ಕ್ರೈಂ
Trending

ತೀರ್ಥಹಳ್ಳಿ ಕುಶಾವತಿಯಲ್ಲಿ ಮರಳುಲಾರಿಗಳು ಸೀಜ್

ಈಗಲಾದರೂ ಕ್ರಮಜರುಗುತ್ತಾ ಮರಳುಕೋರೆಯ ಗುತ್ತಿಗೆದಾರರ ವಿರುದ್ಧ!?

ಸುದ್ದಿಲೈವ್.ಕಾಂ/ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ನಿರಂತರವಾಗಿ ಮರಳು ಅಕ್ರಮ ಸಾಗಾಣಿಕೆ ಆಗುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಪೊಲೀಸ್ ಇಲಾಖೆ ಎರಡೂ ಕಣ್ಣುಮುಚ್ಚಿ ಕುಳಿತಿದ್ದಾವೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ.

ಕುಶಾವತಿಯ ಬಳಿ ಮರಳನ್ನ ಡಬ್ಲಿಂಗ್ ಮಾಡಿಕೊಂಡು ಬರುತ್ತಿದ್ದ ಲಾರಿಯನ್ನ ಸ್ಥಳೀಯರೊಬ್ಬರು ಪೊಲೀಸ್ ಇಲಾಖೆ ಮಾಹಿತಿ ನೀಡಿ ಹಿಡಿಸುವ ಸ್ಥಿತಿ ಬಂದಿದೆ ಎಂದರೆ ಜಿಲ್ಲೆಯಲ್ಲಿ ಎಂತಹ ಸ್ಥಿತಿ ನಿರ್ಮಾಣವಾಗಿದೆ ಲೆಕ್ಕೆ ಹಾಕುವ ಸಂದರ್ಭ ಬಂದಿದೆ.

ಕುಶಾವತಿಯಲ್ಲಿ ಮರಳು ಕ್ವಾರೆ ಇದೆ. ಇಲ್ಲಿ ಪ್ರತಿದಿನ ಡಬ್ಲಿಂಗ್ ಮಾಡಲಾಗುತ್ತದೆ. ಆದರೆ ಯಾವ ತಪಾಸಣೆಯೂ ನಡೆಯೊಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳೀಯರ ಫೋನೇ ತೆಗೆದು ಮಾತನಾಡೊಲ್ಲವೆಂಬುದು ಸ್ಥಳೀಯರ ಆರೋಪವಾಗಿದೆ. ಹಾಗಾದರೆ ಇಲಾಖೆ ಇದ್ದು ಏನು ಮಾಡ್ತಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಪ್ರತಿದಿನ ನಡೆಯುತ್ತೆ ಡಬ್ಲಿಂಗ್

ಮಾಮೂಲಿಯಾಗಿ ಮರಳು ಕ್ವಾರೆ ನಿಯಮದ ಪ್ರಕಾರ 8½ ಟನ್ ಮರಳನ್ನ ಮಾತ್ರ ಲಾರಿಗೆ ತುಂಬಿಸಬೇಕೆಂಬ ನಿಯಮವಿದೆ. ಆದರೆ ಈ ನಿಯಮವನ್ನೆಲ್ಲಾ ಗಾಳಿಗೆ ತೂರಿಲಾಗಿದೆ ಒಂದು ಲಾರಿ ಗೆ 25 ಟನ್ ಮರಳನ್ನ ತುಂಬಲಾಗುತ್ತದೆ. ಇದನ್ನೇ ಡಬ್ಲಿಂಗ್ ಎನ್ನಲಾಗುತ್ತದೆ. ಒಂದೇ ಬಿಲ್ಲು 3 ಪಟ್ಟು ಲೋಡ್ ಹೆಚ್ಷಾಗುತ್ತದೆ.

ಮರಳು ಗುತ್ತಿಗೆದಾರನ ವಿರುದ್ಧವೂ ಕ್ರಮ ಜರುಗಿಸಬೇಕಿದೆ

ಈಗ ಸೀಜ್ ಆದ ಪ್ರತಿ ಲಾರಿಯಲ್ಲಿ ಪತ್ತೆಯಾಗಿದ್ದು 25 ಟನ್ ಲೋಡು ಮರಳು. ಹೀಗೆ ತುಂಬುವ ಲಾರಿಗಳನ್ನ ಮಾತ್ರ ಸೀಜ್ ಮಾಡುವುದು ಮಾತ್ರವಲ್ಲದೆ ಗುತ್ತಿಗೆದಾರನನ್ನ ಬ್ಲಾಕ್ ಲೀಸ್ಟ್ ಗೆ ಹಾಕಬೇಕು. ಹೀಗೆ ಕ್ರಮಜರುಗಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿರಬೇಕು. ಯಾರೂ ಇರೊಲ್ಲ. ಸರ್ಕಾರಿ ಸಂಪತ್ತು ಇಂತಹ ಅಧಿಕಾರಿಗಳಿಂದ ನಡೆಯುತ್ತಿದ್ದರು ಯಾರೂ ಗಮನ ಹರಿಸೊಲ್ಲ.

ಸಂಪತ್ತು ಲೂಟಿಯಾಗುವುದನ್ನ ತಡೆಯಬೇಕಿದೆ

ಒಟ್ಟಿನಲ್ಲಿ ತಿರ್ಥಹಳ್ಳಿಯಲ್ಲಿ ವ್ಯಾಪಕವಾಗಿ ಮರಳು ಲೂಟಿ ಆಗುತ್ತಿದೆ. ಗೃಹಸಚಿಚರು ಸಹ ಈ ಬಗ್ಗೆ ಗಮನಹರಿಸಬೇಕಿದೆ. ಶಾಸಕರಾಗಿ ತಡೆಯಲು ಸಾಧ್ಯವಾಗದ್ದನ್ನ ಗೃಹಸಚಿವರು ಸಚಿವರಾಗಿ ಕ್ರಮ ಜರುಗಿಸುವ ಅವಶ್ಯಕತೆ ಇದೆ. ಒಟ್ಟಿನಲ್ಲಿ ಸಾರ್ವಜನಿಕರ ಸಂಪತ್ತು ಲೂಟಿ ಆಗುತ್ತಿದ್ದರೂ ಎಲ್ಲಾ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ.

 

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button