ಕ್ರೈಂ
Trending

ಪ್ರೀತಿಸಿದ ಪತ್ನಿ ಬೇರೆಯವನ‌ಜೊತೆ ಓಡಿ ಹೋಗಿದ್ದಕ್ಕೆ ನಡೆಯಿತಾ ಕೊಲೆಯ ಯತ್ನ?

ಸುದ್ದಿಲೈವ್.ಕಾಂ/ಭದ್ರಾವತಿ

ಪ್ರೀತಿಸಿ ಮದುವೆಯಾದವನಿಗೆ ಕಾದಿತ್ತು ಶಾಕ್, ಪತ್ನಿಯ ವಿಚಿತ್ರ ಆಟಕ್ಕೆ ನಡೆಯಿತಾ ಕೊಲೆಯತ್ನಾ ಎಂಬ ಪ್ರಶ್ನೆ ಹುಟ್ಟಿದೆ. ಪರೋಕ್ಷವಾಗಿ ಪತ್ನಿಯ ಪಾತ್ರವಿಲ್ಲವಾದರೂ ಆಕೆಯನ್ನ ಪ್ರೀತಿಸಿದವರಿಂದಲೇ ನಡೆಯಿತಾ  ಈ ಘಟನೆ ಎಡೆಮಾಡಿಕೊಟ್ಟಿದೆ.

ಪ್ರೀತಿಸಿ ಮದುವೆಯಾಗಿದ್ದರು

ಭದ್ರಾವತಿಯ ಯಲವಟ್ಟಿಯ ನಿವಾಸಿ ಕುಮಾರ ನಾಯ್ಕ್ ರಾಮನಕೊಪ್ಪದ ತನುಶ್ರೀ(ಹೆಸರು ಬದಲಾಯಿಸಿದೆ) ಪ್ರೀತಿಸಿ 6 ವರ್ಷದ ಹಿಂದೆ ಮದುವೆಯಾಗಿದ್ದಾರೆ. ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.

ಬೇರೆಯವರೊಂದಿಗೆ ಪತ್ನಿ ಪರಾರಿ!

ಆದರೆ ಒಂದು ವರ್ಷದ ಹಿಂದೆ‌ ಪತ್ನಿ ಅಭಿ ಎನ್ನುವ ಹುಡುಗನೊಂದಿಗೆ‌ ಓಡಿ ಹೋಗಿದ್ದು, ಈ ಪ್ರಕರಣ ಕಾಗದ ನಗರದ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣಿ ಪ್ರಕರಣ ದಾಖಲಾಗಿತ್ತು. ಇಬ್ವರೂ ಪತ್ತೆಯಾಗಿದ್ದು ಪ್ರಕರಣ ಪೊಲೀಸ್ ಠಾಣೆಯಲ್ಲಿ ಇತ್ಯರ್ಥ್ಯಗೊಂಡಿತ್ತು.

ಈ ಘಟನೆಯಾದ ನಂತರ ಪತ್ನಿ ರಾಮೆನಕೊಪ್ಪಕ್ಕೆ ಹೋಗಿದ್ದು ಕುಮಾರ್ ನಾಯ್ಕ್, ತನ್ನ ಇಬ್ಬರು ಮಕ್ಕಳೊಂದಿಗೆ ಯಲವಟ್ಟಿ ಗ್ರಾಮದಲ್ಲಿ ವಾಸವಾಗಿದ್ದನು. ಹೀಗೆ 5 ತಿಂಗಳಿಂದ ಹಿರಿಯರು ಬುದ್ದಿ ಹೇಳಿದ್ದಕ್ಕೆ ರಾಮನಕೊಪ್ಪಕ್ಕೆ ಹೋಗಿ ವಾಸವಾಗಿದ್ದನು.

ಅಪರಿಚಿತನಿಂದ ಮೆಸೇಜ್

ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಕುಮಾರ ನಾಯ್ಕನ ಅತ್ತೆಗೆ ಮೆಸೇಜ್ ಮತ್ತು ಕರೆ ಮಾಡಿ ಆತನ ಹೆಂಡತಿಗೆ ಮೊಬೈಲ್ ಕೊಡಿ ಎಂದು ಕಾಡಿದ್ದು, ಈ ಬಗ್ಗೆ ಕುಮಾರ ನಾಯ್ಕ್ ನಿಗೆ ಗೊತ್ತಾಗಿ ಅಪರಿಚಿತನಿಗೆ ಜೋರು ಮಾಡಿದ್ದನು.

ಮುಖಕ್ಕೆ ಬ್ಲೇಡ್ ಹಾಕಿ ಪರಾರಿ!

ಇದಾದ ನಂತರ ನಿನ್ನೆ ರಾತ್ರಿ ಕುಮಾರ ನಾಯ್ಕ್ ಪತ್ನಿ, ಮಕ್ಕಳು ಮತ್ತು ಅತ್ತೆ ಮಲಗಿದ್ದಾಗ ಅಪರಿಚಿತನೋರ್ವ ಬಂದು ಪೇಪರ್ ಕಟ್ ಮಾಡುವ ಸಣ್ಣ ಬ್ಲೇಡಿನಿಂದ ಮುಖವನ್ನ ಕೊಯ್ದಿದ್ದಾನೆ. ಈ ವೇಳೆ ಕುಮಾರ ನಾಯ್ಕ್ ಕೂಗಿದ್ದಾನೆ. ಅಷ್ಟರಲ್ಲಿ ಪತ್ನಿ ಲೈಟ್ ಹಾಕಲು ಮುಂದಾದಾಗ ಆಕೆಯನ್ನೂ ತಳ್ಳಿ ಪರಾರಿಯಾಗಿದ್ದಾನೆ.

ಕತ್ತಲೆಯಲ್ಲಿ ಮನೆ‌ಅತಿಕ್ರಮಣ ಮಾಡಿ ಕೊಲೆ ಉದ್ದೇಶದಿಂದ ಮುಖವನ್ನ ಬ್ಲೇಡಿನಿಂದ ಕೊಯ್ದು ಪರಾರಿಯಾದ ಅಪರಿಚಿತನನ್ನ ಹೊಡಿದು ಕಾನೂನು ಕಗರಮ ಜರುಗಿಸಿ ಎಂದು ಕುಮಾರ್ ನಾಯ್ಕ್ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button