮಳೆಯಾಗಿದ್ದು ಜಿಲ್ಲೆಯಾದ್ಯಂತ ಇಂದು 8.39 ಮಳೆಯಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button