ಶಿಕ್ಷಣ

ಸಾಗರದಲ್ಲಿ ವಿದ್ಯಾರ್ಥಿಗಳಿಂದ 26 ವರ್ಷಗಳ ನಂತರ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ಮತ್ತು ಸ್ನೇಹ ಸಮ್ಮಿಲನ

ಸುದ್ದಿಲೈವ್. ಕಾಂ/ಸಾಗರ

ಸಾಗರದ ಅನ್ಮೋಲ್ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಸಾಗರದ ವಿನೋಬ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1995-96 ನೇ ಸಾಲಿನ 7 ನೇ ತರಗತಿಯನ್ನು ಮುಗಿಸಿ ನಿರ್ಗಮಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು 26 ವರ್ಷಗಳ ಸ್ನೇಹದ ಬಾಂದವ್ಯವನ್ನು ಸೇರಿಸಿಕೊಂಡು ಗುರು ಶಿಷ್ಯರ ಸಮಾಗಮ – ಸ್ನೇಹ ಸಮ್ಮಿಲನ – 2022 – ಗುರು ವಂದನಾ ಕಾರ್ಯಕ್ರಮ ನಡೆಸಲಾಯಿತು.

ಬಾಲ್ಯ ಜೀವನದ ವಿದ್ಯೆಯನ್ನು ಕಲಿಸಿಕೊಟ್ಟಂತಹ ಗುರುಗಳಿಗೆ ಗೌರವಯುತವಾಗಿ ಸನ್ಮಾನಿಸಿ,ಆಶೀರ್ವಾದ ಪಡೆಯುವ ಹೆಬ್ಬಯಕೆಯಿಂದ ಬೇರೆ ಬೇರೆ ಊರುಗಳಲ್ಲಿ ಈಗ ನಿವೃತ್ತಿ ಹೊಂದಿ ಸುಖಕರವಾದ ಜೀವನವನ್ನು ನಡೆಸುತ್ತಿರುವ ಹೆಮ್ಮೆಯ ಗುರುಗಳನ್ನ ಆಹ್ವಾನಿಸಲಾಗಿತ್ತು.

ಸರ್ವಮಂಗಳಮ್ಮ ಟೀಚರ್,ರಾಜಮ್ಮ ಟೀಚರ್,ಲೀಲಾವತಿ ಟೀಚರ್,ಚೆನ್ನಪ್ಪ ಮಾಸ್ಟರ್,ಸುಮಿತ್ರಮ್ಮ ಟೀಚರ್,ನರ್ಮದಾ ಟೀಚರ್,ಜಾಹೀರಾ ಬೀ ಟೀಚರ್,ಕೃಷ್ಣಮೂರ್ತಿ ಮಾಸ್ಟರ್,ಬೀರಣ್ಣ ಕವರಿ ಮಾಸ್ಟರ್ ರವರುಗಳು ಬಹಳ ಸಂತೋಷದಿಂದ ಆಗಮಿಸಿ ವಿದ್ಯಾರ್ಥಿಗಳಿಂದ ಗೌರವವನ್ನು ಪ್ರೀತಿಯಿಂದ ಸ್ವೀಕರಿಸಿ ಹರ್ಷವನ್ನು ವ್ಯಕ್ತಪಡಿಸಿದರು.

ಈ ಒಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದ ಎಲ್ಲಾ ಗುರುಗಳು ಈ ದಿನ ನಮಗೆ ಸಿಕ್ಕ ಒಂದು ಸುವರ್ಣಾವಕಾಶ ನೀವುಗಳು ನಮಗೆ ತೋರಿಸುತ್ತಿರುವ ಈ ಪ್ರೀತಿಯ ಗೌರವ ನಮ್ಮನ್ನ ಕಟ್ಟಿ ಹಾಕಿದೆ,ನಮ್ಮ ಹಳೇ ನೆನಪುಗಳು ಮತ್ತೆ ಕಣ್ಣಮುಂದೆ ಬಂದಹಾಗಿದೆ ಎಂದು ಭಾವುಕರಾಗಿ ನೆರೆದಿದ್ದಂತಹ ವಿದ್ಯಾರ್ಥಿಗಳನ್ನೂ ಸಹ ಭಾವುಕರನ್ನಾಗಿಸಿ ಇದು ಎಲ್ಲರಿಗೂ ಸ್ಪೂರ್ತಿ ದಾಯಕವಾಗಿರಲಿ ಎಂದು ಆಶೀರ್ವಾದಿಸಿ ಈ ದಿನ ನಮ್ಮ ಬದುಕಿನ ನೆನಪಿನ ಪುಟವಾಗಿರುತ್ತದೆ ಎಂದು ತೀಳಿಸಿದರು.

ಈ‌ ಒಂದು ಕಾರ್ಯಕ್ರಮ ವನ್ನು ಬೆಂಗಳೂರಿನ ಕುಮಾರನ್ಸ್ ಕಾಲೇಜಿನಲ್ಲಿ ಫಿಜಿಕ್ಸ್ ಲೆಚ್ಚರ್
ಆಗಿ ಕಾರ್ಯ ನಿರ್ವಹಿಸುತ್ತಿರುವ ಗೆಳತಿ ತೇಜಸ್ವಿನಿಯವರು ನಿರೂಪಣೆಯನ್ನು ನಡೆಸಿಕೊಟ್ಟರೆ, ಈ ಕಾರ್ಯಕ್ರಮಕ್ಕೆ ಪರಿಶ್ರಮಿಸಿದ ಸಾಗರದ ಗೆಳೆಯ ಗೆಳತಿಯರಾದ ಸರಿತಾತಪಸ್ವಿ,ಸದಾಶಿವ,ಲಕ್ಷ್ಮೀನಾರಾಯಣ,ಶಿಲ್ಪಾಕಾಶಿ,ಹರ್ಷ,ಗಣೇಶ,ರಂಗನಾಥ,ಕೌಶಿಕ್ ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರ್ಯನಿರ್ವಹಿಸಿದ ಗೆಳಯ ಗೆಳತಿಯರಿಗೆ ಶಿವಮೊಗ್ಗದಲ್ಲಿ ವಾಸವಾಗಿರುವ ರಾಜೇಶ್ ಪಿ,ಸಾದಿಕ್,ಆನಂದರವರು ಅಭಿನಂದಿಸಿದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button