ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿಲೈವ್. ಕಾಂ/ಶಿವಮೊಗ್ಗ
ನಿರುದ್ಯೋಗಿ ಹೆಣ್ಣುಮಕ್ಕಳಿಗೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಾಸ್ಪಿಟಲ್ ಡ್ಯೂಟಿ ಅಸಿಸ್ಟೆಂಟ್ & ಹೋಮ್ ಕೇರ್ ನರ್ಸಸ್ ಈ ಜಾಬ್ರೋಲ್ನಲ್ಲಿ ಜಿಲ್ಲೆಯ ಆರೋಗ್ಯ ತರಬೇತಿ ಕೇಂದ್ರ ಶಿವಮೊಗ್ಗ(ಡಿಟಿಸಿ) ಇಲ್ಲಿ ಸೆಂಟರ್ ಫಾರ್ ಹೆಲ್ತ್ ಆಂಡ್ ಡೆವೆಲಪ್ಮೆಂಟ್ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಇವರ ಸಹಯೋಗದೊಂದಿಗೆ 01 ತಿಂಗಳ ಉಚಿತ ತರಬೇತಿ ನೀಡಲಾಗುವುದು.
ಅಭ್ಯರ್ಥಿಯು 18 ರಿಂದ 42 ವಯೋಮಿತಿಯೊಳಗಿದ್ದು 8ನೇ ತರಗತಿ ಉತ್ತೀರ್ಣರಾಗಿರಬೇಕು. ತರಬೇತಿ ಮುಗಿದ ನಂತರ ಸಂಸ್ಥೆಯ ವತಿಯಿಂದ ಆಸ್ಪತ್ರೆಗಳಲ್ಲಿ ಉದ್ಯೋಗ ದೊರಕಿಸಿಕೊಡಲಾಗುವುದು. ಆಸಕ್ತರು ಮೇ 25 ರೊಳಗೆ https://forms.gle/3ESfUmFEmBKW4Mk77 ಲಿಂಕ್ ಮುಖಾಂತರ ಅಥವಾ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಕಚೇರಿ ನಂ.303/528, ಶಾಂತಲ ಟವರ್ಸ್, 2ನೇ ಮಹಡಿ, 3ನೇ ಅಡ್ಡ ರಸ್ತೆ, ನೆಹರು ರಸ್ತೆ, ಗಾರ್ಡನ್ ಏರಿಯಾ, ಶಿವಮೊಗ್ಗ(ದೂ.ಸಂ: 08182-255294, 9019485688, 8217478207) ಈ ವಿಳಾಸಕ್ಕೆ ಖುದ್ದಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಹೆಚ್.ಎಂ ಸುರೇಶ್ ತಿಳಿಸಿದ್ದಾರೆ.
