ಕ್ರೈಂ

ಮನೆಯೊಂದರಲ್ಲಿ ಆಡಗಿ ಕುಳಿತಿತ್ತು ನಾಗರ:

ಹಿಡಿಯಲು ಹೋದ ಯುವಕನಿಗೆ ಹಾವು ಕಡಿತ..

ಸುದ್ದಿಲೈವ್.ಕಾಂ/ಸಾಗರ

ಹಾವು ಅಂದ್ರೆ ಸಾಕು ಮಾರುದ್ದ ದೂರ ಓಡಿ ಹೋಗೋರೆ ಜಾಸ್ತಿ. ಆದರೆ ಕೆಲವು ಧೈರ್ಯಶಾಲಿಗಳು ಹಾವಿನ ಜೊತೆಗೂ ಆಟ ಆಡ್ತಾರೆ. ಆದರೆ ಸಾಗರದಲ್ಲಿ ಹೀಗೆ ಹಾವಿನ ಜೊತೆ ಆಟ ಆಡಲು ಹೋದವ ಆಸ್ಪತ್ರೆ ಸೇರಿದ್ದಾನೆ.

ಹೌದು, ಹಾವು ಹಿಡಿಯಲು ಹೋದ ಯುವಕನಿಗೆ ವಿಷ ನಾಗರ ಕಚ್ಚಿದೆ. ನಗರ ಸಭೆ ವ್ಯಾಪ್ತಿಯ ಶ್ರೀಧರ ನಗರದ ಒಂದನೇ ಕ್ರಾಸ್ ಮನೆಯೊಂದರಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.

ಹಾವು ಕಚ್ಚಿದ ಸ್ಥಳ ಬ್ಲೇಡಿನಿಂದ ಕೊಯ್ದುಕೊಂಡ ಯುವಕ !

ಅಂದಹಾಗೆ ಶಿವಮೊಗ್ಗ ಜಿಲ್ಲೆಯ ಸಾಗರ ಪೇಟೆಯ ಶ್ರೀಧರ ನಗರದ ಒಂದನೇ ಕ್ರಾಸ್ ಮನೆಯೊಂದರಲ್ಲಿ ಹಾವು ಅಡಗಿ ಕುಳಿತಿತ್ತು. ವಿಷಯ ತಿಳಿದು ದಿಲ್ ಶಾದ್ ರೊನಾಲ್ಡ್ ಎಂಬಾತ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಹಾವು ಹಿಡಿಯಲು ಹೋಗಿದ್ದ. ಈ ವೇಳೆ ನಾಗರಹಾವು ರೊಚ್ಚಿಗೆದ್ದಿದೆ , ಕೈಹಾಕಿ ನಾಗರಹಾವು ನಡೆಯಲು ಹೋದ ಸಂದರ್ಭದಲ್ಲಿ ‘ನಾಗಪ್ಪ’ ಕುಟುಕಿದ್ದಾನೆ ಎಂದು ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ.

ದಿಲ್ ಶಾದ್ ರೊನಾಲ್ಡ್ ಹಾವು ಕಚ್ಚಿದ ಸ್ಥಳವನ್ನು ಬ್ಲೇಡಿನಿಂದ ಕೊಯ್ದು ಕೊಂಡಿದ್ದಾನೆ ನಂತರ ಹಾವು ಅಡಗಿ ಕುಡಿತಿದ್ದ ಮನೆಯ ಮಾಲೀಕ

ದಿಲ್ ಶಾದ್ ರೊನಾಲ್ಡ್ ಗೆ ಸಾಗರ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ 108 ಅಂಬುಲೆನ್ಸ್ ಮೂಲಕ ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಹಾವಿನ ಜೊತೆ ಚೆಲ್ಲಾಟ ಆಡುವವರನ್ನು ಕಡಿವಾಣ ಹಾಕುವ ಕೆಲಸ ಅರಣ್ಯ ಇಲಾಖೆ ಮಾಡಬೇಕು.ಇತ್ತೀಚಿನ ದಿನಗಳಲ್ಲಿ ಮಲೆನಾಡಿನಲ್ಲಿ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಹಾವು ಹಿಡಿಯುವ ಕೆಲಸದಲ್ಲಿ ಯುವಕರು ಮುಂದಾಗುತ್ತಿದ್ದಾರೆ ,

ಇದರಿಂದ ಜೀವಕ್ಕೆ ಹಾನಿ ಹಾಗುವ ಸಾಕಷ್ಟು ಸಾಧ್ಯತೆಗಳು ಕಂಡುಬರುತ್ತಿದೆ . ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಈ ಘಟನೆಗಳ ಬಗ್ಗೆ ಗಮನಹರಿಸಿ ಮುನ್ನೆಚ್ಚರಿಕೆ ಇಲ್ಲದೆ ಹಾವು ಹಿಡಿಯಲು ಮುಂದಾಗುವ ಯುವಕರಿಗೆ ಜಾಗೃತಿ ಮೂಡಿಸುವ ಕೆಲಸದ ಜೊತೆಗೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹಾವಿನ ಜೊತೆ ಚೆಲ್ಲಾಟ ಆಡಲು ಹೋಗಿ ಯುವಕರು ತಮ್ಮ ಜೀವ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಬಹುದು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button