
ಸುದ್ದಿಲೈವ್.ಕಾಂ/ಶಿವಮೊಗ್ಗ
ಹೊಂಡಾಡ್ರೀಮ್ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದಾಗಸ್ಕಿಡ್ ಆಗಿ ಬಿದ್ದ ಸವಾರ ಸಾವನ್ನಪ್ಪಿರುವ ಘಟನೆ ನಿನ್ನೆ ಸಂಜೆ ಭದ್ರಾವತಿಯ ಬೈಪಾಸ್ ರಸ್ತೆಯಲ್ಲಿರುವ ಭದ್ರಾನದಿ ಸೇತುವೆ ಮೇಲೆ ನಡೆದಿದೆ.
ನಿನ್ನೆ ಸಂಜೆ ನಿದಿಗೆ ಗ್ರಾಮದಿಂದ ಪ್ರದೀಪ್ ಎಂಬುವರು ದ್ವಿಚಕ್ರ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಗೆಜ್ಜೆಗೊಂಡನಹಳ್ಳಿಗೆ 30 ಸಾವಿರ ರೂ. ಹಣವನ್ನ ತೆಗೆದುಕೊಂಡು ಹೋಗುವಾಗ ಭದ್ರನದಿ ಬೈಪಾಸ್ ಸೇತುವೆ ಮೇಲೆ ಬೈಕ್ ಸ್ಕಿಡ್ ಆಗಿ ಬಿದ್ದದ್ದಾರೆ.
ನಿದಿಗೆಯಲ್ಲಿ ಸ್ನೇಹಿಯ ಹರೀಶ್ ನ್ನ ಭೇಟಿ ಮಾಡಿ ಪತ್ನಿಯ ಒಡವೆಯನ್ನ ನಿದಿಗೆ ಸೊಸೈಟಿಯಲ್ಲಿ ಅಡವಿಟ್ಟು 30 ಸಾವಿರ ರೂ ಹಣ ತೆಗೆದುಕೊಂಡು ಗೆಜ್ಜೆಗೊಂಡನಹಳ್ಳಿಯಲ್ಲಿರುವ ಮನೆಗೆ ವಾಪಾಸಾಗುವಾಗ ಸ್ಕಿಡ್ ಆಗಿ ಬಿದ್ದಾರೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರದೀಪನನ್ನ ಭದ್ರಾವತಿ ಆಸ್ಪತ್ರೆಗೆ ದಾಖಲಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದ ಪರಿಣಾಮ ನಿನ್ನೆ ಸಂಜೆ ಪ್ರದೀಪ್ ಮೃತಪಟ್ಟಿದ್ದಾರೆ.
