ಹಣದೊಂದಿಗೆ ಹೆಂಡತಿಯೂ ಗಾಯಬ್!

ಸುದ್ದಿಲೈವ್.ಕಾಂ/ಶಿವಮೊಗ್ಗ
ಹಣ ನೀಡಲುಬಂದಿದ್ದ ಕಡೇಕಲ್ ನಿವಾಸಿಯೊಬ್ಬನಿಗೆ ಈ ರೀತಿಯ ಶಾಕ್ ಆಗುತ್ತೆ ಅಂತನೇ ಗೊತ್ತಿರಲಿಲ್ಲ. ಕೋಳಿ ಫಾರಂನ ಮಾಲೀಕನಿಗೆ ಲಕ್ಷಾಂತರ ರೂ ಹಣ ಕೊಡಲು ಪತ್ನಿ ಸಮೇತ ಬಂದವನಿಗೆ ಇತ್ಲಾಗೆ ಹಣನೂ ಇಲ್ಲ, ಅತ್ಲಾಗೆ ಹೆಂಡ್ತಿನೂ ಸಿಗಲಿಲ್ಲವೆಂಬಂತಾಗಿದೆ.
ಹಾಗಾದರೆ ಏನಾಯಿತು?
ಹಾಗಾದರೆ ಏನಾಯಿತು ಅಂತ ಕೇಳ್ತಾ ಇದ್ದೀರಾ? ಹೇಳ್ಬಿಡ್ತೀನಿ ಕೇಳ್ರಿ!
ಕಡೇಕಲ್ ನಿಂದ ಪತ್ನಿಯೊಂದಿಗೆ ಹಾಗೂ 6 ಲಕ್ಷ ರೂ. ಹಣದೊಂದಿಗೆ ಬೈಕ್ ನಲ್ಲಿ ಹೊರಟಿದ್ದ ಕುಮಾರ್ ನೇರವಾಗಿ ಶಿವಮೊಗ್ಗದ ಲಷ್ಕರ್ಮೊಹಲ್ಲಾಕ್ಕೆ ಬಂದು ಇಳಿಯುತ್ತಾನೆ.
ಬಾ, ಕೋಳಿ ಫಾರಂ ಮಾಲೀಕನಿಗೆ ಹಣ ಕೊಟ್ಟು ಬರೋಣವೆಂದು ಪತ್ನಿ ನಮೀತಾರಿಗೂ ಕರೆಯುತ್ತಾನೆ. ಇಲ್ಲಾ ನೀವು ಹೋಗಿ ನಾನು ಇಲ್ಲೇ ತರಕಾರಿ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಹೋಗ್ತಾರೆ.
2½ ಲಕ್ಷದ ಹಣದ ಕವರ್ ಮಾಯ!
ಕೋಳಿ ಫಾರಂ ಮಾಲೀಕನ ಮುಂದೆಬ್ಯಾಗ್ ಬಿಚ್ಚಿ 2½ಲಕ್ಷ ರೂ ಹಣವನ್ನ ಕವರ್ ನಲ್ಲಿ ಇಟ್ಟಿದ್ದನ್ನ ನೋಡ್ತಾನೆ. ಕವರೇ ಮಂಗಮಾಯವಾಗಿತ್ತು. ಪತ್ನಿಯ ಬಳಿ ಇರಬೇಕು ಎಂದು ತಿಳಿದು ಪತ್ನಿಯನ್ನ ವಿಚಾರಿಸೋಣವೆಂದು ಬೈಕ್ ಬಳಿ ಬರ್ತಾನೆ.
ಬೈಕ್ ಬಳಿ ಬಂದ ಕುಮಾರ್ ಪತ್ನಿಗೆಕರೆ ಮಾಡಿದ್ದಾನೆ. ಕರೆಸ್ವೀಕರಿಸಿದ ಪತ್ನಿ ಹಣ ಕಳೆದುಹೋಗಿದೆ ಹುಡುಕಿಕೊಂಡು ಬರುತ್ತೇನೆಂದು ಹೇಳಿದ್ದಾರೆ. ಪತ್ನಿ ಈಗ ಬರ್ತಾರೆ ಆಗ ಬರ್ತಾರೆ ಅಂತ ಕಾಯುತ್ತಿದ್ದ ಕುಮಾರ್ ಗೆ ನಿರಾಶೆ ಮೂಡಿದೆ.
ದೂರು ದಾಖಲು
ಮೇ13 ರಂದು ನಡೆದ ಘಟನೆ ಇದುವರೆಗೂ ಪತ್ನಿ ವಾಪಾಸ್ ಬರಲೇಇಲ್ಲ. ಪತ್ನಿ ಪತ್ತೆಯಾಗದ ಹಿನ್ನಲೆಯಲ್ಲಿ ಕೋಟೆ ಠಾಣೆಗೆ ಬಂದ ಕುಮಾರ್ ಮನುಷ್ಯ ಕಾಣೆ ಪ್ರಕರಣವೊಂದನ್ನ ದಾಖಲಿಸಿದ್ದಾರೆ.
