ತಾಲ್ಲೂಕು ಸುದ್ದಿ
ಮೊದಲನೇಯ ದಿನವೇ ಮಕ್ಕಳಲ್ಲಿ ನಿರುತ್ಸಾಹ-ಶಾಲೆಗೆ ಮಕ್ಕಳು ಹಾಜರಾದ ಸಂಖ್ಯೆ ಎಷ್ಟುಗೊತ್ತಾ?
ಶೇ.21 ರಷ್ಟು ಮಾತ್ರ ಹಾಜರಾತಿ

ಸುದ್ದಿಲೈವ್.ಕಾಂ/ಶಿವಮೊಗ್ಗ
ಬೇಸಿಗೆ ರಜೆ ಮೊಟಕುಗೊಳಿಸಿ ರಾಜ್ಯ ಸರ್ಕಾರ ಮೇ.16 ರಿಂದಲೇ 1 ರಿಂದ 10 ನೇ ತರಗತಿಯವರಗೆ ಶಾಲೆ ಆರಂಭವಾಗಿದ್ದು, ಶಾಲೆ ಆರಂಭದ ಮೊದಲನೆಯ ದಿನವೇ ಮಕ್ಕಳ ಹಾಜರಾತಿಯಲ್ಲಿ ನಿರುತ್ಸಾಹ ಕಂಡುಬಂದಿದೆ.
ಕಳೆದ ಎರಡು ವರ್ಷ ಕೊರೋನ ಹಿನ್ನಲೆಯಲ್ಲಿ ಶಾಲೆ ಆರಂಭವಾಗುತ್ತಿದ್ದಂತೆ ಶಾಲೆಗೆ ರಜೆ ಸಿಗುತ್ತಿದ್ದ ಹಿನ್ನಲೆಯಲ್ಲಿ ಮಕ್ಕಳ ಶಿಕ್ಷಣ ಸರಿಯಾಗಿ ದೊರೆತಿರಲಿಲ್ಲ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮೇ.16 ರಂದು 1 ರಿಂದ 10 ನೇ ತರಗತಿ ಮಕ್ಕಳಿಗೆ ಶಾಲೆ ಆರಂಭಿಸಿತ್ತು.
ಆದರೆ ಮೊದಲನೇ ದಿನವೇ ಮಕ್ಕಳಲ್ಲಿ ನಿರುತ್ಸಾಹ ಮೂಡಿದೆ. ಶಿವಮೊಗ್ಗ ಜಿಲ್ಲೆಯ 2950 ಅನುದಾನ, ಅನುದಾನ ರಹಿತ ಮತ್ತು ಖಾಸಗಿ ಶಾಲೆಗಳಿಗೆ ಹಾಜರಾಗಬೇಕಿದ್ದ 2,61000 ಮಕ್ಕಳ ಪೈಕಿ ಶೇ.21 ರಷ್ಟು ಮಾತ್ರ ಇಂದು ಹಾಜರಾಗಿದ್ದಾರೆ.
2 ಲಕ್ಷದ 61 ಸಾವಿರ ಮಕ್ಕಳಲ್ಲಿ ಶೇ.21 ರಷ್ಟು ಹಾಜರಾತಿಯಾದರೆ ಮಕ್ಕಳ ಸಂಖ್ಯೆಯಲ್ಲಿ ಹೇಳುವುದಾದರೆ 48819 ಮಕ್ಕಳು ಜಿಲ್ಲೆಯಾದ್ಯಂತ ಹಾಜರಾಗಿದ್ದಾರೆ.
