ಡಯಾಬಿಟಿಕ್ ಕಾಯಿಲೆಗೆ ಡಯಬಿಟಿಸ್ ರಿವರ್ಸಲ್ ಚಿಕಿತ್ಸೆ

ಸುದ್ದಿಲೈವ್.ಕಾಂ/ಶಿವಮೊಗ್ಗ
ಸಕ್ಕರೆ ಕಾಯಿಲೆಯನ್ನ ಖಾಯಂ ಆಗಿ ನಿಯಂತ್ರಿಸಲು ಡಯಾಬಿಟಿಕ್ ರಿವರ್ಸಲ್ ಚಿಕಿತ್ಸೆ ನೀಡಿ ಕಡಿಮೆಗೊಳಿಸುವ ಪ್ರಯತ್ನವಾಗಿದೆ. ಈ ನಿಟ್ಟಿನಲ್ಲಿ ಡಯಾಬಿಟಿಕ್ ರಿವರ್ಸಲ್ ಎಂಬ ಚಿಕಿತ್ಸೆಯನ್ನ ಸಾಗರದ ಐಲೆಟ್ಸ್ ಡಯಾಬಿಟಿಕ್ ಹಾಸ್ಪಿಟಲ್ ನಲ್ಲಿ ಆರಂಭಿಸಲಾಗುತ್ತಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಲೆಟ್ಸ್ ಡಯಾಬಿಟಿಕ್ ಹಾಸ್ಪಿಟಲ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಪ್ರೀತಂ ಯಾವುದೇ ಔಷಧವಿಲ್ಲದೆ ಜೀವನ ಸಾಗಿಸುವುದೇ ಡಯಾಬಿಟಿಕ್ ರಿವರ್ಸಲ್ ಆಗಿದೆ. ಈ ಪದ್ಧತಿ ಅನುಸರಿಸುವ ಮೂಲಕ 3 ತಿಂಗಳಲ್ಲಿ ಬಹುತೇಕರಿಗೆ ಮಧುಮೇಹ ಸಂಪೂರ್ಣ ಗುಣವಾಗಿಸುವ ಪ್ರಯತ್ನವಾಗಿದೆ.
20 ರಿಂದ 30 ದಿನಗಳಲ್ಲಿ ಮಧುಮೇಹ ಕಡಿಮೆಗೊಳ್ಳುತ್ತದೆ. ಮೆಡಿಕೇಷನ್ ನಿಲ್ಲಿಸಿದ ನಂತರ ಅಗತ್ಯ ಫುಡ್ ಕಿಟ್ ಮೂಲಕ ಆಹಾರ ಸೇವನೆ ಮಾಡಬೇಕಿದೆ ಎಂದರು.
ಸಾಗರ ರಸ್ತೆಯಲ್ಲಿರುವ ಐಲೆಟ್ಸ್ ಡಯಾಬಿಟಿಕ್ ಹಾಸ್ಪಿಟಲ್ ಹಾಗೂ ಲೈವ್ ಆಲ್ಟ್ ಲೈಫ್ ಸಂಸ್ಥೆಯ ಸಹಯೋಗದಲ್ಲಿ ಡಯಾಬಿಟಿಕ್ ರಿವರ್ಸಲ್ ಪದ್ಧತಿ ಪರಿಚಯಿಸುತ್ತಿದೆ. ಕಾರ್ಬೋ ಹೈಡ್ರೇಟ್ ಆಹಾರ ಸೇವನೆಯಿಂದ ಮತ್ತು ಜೀವನ ಶೈಲಿಯಿಂದಾಗಿ ಡಯಾಬಿಟಿಕ್ 30 ವರ್ಷದಲ್ಲೇ ಕಾಣಿಸಿಕೊಳ್ಳುತ್ತದೆ.
ಡಯಾಬಿಟಿಕ್ ರಿವರ್ಸಲ್ ಕುರಿತು ಮೇ.19 ರಂದು ವಿಶೇಷ ಮಾಹಿತಿ ಶಿಬಿರ ಐಲೆಟ್ಸ್ ಡಯಾಬಿಟಿಕ್ ಹಾಸ್ಪಿಟಲ್ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 7975074740 ಎಂದು ತಿಳಿಸಿದರು.
ಫುಡ್ ಕಿಟ್ ನಲ್ಲಿ ಸಕ್ಕರೆ ಇಲ್ಲದ ವಸ್ತು ಬಳಕೆ, ಧಾನ್ಯ ಬಳಕೆ ಇಲ್ಲ. ಪ್ರತಿದಿನ ಸೇವನೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಬಾದಾಮಿ, ಶೇಂಗ ಬಳಸಿ ಆಹಾರ ಬಳಕೆಯಾಗುತ್ತದೆ. ಈ ಸಕ್ಕರೆ ಕಾಯಿಲೆ ನಿವಾರಣೆಗೆ ಎರಡು ಬಗೆಯಲ್ಲಿ ನಿಯಂತ್ರಿಸಲಾಗುತ್ತದೆ.ಮೊದಲು ಡಯಾಬಿಟಿಕ್ ರಿವರ್ಸ್ ನಲ್ಲಿ ಮಾತ್ರೆ,ಯೋಗ, ಮೆಡಿಟೇಷನ್ ಮಾಡಲಾಗುತ್ತದೆ. ನಂತರ ಆಹಾರದ ಮೂಲಕ ನಿಯಂತ್ರಿಸುವಲಾಗುವುದು ಎಂದರು
