ಕೂಲಿ ಕೊಡಪ್ಪ ಎಂದವನಿಗೆ ಚಾಕುವಿನಿಂದ ಇರಿತ
ಶಿರಾಳಕೊಪ್ಪದಲ್ಲಿ ಕೂಲಿ ಕಾರ್ಮಿಕನ ಮೇಲೆ ಗುತ್ತಿಗೆದಾರನ ದರ್ಪ

ಸುದ್ದಿಲೈವ್.ಕಾಂ/ಶಿರಾಳಕೊಪ್ಪ
ಕೂಲಿ ಕಾರ್ಮಿಕನೋರ್ವ ಆತನ ಕೂಲಿ ಕೇಳಿದಕ್ಕೆ ಗುತ್ತಿಗೆದಾರನೊಬ್ಬ ಚಾಕುವಿನಿಂದ ಇರಿದ ಘಟನೆ ಶಿರಾಳಕೊಪ್ಪದಲ್ಲಿ ನಡೆದಿದೆ.
ಜಿಯಾ ಉಲ್ಲಾ ಎಂಬ 24 ವರ್ಷದ ಯುವಕ ಕೂಲಿ ಕೇಳಿದ್ದಕ್ಕೆ ಹಣ ನೀಡದ ಶಿರಾಳಕೊಪ್ಪದ ದಾಸರ ಕಾಲೋನಿಯ ಹಯತ್ ಸಾಬ್ ಎಂಬಾತ ಚಾಕುವಿನಿಂದ ರಕ್ತ ಗಾಯಗೊಳಿಸಿದ್ದಾನೆ. ಕಳುವು ಪ್ರಕರಣದಲ್ಲಿ ಆರೋಪಿಯಾಗಿ ನಂತರ ಸಮಾಜದಲ್ಲಿ ಉತ್ತಮವಾಗಿ ಬಾಳಲು ಹೊರಟ ಯುವಕ ಜಿಯಾ ಉಲ್ಲಾನಿಗೆ ಕೊನೆಗೆ ಸಿಕ್ಕಿದ್ದು ಚಾಕುವಿನ ಇರಿತ!
19 ವರ್ಷವಿದ್ದಾಗ ಕಳವುಪ್ರಕರಣದಲ್ಲಿ ಆರೋಪಿಯಾಗಿದ್ದು, ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಜಿಯಾ ಉಲ್ಲಾ ನಂತರದ ದಿನಗಳಲ್ಲಿ ಸುಧಾರಿಸಿದ್ದ. ಅಪರಾಧಿ ಬದುಕಿನಿಂದ ಹೊರಬಂದು ಕೂಲಿನಾಲಿಯಾಗಿ ಬದಕಲು ತೀರ್ಮಾನಿಸಿದ್ದ ಜಿಯಾ ಉಲ್ಲಾನಿಗೆ ಹಯಾತ್ ಸಾಬ್ ಪರಿಚಯವಾಗ್ತಾನೆ.
ಹಯಾತ್ ಸಾಬ್ ಮಾವಿನ ತೋಟ ಗುತ್ತಿಗೆ ಹಿಡಿದ್ರೆ ಫಸಲು ಕೀಳೋದು ಜಿಯಾಉಲ್ಲನೇ, ಮೊನ್ನೆ ಮಾವಿನ ಕಾಯಿ ಕೀಳಲು ಜಿಯಾ ಉಲ್ಲಾನಿಗೆ 2500/- ರೂ. ಕೂಲಿ ಬಾಕಿ ಉಳಿಸಿಕೊಂಡ ಹಯಾತ್ ನಿಗೆ ಸರಿಯಾದ ಸಮಯಕ್ಕೆ ಹಣ ಬೇಕು ಎಂದ ಜಿಯಾ ಉಲ್ಲಾ ದುಂಬಾಲು ಬೀಳ್ತಾನೆ. ಸಂತೆ ಇದೆ ಸಾಹೇಬ್ರೇ ರೊಕ್ಕಕೊಡಿ ಎಂದಿದ್ದಕ್ಕೆ ಹಯಾತ್ ಮರುದಿನ ಮನೆಗೆ ಬಾ ಎಂದಿದ್ದಾನೆ.
ಮರುದಿನ ಮನೆಗೆ ಹೋದ ಜಿಯಾಉಲ್ಲಾನಿಗೆ ಅಣ್ಣಪ್ಪನ ಅಂಗಡಿ ಬಳಿ ಬಾ ಹಣಕೊಡ್ತೀನಿ ಎಂದು ಹೇಳಿದ್ದಾನೆ. ಹಯಾತ್ ಬರ್ತಾನೆ ಸಂತೆ ಮಾಡಬಹುದು ಎಂದು ಕಾದು ಕುಳಿತುಕೊಂಡಿದ್ದ ಜಿಯಾ ಉಲ್ಲಾನಿಗೆ ಅಣ್ಣಪ್ಪನಅಂಗಡಿ ಬಳಿ ಬಂದ ಹಯಾತ್ ಯಾವಹಣವೂ ನಿನಗೆ ಕೊಡುವುದು ನನ್ನಿಂದ ಬಾಕಿ ಉಳಿದಿಲ್ಲವೆಂದು ಮುಖಕ್ಕೆ ಹೊಡೆದಂತೆ ಹೇಳಿಬಿಡ್ತಾನೆ.
ನೀನು ಬದುಕಿದ್ದರೇನೆ ತಾನೆ ಹಣಕೇಳುವುದು, ಬಾಕಿ ಉಳಿಯುವುದು ಎಂದವನೆ ಅಂಗಡಿಯಲ್ಲಿದ್ದ ಚಾಕುವನ್ನ ತೆಗೆದು ಜಿಯಾಉಲ್ಲಾನ ಮೇಲೆ ಬೀಸಿಬಿಡ್ತಾನೆ. ರಕ್ತಗಾಯಗೊಂಡ ಜಿಯಾಉಲ್ಲಾ ಮತ್ತೊಮ್ಮೆ ಚಾಕುವಿನಿಂದ ಇರಿಯಲು ಮುಂದಾಗ್ತಾನೆ. ಅದೇ ವೇಳೆ ಜಿಯಾ ಉಲ್ಲಾ ತಪ್ಪಿಸಿಕೊಳ್ತಾನೆ.
ಅಣ್ಣಪ್ಪನ ಅಂಗಡಿ ಬಳಿ ನೆರೆದಿದ್ದ ಜನ ನಂತರ ಜಗಳ ಬಿಡಿಸಿ ಜಿಯಾಉಲ್ಲಾನನ್ನ ಆಸ್ಪತ್ರೆಗೆ ದಾಖಲಿಸುತ್ತಾರೆ. ಪ್ರಕರಣ ಶಿರಾಳಕೊಪ್ಪದಲ್ಲಿ ದೂರು ದಾಖಲಾಗಿದೆ.
