ದೊಡ್ಡಪೇಟೆ ಪೊಲೀಸರ ಸುಪರ್ಧಿಯಿಂದ ತಪ್ಪಿಸುಕೊಳ್ಳಲು ಆರೋಪಿ ರೂಮನ್ ಯತ್ನ
ಕಾರ್ಯಕ್ಷಮತೆಯಿಂದ ಆರೋಪಿಯನ್ನ ಕರೆತಂದ ಪಿಸಿ ನಿತಿನ್ ಮತ್ತು ರಮೇಶ್

ಸುದ್ದಿಲೈವ್.ಕಾಂ/ಶಿವಮೊಗ್ಗ
ದೊಡ್ಡಪೇಟೆ ಪಿಸಿ ನಿತಿನ್ ಮತ್ತು ರಮೇಶ್ ರವರ ಕಾರ್ಯಕ್ಷಮತೆಯನ್ನ ಮೆಚ್ಚಿಕೊಳ್ಳಬೇಕಾದ್ದೆ. ಆರೋಪಿಯೋರ್ವನನ್ನ ಕರೆತರುವಾಗ ಬೈಕ್ ನಿಂದ ಎಸ್ಕೇಪ್ ಆಗಲು ಯತ್ನಿಸಿದಾಗ ಈ ಇಬ್ವರು ಪೊಲೀಸರ ಕಾರ್ಯಕ್ಷಮತೆ ಮೆಚ್ಚಿಕೊಳ್ಳುವಂತಹದ್ದೆ. ಅಂತಹದ್ದೇನಾಯಿತು ಎಂದು ಕೇಳ್ತೀರಾ ಈ ಸ್ಟೋರಿ ಓದಿ ನಿಮಗೆ ಗೊತ್ತಾಗುತ್ತೆ.
ಮಾ.20 ರಂದು ಜಿಕ್ರು ಕೊಲೆ ಆಗಿತ್ತು.ಊ ವೇಳೆ ತಲೆಮರೆಸಿಕೊಂಡಿದ್ದ ಎ4 ಆರೋಪಿ ರೂಮನ್ ಎಂಬಾತನು ಮುರಾದ್ ನಗರದ ಕ್ರೌನ್ ಪ್ಯಾಲೇಸ್ ಬಳಿ ಇದ್ದ ಈತನ ಮನೆಯಿಂದ ಮೇ.4 ರಂದು ಬೈಕ್ ನಲ್ಲಿ ಕರೆತರುವಾಗ ತಪ್ಪುಸಿಕೊಳ್ಳು ಯತ್ನಿಸಿದ್ದಾನೆ.
ದೊಡ್ಡಪೇಟೆ ಠಾಣೆ ಪೋಲಿಸ್ ರಮೇಶ್ . ಕೆ ಟಿ ಮತ್ತು ನಿತಿನ್ ಒಂದೇ ಬೈಕ್ ನಲ್ಲಿ ಮನೆಯಿಂದ ಕರೆತರುವಾಗ ಬೈಕ್ ಮೇಲೆಯೇ ಒದ್ದಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಘಟನೆ ಮುರಾದ್ ನಗರದ ಮುಖ್ಯ ರಸ್ತೆಯಲ್ಲಿ ನಡೆದಿದ್ದು ಬೈಕ್ ಇಂಬ್ಯಾಲೆನ್ಸ್ ಆಗಿ ಕೆಳಗೆ ಬಿದ್ದಿದ್ದಾರೆ. ಆದರೆ ಯಾವ ಪ್ರತಿರೋಧಕ್ಕೂ ಜಗ್ಗದ ಪೊಲೀಸರು ಕಪಿಮುಷ್ಠಿಯಿಂದ ಕರೆತಂದಿದ್ದಾರೆ.
ಸಡನ್ ಆಗಿ ಎಚ್ಚೆತ್ತುಕೊಂಡ ನಿತಿನ್ ಮತ್ತು ರಮೇಶ್ ಆತನನ್ನ ಹಿಡಿದಿಟ್ಟುಕೊಂಡು ಕನಿಷ್ಠ ಬಲ ಪ್ರಯೋಗಿಸಿ ನಂತರ ಆರೋಪಿಯನ್ನು 112 ವಾಹನದಲ್ಲಿ ಠಾಣೆಗೆ ತಂದಿದ್ದಾರೆ. ಎಂತಹ ಅಪಾಯವನ್ನ ಈ ಆರೋಪಿಗಳು ಪೊಲೀಸರಿಗೆ ತಂದು ಒಡ್ಡುತ್ತಾರೆ ಮತ್ತು ಈ ಅಪಾಯದಲ್ಲಿ ಪೊಲೀಸರು ಹೇಗೆ ಕೆಲಸ ಮಾಡ್ತಾರೆ ಎಂಬುದಕ್ಕೆ ಈ ವಿಡಿಯೋ ಸಹ ಸಾಕ್ಷಿಯಾಗುತ್ತದೆ.
ಬೈಕ್ ನಲ್ಲಿ ಕರೆತರುವ ವೇಳೆ ಬೈಕ್ ನಲ್ಲಿ ಒದ್ದಾಡಿ ಪೊಲೀಸರನ್ನ ಕೆಳೆಗೆ ಬೀಳಿಸಿದ್ದು, ಆತನನ್ನ ಪೊಲೀಸರು ಹಿಡಿದಿಟ್ಟುಕೊಂಡಿದ್ದು, ಮತ್ತು 112 ಪೊಲೀಸ್ ವ್ಯಾನ್ ನಲ್ಲಿ ಕರೆ ತಂದಿದ್ದು ಎಲ್ಲವೂ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ವಿಡಿಯೋ ಈಗ ವೈರಲ್ ಆಗಿದೆ.
ಈ ಆರೋಪಿಯ ವಿರುದ್ಧ ಠಾಣೆಯಲ್ಲಿ ವಾರೆಂಟ್ ಗಳು ಪೆಂಡಿಂಗ್ ಇದ್ದು ಠಾಣೆಯ ರೌಡಿ ಶೀಟರ್ ಪಟ್ಟಿಯಲ್ಲಿ ಈತನ ಹೆಸರಿದೆ. ಹರಸಾಹಸದಿಂದ ಕರೆತಂದ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
