ಕ್ರೈಂ
ಚೋರಡಿಯಲ್ಲಿ ಮಕ್ಕಳೊಂದಿಗೆ ವಿವಾಹಿತೆ ಮಹಿಳೆ ನೇಣಿಗೆ ಶರಣು
ವರದಕ್ಷಿಣೆ ಕಿರುಕುಳದ ಹಿನ್ಬಲೆಯಲ್ಲಿ ಎರಡು ಮಕ್ಕಳೊಂದಿಗೆ ನವವಿವಾಹಿತೆ ಆತ್ಮಹತ್ಯೆ?

ಸುದ್ದಿಲೈವ್.ಕಾಂ/ಶಿವಮೊಗ್ಗ
ತಾಲೂಕಿನ ಚೋರಡಿ ಗ್ರಾಮದಲ್ಲಿ ಸಣ್ಣ ಮಕ್ಕಳೊಂದಿಗೆ ವಿವಾಹಿತೆ ಮಹಿಳೆಯೊಬ್ಬಳು ನೇಣಿಗೆ ಕೊರಳೊಡ್ಡಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ನೇಣಿಗೆ ಕೌಟುಂಬಿಕ ಸಮಸ್ಯೆ ಕಾರಣವೆಂದು ಹೇಳಲಾಗುತ್ತಿದೆ. ಇನ್ನು ಕೆಲವರು ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸ್ ತನಿಖೆಯಿಂದ ಸತ್ಯ ಹೊರಬರಬೇಕಿದೆ.
ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿದ್ದ ಶಿವಕುಮಾರ್ ಪತ್ನಿ ಜ್ಯೋತಿ(25) ಎರಡು ವರೆ ವರ್ಷದ ಸಾನ್ವಿ, ಒಂದು ವರ್ಷದ ಕುಶಾಲ್ ನೊಂದಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.
ಶಿವಕುಮಾರ್ ಕೆಲಸದಿಂದ ವಾಪಾಸ್ ಆಗುತ್ತಿದ್ದಂತೆ ಈ ದೃಶ್ಯ ಕಂಡು ಬಂದಿದೆ. ಜ್ಯೋತಿ ಸಾಸಿವೆಹಳ್ಳಿಯವರಾಗಿದ್ದು ಶಿವಕುಮಾರ್ ನೊಂದಿಗೆ ವಿವಾವಹವಾಗಿ 5 ವರ್ಷ ಕಳೆದಿತ್ತು.ಕುಂಸಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಮುಂದಿನ ಕ್ರಮ ಜರುಗಿಸಿದ್ದಾರೆ.
