ದೇಶ

ಚಾರ್‌ಧಾಮ್‌ ಯಾತ್ರೆ: 39 ಮಂದಿ ಯಾತ್ರಿಗಳ ಸಾವು

ಡೆಹರಾಡೂನ್‌: ಮೇ 3ರಿಂದ ಚಾರ್‌ಧಾಮ್‌ ಯಾತ್ರೆ ಶುರುವಾಗಿದ್ದು, ಈವರೆಗೆ 39 ಯಾತ್ರಿಗಳು ಮೃತಪಟ್ಟಿದ್ದಾರೆಂದು ಉತ್ತರಾಖಂಡ ಸರ್ಕಾರ ತಿಳಿಸಿದೆ.

ಈ ಸಾವುಗಳಿಗೆ ಮುಖ್ಯ ಕಾರಣ ಹೃದಯಾಘಾತ, ಅತಿಯಾದ ರಕ್ತದೊತ್ತಡ, ಪರ್ವತಪ್ರದೇಶದಲ್ಲಿ ಉಂಟಾಗುವ ಅಸ್ವಸ್ಥತೆ ಎಂದೂ ಮಾಹಿತಿ ನೀಡಿದೆ.

ಚಾರ್‌ಧಾಮ್‌ ಯಾತ್ರೆ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ, ಬದರೀನಾಥದಲ್ಲಿ ನಡೆಯುತ್ತದೆ.

ಈ ಯಾತ್ರೆ ಆರಂಭವಾಗುವ ಮುನ್ನವೇ ಪ್ರತಿಯೊಬ್ಬರ ಆರೋಗ್ಯವನ್ನೂ ಪರೀಕ್ಷಿಸಲಾಗುತ್ತದೆ. ಯಾರಿಗೆ ಆರೋಗ್ಯ ಸರಿಯಿರುವುದಿಲ್ಲವೋ ಅವರಿಗೆ ಹೋಗದಿರುವುದು ಉತ್ತಮ ಅಥವಾ ಸುಧಾರಿಸಿಕೊಂಡ ಮೇಲೆ ಹೊರಡಿ ಎಂಬ ಎಚ್ಚರಿಕೆ ನೀಡಲಾಗುತ್ತದೆ.

Spread the love

Related Articles

Leave a Reply

Your email address will not be published.

Back to top button