ತಾಲ್ಲೂಕು ಸುದ್ದಿ

ನಿನ್ನೆಯ ಮಳೆಗೆ ತಾಲೂಕಿನ ಕೆಲ ಗ್ರಾಮಗಳಲ್ಲಿ ಹಾನಿ!

ಸತತ ಮಳೆಗೆ ಮೂರು ಮನೆಗಳು ಭಾಗಶಃ

ಸುದ್ದಿಲೈವ್.ಕಾಂ/ಶಿವಮೊಗ್ಗ

ಶಿವಮೊಗ್ಗದಲ್ಲಿ ನಿನ್ನೆ ಸಂಜೆ ಮತ್ತು ರಾತ್ರಿ ಮಳೆಗೆ ಕೆಲವಡೆ ಅವಾಂತರ ಸೃಷ್ಠಿಸಿದೆ. ಚಿಕ್ಕಮರಡಿ ಗ್ರಾಮದಲ್ಲಿ ಅಡಿಕೆ ತೋಟ ಮತ್ತು ವಿದ್ಯುತ್ ಕಂಬಗಳು ಉರುಳಿರುವ ಘಟನೆ ವರದಿಯಾಗಿದೆ.

ನಿನ್ನೆ ಬೀಸಿದ ಗಾಳಿ ಮಳೆಯಿಂದಾಗಿ ಚಿಕ್ಕಮರಡಿ ಗ್ರಾಮದ ಶಿವಲಿಂಗಪ್ಪ ಕ್ಯಾಂಪ್ ನಲ್ಲಿ ಜಯಣ್ಣ‌ಗೌಡರ ತೋಟದ 10 ಅಡಿಕೆ ಮರಗಳು ಧರೆಗೆ ಉರುಳಿವೆ. ಒಂದು ತೆಂಗಿನ ಮರ ಸಹ ನೆಲಕ್ಕೆ ಬಾಗಿವೆ. ಗ್ರಾಮದ ವಿದ್ಯುತ್ ಕಂಬಗಳು ಧರೆಗುರುಳಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಅದರಂತೆ ಮಳೆಯಿಂದಾಗಿ ತಾಲೂಕಿನ ಬಸವನಗಂಗೂರಿನಲ್ಲಿ 2 ಮನೆಗಳು ಮತ್ತು ಅಗಸವಳ್ಳಿಯಲ್ಲಿ 1 ಮನೆಯು  ಭಾಗಶಃ  ಹಾನಿಯಾಗಿರುವುದು ತಿಳಿದು ಬಂದಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button