ಕಾನೂನು ಬದ್ಧವಾಗಿಯೇ ದೇವಸ್ಥಾನವನ್ನ ಪಡೆಯುತ್ತೇವೆ-ಈಶ್ವರಪ್ಪ
ಅಹಲ್ಯ ಬಾಯಿ ಹೋಳ್ಕರ್ ನ ಸಂತತಿ ಆಗಿ ಔರಂಗಜೇಬ್ ನ ಸಂತತಿಯಾಗಬೇಡಿ-ಈಶ್ವರಪ್ಪ ಕಿವಿಮಾತು

ಸುದ್ದಿಲೈವ್.ಕಾಂ/ಶಿವಮೊಗ್ಗ
ಕಾನೂನು ಬದ್ಧವಾಗಿಯೇ ಅಯೋಧ್ಯವನ್ನ ಪಡೆದಂತೆ ಮಥುರಾ ಮತ್ತು ಕಾಶಿಯನ್ನ ಪಡೆಯುತ್ತೇವೆ ಎಂದು ಮಾಜಿ ಸಚಿವ ಈಶ್ವರಪ್ಪ ಗುಡುಗಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಶಿ ವಿಶ್ವನಾಥ ನ ದೇವಸ್ಥಾನವನ್ನ ರಾಣಿ ಅಹಲ್ಯ ಬಾಯಿ ಹೋಳ್ಕರ್ ಪುನರ್ಜೀವನ ನೀಡಿದ್ದು, ಈ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿಯೂ ಸಹ ಹಿಂದೆ ಮಂದಿರವಾಗಿತ್ತು ಎಂಬ ಮಾಹಿತಿ ಇದೆ. ಹಾಗಾಗಿ ಇದನ್ನ ಹಿಂದೂ ಸಮಾಜಕ್ಕೆ ಬಿಟ್ಟುಕೊಡಬೇಕೆಂದು ಕೋರಿದರು.
ಈ ದೇಶಕ್ಕೆ ಜಾಗೃತಿ ಮೂಡಿಸಿದ ಕೆಲಸ ಅಹಲ್ಯ ಬಾಯಿ ಹೋಳ್ಕರ್ ಅವರ ಪ್ರಯತ್ನವಾಗಿತ್ತು. ಈ ಹೋರಾಟಕ್ಕೆ ಹಿಂದೂಗಳು ಒಂದಾಗಬೇಕು. ಈ ದೇವಸ್ಥಾನದ ಸರ್ವೆಗೆ ಹಿಂದೆ ಅಡ್ಡಿ ಆತಂಕವಾಗಿತ್ತು. ಕೋರ್ಟ್ ಮೇ. ೧೭ರ ಒಳಗೆ ಮಸೀದಿ ಗೋಡೆಯ ಮೇಲಿನ ಚಿತ್ರೀಕರಣ ಮಾಡಲು ಆದೇಶಿಸಿತ್ತು.
ಅಡ್ಡಿಪಡಿಸಿದಾಗ ಎಫ್ ಐಆರ್ಹಾಕಲು ಸೂಚಿಸಿದೆ. ಈಮಧ್ಯೆ ಮಹರಾಷ್ಟ್ರದಲ್ಲಿ ಔರಂಗಜೇಬ್ ನ ಸಮಾದಿಗೆ ಓವೈಸಿ ಹೋಗಿ ನಮಾಜ್ ಮಾಡಿದ್ದಾರೆ. ಮುಸ್ಲೀಂರಿಗೆ ಮೆಕ್ಕಾ ಮದೀನ ಹೇಗೆ ಪವಿತ್ರಸ್ಥಳವೋ ಹಾಗೆ ಹಿಂದೂಗಳಿಗೆ ಕಾಶಿ, ಮಥುರ, ಅಯೋಧ್ಯ ಪವಿತ್ರ ಸ್ಥಳವಾಗಿದೆ ಎಂದರು.
ಬಾವಿಯಲ್ಲಿ 350 ವರ್ಷ ಈಶ್ವರನ ವಿಗ್ರಹವಿತ್ತು. ವಿಗ್ರಹದ ಮೇಲಿನ ನೀರನ್ನ ತೀರ್ಥವೆಂದು ಹಿಂದೂಗಳು ಭಾವಿಸಿ ಸ್ವೀಕರಿಸುತ್ತಾರೆ. ಆದರೆ ಈ ನೀರನ್ನ ಕಾಲು ತೊಳೆಯಲು ಈಶ್ವರನ ನೀರು ಬಳಸಿದ್ದಾರೆ. ಒಬ್ಬರು ಇದನ್ನ ವಿರೋಧಿಸಿಲ್ಲ. ಇದು ನೋವಿನ ಸಂಗತಿ ಎಂದರು.
ಕೋಮು ಸೌಹರ್ಧ ಎಂದರೆ ರಾಮ ಕೃಷ್ಣ ಮತ್ತು ಶಿವನ ಮಂದಿರ ಒಡೆದು ಹಾಕಿ ಮಸೀದಿ ಕಟ್ಟುವುದು ಸೌಹಾರ್ಧ ವಲ್ಲ. 36 ಸಾವಿರ ಮಂದಿರ ಒಡೆದು ಮಸೀದಿ ಕಟ್ಟಲಾಗಿದೆ. ಹುಬ್ಬಳ್ಳಿಯಲ್ಲಿ ಮೆಕ್ಕಾದಮೇಲೆ ಓಂ ನಮ ಶಿವಾಯ ಎಂದು ಚಿತ್ರ ಬಿಟ್ಟಿದ್ದಕ್ಕೆ ಗಲಾಟೆ ಆಗುತ್ತೆ. ಹಾಗಾದರೆ ಹಿಂದೂ ಸಮಾಜ ಏನುಮಾಡಬೇಕು ಎಂದು ಗುಡುಗಿದರು.
ಒಂದು ಮಸೀದಿಯನ್ನ ಬಿಟ್ಟುಕೊಟ್ಟಿದ್ದೇವೆ. ಇನ್ನೊಂದು ಮಸೀದಿ ಕಳೆದುಕೊಳ್ಳಲು ಸಿದ್ದವಿಲ್ಲವೆಂದು ಒವೈಸಿ ಹೇಳಿದ್ದಾರೆ. ಯಾರು ಈ ಓವೈಸಿ ಬಿಟ್ಟುಕೊಡೋದು. ನಾವು ಮೂರು ಪವಿತ್ರ ಸ್ಥಳವನ್ನ ವಾಪಾಸ್ ಪಡೆಯುತ್ತೇವೆ. ಇದನ್ನ ಅವಮಾನಿಸೋದು ಬಯಸಿದರೆ ಹಿಂದೂಗಳು ಸಹಿಸೋಲ್ಲ ಎಂದು ಗುಡುಗಿದರು.
ಕೆಲ ಮುಸ್ಲೀಂ ಸಂಃಟನೆಗಳು ಜ್ಣಾನವ್ಯಾಪಿ ಮಸೀದಿಯಲ್ಲಿ ದೊರೆತ ಶಿವಲಿಂಗವನ್ನ ಕಾರಂಜಿ ಎಂದು ಹೇಳುತ್ತಿದ್ದಾರೆ. ಆಂಜನೇಯ, ಗಣಪತಿ, ಶೃಂಗಾರ ಗೌರಿ ಚಿತ್ರಗಳಿವೆ. ಮುಸ್ಲೀಂ ಮಾನಸಿಕ ಸಿದ್ಧತೆಯನ್ನ ಸರಿಪಡಿಸಿಕೊಳ್ಳಬೇಕು. ಈ ವಿಷಯವನ್ನ ಕಾಂಗ್ರೆಸ್ ವಿರೋಧಿಸಲು ಧೈರ್ಯವಿಲ್ಲ ಎಂದು ಕುಟುಕಿದರು.
ಲಿಂಗದ ರಕ್ಷಣೆಗೆ ಸರ್ಪವಿತ್ತು ಎನ್ನಲಾಗುತ್ತಿದೆ. ಕಾಶಿ ಮತ್ತು ಮಥುರವನ್ನ ಹಿಂದೂಸಮಾಜಕ್ಕೆ ಒಪ್ಪಿಸಬೇಕು. ಕೋರ್ಟ್ ಆದೇಶವಿದ್ದರೂ ಸಹ ಕೋರ್ಟ್ತೀರ್ಪು ವಿರುದ್ಧ ಮಾತನಾಡಲಾಗುತ್ತಿದೆ. ಹಿಜಾಬ್ ಕುರಿತು ನ್ಯಾಯಾಲಯದ ಆದೇಶ ಬಂದರೂ ಬಂದ್ ಕರೆಯಲಾಗುತ್ತದೆ. ಇದನ್ನ ಕಾಂಗ್ರೆಸ್ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಾರೆ ಬಿಡಿ ಎಂದು ಹೇಳುತ್ತದೆ. ಈ ಮಾನಸಿತೆ ಬದಲಾಗಬೇಕು ಎಂದು ಹೇಳಿದರು.
ಹಿಂದೂ ಸಮಾಜದ ಆಸ್ತಿ ಕಾಶಿ ಮತ್ತುಮಥುರ ಕಾಂಗ್ರೆಸ್ ಹೇಳಬೇಕಿತ್ತು. ಕೋಮು ಸೌಹರ್ಧ ಕೇವಲ ಹಿಂದುಗಳಿಗೆ ಹೇಳಲು ಬರಬೇಡಿ, ಓರಂಗ ಜೇಬ್ ನ ಸಂತತರಾಗಬೇಡಿ. ಸರ್ವೇ ಮಾಡಿ ಕಾನೂನು ಬದ್ಧವಾಗಿಯೇ ಮಥುರಾ ಮತ್ತುಕಾಶಿ ಯನ್ನ ತೆಗೆದುಕೊಳ್ಳುತ್ತೇವೆ. ಶಾಂತಿಯಿಂದ ಇರೋದು ಹಿಂದೂಗಳ ದೌರ್ಭಲ್ಯವಲ್ಲ. ಹಿಂದೂ ಪರ ಯಾರಾದರೂ ಮಾತನಾಡಿದ್ದಾರಾ? ಎಸ್ ಡಿಪಿಐ ಮಸೀದಿಯನ್ನ ಮಸೀದಿಯಸಗಿರಲು ಬಿಡಿ ಎಂಬುದನ್ನ ಹೇಳದು ಬಿಟ್ಟರೆ ಮತ್ತೆ ಬೇರೆ ಏನು ಹೇಳು ಸಾದ್ಯವೆಂದು ಪ್ರಶ್ನಿಸಿದರು.
ಬಾಬಾಬುಡನ್ ಗಿರಿಯಲ್ಲಿ ಮಾಂಸ ಹಾರಿ ಸೇವನೆ ಆಗಿದೆ. ದತ್ತ ಪೀಠದಲ್ಲಿ ಹೋಗುವಂತಿಲ್ಲವೆಂದರೂ ಕಾಂಗ್ರೆಸ್ ಒಂದು ಮಾತನಾಡೊಲ್ಲ. ಬಜರಂಗ ದಳದವರಿಗೆ ತರಬೇತಿ ನೀಡಿರುವುದು ಯಾವ ಅಕ್ರಮ ಸುಮ್ಮನೆ ಹಿಂದೂ ಸಮಾಜವನ್ನ ಟೀಕಿಸುವುದೇ ಕಾಂಗ್ರೆಸ್ ಗುರಿಯಾಗಿದೆ. ಹೆಗಡೇವಾರ್ ಅವರು ಸ್ಥಾಪಿಸಿದ ಆರ್ ಎಸ್ ಎಸ್ ನ್ನ ವಿರೋಧಿಸು ಬರದಲ್ಲಿ ಅವರ ಉತ್ತಮ ಸಂದೇಶದ ಭಾಷಣವನ್ನೂ ಟೀಕಿಸುತ್ತಾರೆ ಎಂದು ಹೇಳಿದರು.
