ತಾಲ್ಲೂಕು ಸುದ್ದಿ
ಶಿವಮೊಗ್ಗದಲ್ಲಿ ಅಬ್ಬರಿಸಿದ ಮಳೆರಾಯ

ಸುದ್ದಿಲೈವ್.ಕಾಂ/ಶಿವಮೊಗ್ಗ
ಸಂಜೆಯ ನಂಗರ ಸುರಿದ ಮಳೆ ಬಿರು ಬಿಸಿಲಿಗೆ ತಂಪೆರೆದಿದೆ. ಮಧ್ಯಾಹ್ನದ ವರೆಗೆ ಕಣ್ಣಮುಚ್ಚಾಲೆ ಆಟವಾಡುತ್ತಿದ್ದ ಬಿಸಿಲು ಮೋಡದ ವಾತಾವರಣ ಸಂಜೆಯ ನಂತರ ಮಳೆ ಸುರಿದು ತಂಪು ಉಂಟು ಮಾಡಿದೆ. ಗುಡುಗು ಮಿಂಚಿನಿಂದ ಮಳೆಯಾದ ಪರಿಣಾಮ ಕೆಲೆವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದಾಗಿ ತಳಿದುಬಂದಿದೆ.
ಕಳೆದ ನಾಲ್ಕು ದಿನಗಳಿಂದ ಸೈಕ್ಲೋನ್ ಅಸಾನಿ ಉಂಟುಮಾಡಿದ ಮಳೆ ವಾತಾವರಣ ಅಂತಹ ಅನಾಹುತವನ್ನ ಶಿವಮೊಗ್ಗದಲ್ಲಿ ಸೃಷ್ಠಿಸದಿದ್ದರು. ಮೋಡದ ವಾತಾವರಣದಿಂದ ಬಿಸಿಲಿನ ಬೇಗೆಯನ್ನ ತಗ್ಗಿಸಿತ್ತು.
ಆದರೆ ಇಂದು ಸಂಜೆ ಸುಮಾರು 15 ನಿಮಿಷ ಜೋರಾಗಿ ಮಳೆ ಬಿದ್ದಿದ್ದು ಈಗಲೂ ಸಹ ಜಿಟಿ ಜಿಟಿ ಮಳೆ ಮುಂದುವರೆದಿದೆ. ಭದ್ರಾವತಿಯಲ್ಲೂ ಮಳೆಯಾಗಿರುವುದಾಗಿ ತಿಳಿದುಬಂದಿದೆ.
ಅದರಂತೆ ಐದು ದಿನಗಳವರಗೆ ಶಿವಮೊಗ್ಗ ಸೇರಿದಂತೆ ಇತರೆಡೆಗಳಲ್ಲಿ ಮಳೆ ಸುರಿಯಲಿದೆ ಎಂದು ಹವಮಾನ ಇಲಾಖೆ ವರದಿ ಮಾಡಿದೆ. ಹವಮಾನ ಇಲಾಖೆಯ ವರದಿಯಂತೆ ಮಳೆ ಬೀಳಿದೆಯಾ ಅಥವಾ ಕೈಕೊಡಲಿದೆಯಾ ಕಾದುನೋಡಬೇಕಿದೆ.
