ತಾಲ್ಲೂಕು ಸುದ್ದಿ
Trending

ಸೊರಬದಲ್ಲಿ ದಲಿತ ಸಂಘರ್ಷ ಸಮಿತಿ ಹೆಸರು ದುರ್ಬಳಕೆಯ ವಿರುದ್ಧ ಎಫ್ಐಆರ್

6 ಜನರ ವಿರುದ್ಧ ಠಾಣೆ ಮೆಟ್ಟಿಲೇರಿದ ಪ್ರಕರಣ

ಸುದ್ದಿಲೈವ್.ಕಾಂ/ಸೊರಬ

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೆಸರನ್ನ ಅಧಿಕೃತವಾಗಿಯೂ ಅನಧಿಕೃತವಾಗಿಯೂ ಬಳಕೆಯಾಗಬಾರದು ಎಂದು ಭದ್ರಾವತಿ ನ್ಯಾಯಾಲಯದ ಆದೇಶವಿದ್ದರೂ ಸೊರಬದ 6 ಜನರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಬಸವರಾಜ್ ಹೊಸವಿ ಸೊರಬ ಠಾಣೆ ಮೆಟ್ಟಿಲೇರಿದ್ದಾರೆ.

ಕೋರ್ಟ್ ಮೆಟ್ಟಿಲೇರಲು ಕಾರಣವೇನು?

ಬಸವರಾಜ್ ಹೊಸವಿ ಈ ಹಿಂದೆ ಪ್ರೊ.ಕೃಷ್ಣಪ್ಪರವರ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸೊರಬ ತಾಲೂಕಿನ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದು ಸಮಿತಿಯ ಲೆಕ್ಕ ಪತ್ರ, ನೋಂದಣಿಯನ್ನ ಮಾಡಿಸುವಂತೆ ನೋಂದಣಿ ಅಧಿಕಾರಿಗಳಿಗೆ ಈ ಹಿಂದೆ‌ಕೊಟ್ಟಿತ್ತು.

ಅದರಂತೆ ಸಮಿತಿಯ ಇನ್ನೊಂದು ಬಣದ‌ ಮುಖ್ಯಸ್ಥರಾದ ಗುರುಮೂರ್ತಿಯವರು ನೋಂದಣಿಗೆ ಅರ್ಜಿ ಹಾಕಿದ್ರು, ಆದರೆ  ನೋಂದಣಿ ಅಧಿಕಾರಿಗಳು ಗೊಂದಲಕ್ಕೆ ಬಿದ್ದು ಯಾರು ನ್ಯಾಯಾಲಯದಲ್ಲಿ ಅರ್ಜಿ ಹಾಕಿ ಸಮಿತಿಯನ್ನ ತಮ್ನದಾಗಿಸಿಕೊಂಡು ಬರುತ್ತಾರೋ ಅವರಿಗೆ ಸಮಿತಿಯ ನೋಂದಣಿ, ಲೆಕ್ಕಪತ್ರ ಎಲ್ಲಾವನ್ನೂ ನೀಡುವುದಾಗಿ ತಿಳಿಸಿದ್ದರು.

ಪರ್ಮನೆಂಟ್ ಇಂಜೆಕ್ಷನ್ ಆದೇಶ

ಅದರಂತೆ ನೋಂದಣಿ ಅಧಿಕಾರಿಳಿಂದ ಹಿಂಬರಹ ಪಡೆದ ಗುರುಮೂರ್ತಿ ಭದ್ರಾವತಿಯ ಮಾನ್ಯ 4 ನೇ‌ಹೆಚ್ಚುವರಿಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಅದರಂತೆ 2021 ಮಾರ್ಚ್ 3 ರಂದು ತೀರ್ಪು ನೀಡಿದ ನ್ಯಾಯಾಲಯ ಗುರುಮೂರ್ತಿ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಯಾರಿಗೂ ಅಧಿಕೃತವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೆಸರನ್ನೂ ಮತ್ತು ನೋಂದಣಿ ಸಂಖ್ಯೆಯನ್ನ ಬಳಸದಂತೆ ತೀರ್ಪು ನೀಡಿದೆ.

ನ್ಯಾಯಾಲಯದ ಆದೇಶದ ಉಲ್ಲಂಘಿಸಿ ಸಮಿತಿ ಹೆಸರು ದುರ್ಬಳಕೆ

ಆದರೂ ಸಹ ಸೊರಬದ ಅಂಬೇಡ್ಕರ್ ಬೀದಿ ನಿವಾಸಿಗಳಾದ ಗುರುರಾಜ್ ಮತ್ತು ಚೆನ್ನಯ್ಯ ಎಂಬುವರು ಭದ್ರಾವತಿ ಕೋರ್ಟ್ ನ ಆದೇಶವನ್ನ ಉಲ್ಲಂಘಿಸಿ ಸಮಿತಿ ಹೆಸರು ದರ್ಬಳಕೆ ಮಾಡಿಕೊಂಡು ಅಂಬೇಡ್ಕರ್ ಜಯಂತಿ ಮತ್ತು ಬಸವ ಜಯಂತಿಯನ್ನ ಆಚರಿಸಿದ್ದಾರೆ ಎಂದು ಬಸವರಾಜ್ ಹೊಸವಿ ದೂರಿನಲ್ಲಿ ಆರೋಪಿಸಿದ್ದಾರೆ.

ಇವರ ಜೊತೆಗೆ, ಶಕುವಳ್ಳಿಯ ಮಹೇಶ್ ಬಿನ್ ಫಕೀರಪ್ಪ, ನಾಗರಾಜ್ ಬಿನ್ ಗುತ್ಯಪ್ಪ ಹುರಳಿ, ಹರೀಶ್ ಚಿಟ್ಟೂರು ಎಂಬರು ಸಹ ಸಮಿತಿ ಹೆಸರನ್ನ ದುರ್ಬಳಕೆ ಮಾಡಿಕೊಂಡಿರುವುದಾಗಿ ಆರೋಪಿಸಿದ್ದಾರೆ.

ಸಮಿತಿ ಹೆಸರಿನಲ್ಲಿ ಸುದ್ದಿಗೋಷ್ಠಿ

ಶಿವಮೊಗ್ಗದ ಹರ್ಷ ಸತ್ತಾಗಲೂ ಸಹ ಮಾ. 9 ರಂದು ಸೊರಬ ಪ್ರವಾಸಿ ಮಂದಿರದಲ್ಲಿ ಸಮಿತಿಯ ಹೆಸರಿನಲ್ಲಿ ಪತ್ರಿಕಾಗೋಷ್ಠಿಯನ್ನ ನಡೆಸಲಾಗಿದೆ. ಅಲ್ಲದೆ ಸಮಿತಿಯಲ್ಲಿ ಇಲ್ಲದ ಶಿಕಾರಿಪುರ ರವಿಕುಮಾರ್, ಸಮಿತಿಯ ಸಂಚಾಲಕನೆಂದು ಹೇಳಿಕೊಂಡು ಶಿಕಾರಿಪುರದಿಂದ ಸೊರಬಕ್ಕೆ ಸಮಿತಯ ದುರ್ಬಳಕೆ ಮಾಡಿಕೊಂಡು ಬಂದು ಮಾಹಿತಿ ಹಕ್ಕಿನಲ್ಲಿ ಅರ್ಜಿಯನ್ನ‌ ಸಲ್ಲಿಸಿರುವುದಾಗಿ ಆರೋಪಿಸಿದ್ದಾರೆ.

6 ಜನರ ವಿರುದ್ಧ ಎಫ್ಐಆರ್

ಮಾ. 23 ರಂದು ಸೊರಬ ತಹಶೀಲ್ದಾರ್ ನೇತೃತ್ವದಲ್ಲಿ ಅಂಬೇಡ್ಕರ್ ಆಚರಿಸುವ ಸಂಬಂಧ ಸಭೆ ಕರೆದಿದ್ದು ಸಭೆ ಮುಗಿದ ಮೇಲೆ ಬಸವರಾಜ್ ಹೊಸವಿ ಸಮಿತಿಯ ಹೆಸರನ್ನ ಅನಧಿಕೃತವಾಗಿಯೂ ಬಳಕೆಯಾಗಬಾರದು ಎಂದುಹೇಳಿದ್ದಾಗ್ಯೂ ಕೂಡ ಗುರುರಾಜ್, ಚೆನ್ನಯ್ಯ, ಮಹೇಶ, ನಾಗರಾಜ್, ಹರೀಶ ಮತ್ತು ರವಿಕುಮಾರ್ ಹೊಸವಿಯವರನ್ನೇ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾರೆ. ಅಲ್ಲದೆ ಕೊಲೆ ಬೆದರಿಕೆ ಹಾಕಿದ್ದು ಈ 6 ಜನರ ವಿರುದ್ಧ  ಹೊಸವಿ ಸೊರಬ ಠಾಣೆಯಲ್ಲಿ ಎಫ್ಐಆರ್  ದಾಖಲಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button