ವಾರಾಣಾಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿರುವ ಆದೇಶವನ್ನು ಮರುಪರಿಶೀಲಿಸಲು ಎಸ್ ಡಿ ಪಿ ಐ ಆಗ್ರಹ
ಸರ್ವೆಗೆ ಹೈಕೋರ್ಟ್ ತಡೆ ನೀಡುವಂತೆ ಮನವಿ

ಸುದ್ದಿಲೈವ್. ಕಾಂ/ಶಿವಮೊಗ್ಗ
ಜ್ಞಾನವಾಪಿ ಮಸೀದಿಯ ಸರ್ವೆಗೆ ವಾರಾಣಾಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿರುವ ಆದೇಶವನ್ನು ಮರುಪರಿಶೀಲನೆ ಮಾಡಬೇಕು ಹಾಗೂ ಉಚ್ಚ ನ್ಯಾಯಾಲಯ ಸರ್ವೆಗೆ ತಡೆ ನೀಡಬೇಕು ಎಂದು ಆಗ್ರಹಿಸಿ ಎಸ್ ಡಿಪಿಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಎಸ್ ಡಿಪಿಐ ಕಾರ್ಯಕರ್ತರು ಕೇಂದ್ರದ ಬಿಜೆಪಿ
ಸರ್ಕಾರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಎಸ್ ಡಿ ಪಿಐ ರಾಜ್ಯ ಸಮಿತಿ ಸಂಚಾಲಕ ಸಲೀಂ ಖಾನ್ ವಾರಾಣಾಸಿಯ ಐತಿಹಾಸಿಕ ಜ್ಞಾನವಾಪಿ
ಮಸೀದಿಯ ವಿಡಿಯೋ ಚಿತ್ರೀಕರಣ ಮಾಡಲು ಕೋರ್ಟ್ ಆದೇಶ ನೀಡಿದೆ.ಮಸೀದಿಯಲ್ಲಿರುವ
ಕಾರಂಜಿಯನ್ನು ಮನುವಾದಿ ಮನಸ್ಥಿತಿಯ ಕೆಲವು ಅಧಿಕಾರಿಗಳು ಶಿವಲಿಂಗ ಎಂದು ಬಿಂಬಿಸಿ
ಕೋರ್ಟ್ ಅನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಮಾಡಿದ್ದಾರೆ.
ಅದನ್ನು ಆಧಾರವಾಗಿಟ್ಟುಕೊಂಡು ಅಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಆ ಸ್ಥಳವನ್ನು ಸೀಲ್ ಮಾಡಲು
ಆದೇಶ ನೀಡಿದೆ. 1991 ರ ಆರಾಧನಾ ಸ್ಥಳಗಳ ಕಾಯ್ದೆಗಳ ಪ್ರಕಾರ ದೇಶದ ಸ್ವಾತಂತ್ರ್ಯ ಬಂದ ನಂತರ ಯಾವ ಪೂಜ್ಯಸ್ಥಳಗಳು, ಆರಾಧನಾ ಸ್ಥಳಗಳು ಯಾವ ರೀತಿಯಲ್ಲಿವೆಯೋ ಅದೇ ರೀತಿ ಯಥಾಸ್ಥಿತಿಯನ್ನು ಕಾಯ್ದಕೊಳ್ಳಬೇಕು ಎಂದು ಸ್ಪಷ್ಟ ಉಲ್ಲೇಖವಿದೆ.
ಅದನ್ನು ಕಡೆಗಣಿಸಿ ಅಲ್ಲಿನ ಮ್ಯಾಜಿಸ್ಟ್ರೇಟ್ ವಿಚಿತ್ರವಾದ ಆದೇಶ ನೀಡಿದ್ದಾರೆ.ಇದನ್ನು ಖಂಡಿಸಿ ಇಂದು
ಪ್ರತಿಭಟನೆ ಮಾಡುತ್ತಿದ್ದೇವೆ.ಆದೇಶವನ್ನು ಈ ಕೂಡಲೇ ಮ್ಯಾಜಿಸ್ಟ್ರೇಟ್ ಮರುಪರಿಶೀಲನೆ
ಮಾಡಬೇಕು ಹಾಗೂ ಅಲ್ಲಿನ ಹೈಕೋರ್ಟ್ ಆದೇಶಕ್ಕೆ ತಡೆ ನೀಡಬೇಕು ಎಂದರು.
