ಆಲ್ಲೊಳ ವೃತ್ತದಲ್ಲಿರುವ ಮೆಸ್ಕಾಂ ಕಚೇರಿ ಎದುರು ದಸಸಂ ಅಂಬೇಡ್ಕರ್ ವಾದ ಸಂಘಟನೆಯಿಂದ ದಿಡೀರ್ ಪ್ರತಿಭಟನೆ
ಜಿಲ್ಲಾಧಿಕಾರಿಗಳಿಗೆ ವಿದ್ಯುತ್ ಬಿಲ್ ನ್ನ ವಾಟ್ಸಪ್ ಮೂಲಕ ರವಾನೆ-ಸ್ಥಳಕ್ಕೆ ದೌಡಾಯಿಸಿದ ಮೆಸ್ಕಾಂಅಧಿಕಾರಿಗಳು

ಸುದ್ದಿಲೈವ್.ಕಾಂ/ಶಿವಮೊಗ್ಗ
ಆಲ್ಕೊಳ ವೃತ್ತದಲ್ಲಿರುವ ಮೆಸ್ಕಾಂ ಕಚೇರಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಜಿಲ್ಲಾಧ್ಯಕ್ಷ ಹಾಲೇಶಪ್ಪನವರ ನೇತೃತ್ವದಲ್ಲಿ ನಿನ್ನೆ ರಾತ್ರಿ ದಿಡೀರನೇ ಪ್ರತಿಭಟನೆ ನಡೆಸಿ ಮಲ್ಲಿಗೇನ ಹಳ್ಳಿಯ ಅಂಬೇಡ್ಕರ್ ನಗರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದನ್ನ ಖಂಡಿಸಿದರು.
ಕಚೇರಿಯ ಎದುರು ನಿವಾಸಿಗಳೊಂದಿಗೆ ಪ್ರತಿಭಟನೆ ನಡೆಸಿದ ಸಂಘಟನೆ ತಾತ್ಕಾಲಿಕವಾಗಿ ಒಂದು ಲೈನ್ ಎಳೆದು ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಈ ವಿದ್ಯುತ್ ಸಂಪರ್ಕ ಒಂದು ಯುನಿಟ್ ಗೆ 11 ರೂ.ಗೂ ಹೆಚ್ಚು ದರ ನಿಗದಿ ಮಾಡಲಾಗಿದೆ. ಮಾಮೂಲಿಯಾಗಿ ಇದು ಪ್ರತಿ ಮನೆಗೆ 3.55 ರೂ. ಯುನಿಟ್ ಗೆ ಕಟ್ಟಲಾಗುತ್ತದೆ.
ಆದರೆ ಈ ವಿದ್ಯುತ್ ಸಂಪರ್ಕ ತಾತ್ಕಾಲಿಕವಾಗಿರುವುದರಿಂದ ಅಂದಿನ ಡಿಸಿಗಳೇ ವಿದ್ಯುತ್ ಬಿಲ್ ನ 1/3 ನಷ್ಟು ಹಣಕಟ್ಟಲು ಸೂಚಿಸಿದರು. ಅದಕ್ಕಿಂತ ಹೆಚ್ಚಿನ ಹಣ ಕಟ್ಟಿದರೂ ಪೂರ್ಣ ಹಣ ಕಟ್ಟಲು ಮೆಸ್ಕಾಂ ಒತ್ತಾಯಿಸಿ ವಿದ್ಯುತ್ ಕಡಿತಗೊಳಿಸಿದ್ದರಿಂದ ಪ್ರತಿಭಟನೆ ನಡೆಸಲಾಗಿದೆ. ಎಲ್ಲಾ ಮನೆಗಳ ವಿದ್ಯುತ್ ಬಿಲ್ ಗಳು 30 ಸಾವಿರ ರೂ. ಬಂದಿದ್ದು ಅದರಲ್ಲಿ 10 ಸಾವಿರ ರೂ. ಹಣ ಕಟ್ಟಬೇಕಿತ್ತು. ಈ ಹಣವನ್ನ ನಿವಾಸಿಗಳು ಕಟ್ಟಿದ್ದಾರೆ.
ಆದರೆ ಇಲ್ಲಿನ ನಿವಾಸಿಗಳು 20 ಸಾವಿರ ಹಣ ಕಟ್ಟಿದ್ದಾರೆ. ಆದರೂ ಸಹ ವಿದ್ಯುತ್ ಕಡಿತಗೊಳಿಸಲಾಗಿತ್ತು. ನಂತರ ಸಂಘಟನೆಯ ಅಧ್ಯಕ್ಷ ಹಾಲೇಶಪ್ಪ ವಿದ್ಯುತ್ ಬಿಲ್ ಮತ್ತು ತುಂಬಿರುವ ಹಣದ ರಸೀದಿಯನ್ನ ಜಿಲ್ಲಾದಿಕಾರಿಗಳಿಗೆ ವಾಟ್ಸಪ್ ಮಾಡಿದ್ದರ ಪರಿಣಾಮವಾಗಿ ಸ್ಥಳಕ್ಕೆ ಬಂದ ಮೆಸ್ಕಾಂ ಎಇಇ ರವೀಂದ್ರ ಎಇ ವೀರೇಶ್ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಪ್ರಕರಣ ಸುಖಾಂತ್ಯ ಗೊಂಡಿತು.
