
ಸುದ್ದಿಲೈವ್.ಕಾಂ/ಶಿವಮೊಗ್ಗ
ಕಸ್ತೂರಿ ರಂಗನ ವರದಿ ಎಂದರೆ ದೇವ ಮಾನವನನ ವರದಿಯೇ ಎಂದು ಪಶ್ಚಿಮಘಟ್ಟಗಳ ಸಂರಕ್ಷಣ ಕಾರ್ಯಪಡೆಗಳ ಅಧ್ಯಕ್ಷ ರವಿಕುಶಾಲಪ್ಪ ಪ್ರಶ್ನಿಸಿದ್ದಾರೆ.
ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆಗಳ ಅಧ್ಯಕ್ಷರಾಗಿ ಕಸ್ತೂರಿರಂಗನ್ ವರದಿ ಬಗ್ಗೆ ತಮ್ಮ ಅಭಿಪ್ರಾಯವೇನು ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು ಕಸ್ತೂರಿ ರಂಗನ್ ವರದಿಯನ್ನ ತರಲು ಬಿಜೆಪಿ ಬಿಡುವುದಿಲ್ಲ.
ಮಲೆನಾಡು ಮತ್ತು ಪಶ್ಚಿಮಘಟ್ಟಗಳಲ್ಲಿ ಬದುಕುವ ನಾವೆಲ್ಲಾ ಒಙದು ಮರ ಉದುರಿ ಹೋದರೆ ಮಗನ ಸಾವಿನ ವಿಷಯ ಕೇಳುವುದಕ್ಕಿಂತ ಹೆಚ್ಚು ವಿಚಲಿತರಾಗುತ್ತೇವೆ. ಅಂತಹದ್ದರಲ್ಲಿ ನಮಗೆ ಕಾಡು ರಕ್ಷಣೆ ಮಾಡಿ ಎಂಬ ಪಾಠ ವ್ಯರ್ತ್ಯವೆಂದರು.
ಕಸ್ತೂರಿ ರಂಗನ್ ಸಹ ದೇವಮಾನವ ಅಲ್ಲ. ಮೇಲಿನಿಂದ ಕೆಳಗೆ ಇಳಿದು ಬಂದಿಲ್ಲ. ಹಾಗಾಗಿ ಕಸ್ತೂರಿ ರಂಗನ್ ವರದಿಗಿಂತ ನಮ್ಮ ಜನ ಅರಣ್ಯ ಕುರಿತು ಹೆಚ್ಚು ಕಾಳಜಿ ಮಾಡುತ್ತಾರೆ. ಹಾಗಾಗಿ ವರದಿ ಜಾರಿ ಮಾಡುವ ಅವಶ್ಯಕತೆ ಇಲ್ಲವೆಂದರು.
ತಡಬಡಾಯಿಸಿದ ಅಧ್ಯಕ್ಷರು
ಮಾಧ್ಯಮಗಳ ಜೊತೆ ಸುದ್ದಿಗೋಷ್ಠಿಗೆ ಇಳಿದ ಅಧ್ಯಕ್ಷರಿಗೆ ಮಾಧ್ಯಮದವರು ಕಸ್ತೂರಿರಂಗನ್ ವರದಿ ಮತ್ತು ಗಾಡ್ಗಿಳ್ ವರದಿ ಕುರಿತು ಮಾಹಿತಿ ಏನಿದೆ ಹೇಳಿ ಎಂಬ ಪ್ರಶ್ನೆ ಎದುರಾಯಿತು. ಕಸ್ತೂರಿ ರಂಗನ್ ವರದಿಯನ್ನ ನಾನು ಅಷ್ಟೊಂದು ಓದಿಲ್ಲವೆಂದೇ ಅಧ್ಯಕ್ಷರು ಸುದ್ದಿಗೋಷ್ಠಿ ಆರಂಭಿಸಿದರು.
ಪಶ್ಚಿಮ ಘಟ್ಟಗಳ ಸಂರಕ್ಷಣ ಕಾರ್ಯಪಡೆಯ ಅಧ್ಯಕ್ಷರಾಗಿ ನೀವೇ ಓದಿಲ್ಲವೆಂದ ಮೇಲೆ ಅದರ ಪರ ಮತ್ತು ವಿರೋಧವನ್ನ ಹೇಗೆ ಸರಿದೂಗಿಸುವಿರಿ ಎಂಬ ಮಾಧ್ಯಮದ ಪ್ರಶ್ನೆಗೆ ಅಧ್ಯಕ್ಷರು ದಡಬಡಾಯಿಸಿ ನಂತರ ಉತ್ತರ ನೀಡಿದ ಪ್ರಸಂಗ ನಡೆದಿದೆ.
