ಸುದ್ದಿ

ಅಂಧರನ್ನೂ ಬಿಡಲಿಲ್ಲ ಈ ಆನ್ ಲೈನ್ ಕಳ್ಳರು

ಆರ್ಕೇಸ್ಟ್ರಾ ಕಾರ್ಯಕ್ರಮ ಕೊಡಿಸುವುದಾಗಿ ನಂಬಿಸಿ ಹಣ ವರ್ಗಾವಣೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ನವಜ್ಯೋತಿ ಅಂಧರ ಸಂಸ್ಥೆಯವರಿಗೆ ಹಾಡಲು ಅವಕಾಶ ನೀಡುವುದಾಗಿ ನಂಬಿಸಿ ಸಂಸ್ಥೆಯನ್ನ ನಡೆಸುತ್ತಿರುವ‌ ಕಸ್ತೂರಿಯವರ ಬ್ಯಾಂಕ್ ಅಕೌಂಟ್ ನಿಂದ 30 ಸಾವಿರ ರೂ. ಹಣ ವಂಚಿಸಿರುವ ಘಟನೆ ನಿನ್ನೆ ನಡೆದಿದೆ.

ಮೇಲಿನ ತುಂಗ ನಗರದಲ್ಲಿ ನವಜ್ಯೋತಿ ಅಂಧರಸಂಸ್ಥೆ ನಡೆಸುತ್ತಾ ಬಂದಿರುವ ಕಸ್ತೂರಿ ಎಂಬುವರಿಗೆ ಬೆಂಗಳೂರಿನಲ್ಲಿರುವ ಅಪರಿಚಿತ ವ್ಯಕ್ತಿಯೊಬ್ಬ ಮಿಲ್ಟ್ರೀ ಕ್ಯಾಂಪ್ ನಿಂದ ಮಾತನಾಡುತ್ತಿರುವುದಾಗಿ ಹೇಳಿ ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾನೆ.

ನಮ್ಮ ಸಾರ್ ಒಬ್ವರು ರಿಟೈರ್ಡ್ ಆಗಿದ್ದಾರೆ. ಇವರ ರಿಟೈರ್ಡ್ ಮೆಂಟ್ ದಿನದಂದು ಬೀಳ್ಕೊಡುಗೆ ಸಮಾರಂಭಕ್ಕೆ ಅರ್ಕೆಸ್ಟ್ರಸ ಹೇಳಿಸಬೇಕಿದೆ. ನೀವೇ ಹಾಡಬೇಕು ಎಂದು ಹೇಳಿದ್ದಾನೆ. ಕಾರ್ಯಕ್ರಮವನ್ನ ಕಸ್ತೂರಿಯವರೂ ಸಹ ಒಪ್ಪಿಕೊಂಡಿದ್ದಾರೆ. ಹಣಹಾಕುವುದಾಗಿ ನಂಬಿಸಿ ಅಪರಿಚಿತ ಬ್ಯಾಂಕ್ ಅಕೌಂಟ್ ಕೇಳಿದ್ದಾನೆ.

ಮಾಮೂಲಿಯಾಗಿ ಬ್ಯಾಂಕ್ ಅಕೌಂಟ್ ನೀಡಲು ಮುಂದಾದ ಕಸ್ತೂರಿಯವರಿಗೆ ಗೂಗಲ್ ಅಕೌಂಟ್ ಇದ್ದವರ ನಂಬರ್ ಕೊಡಿ ಎಂದು ನಂಬಿಸಿದ್ದಾನೆ. ಕಸ್ತೂರಿಯವರೂ ಸಹ ಕಣ್ಣು ಕಾಣದೆ ಇರುವ ಕಾರಣ ಪಕ್ಕದ ಮನೆ ಬಾಲಕಿಯಿಂದ ಗೂಗಲ್ ಪೇ ಸಿದ್ದಪಡಿಸಿಕೊಂಡು ಆತನಿಗೆ ಗೂಗಲ್ ಪೇಗೆ ಹಣ ಹಾಕಿ ಎಂದಿದ್ದಾರೆ. ಆತ ಒಟಿಪಿ ನಂಬರ್ ಕೇಳಿದ್ದಾನೆ.

ಒಟಿಪಿ ನಂಬರ್ ಪಡೆಯುತ್ತಿದ್ದಂತೆ ಆತ ಅವರ ಅಕೌಂಟ್ ನಂಬರ್ ನಿಂದ 30 ಸಾವಿರ ರೂ. ಹಣವನ್ನ ವರ್ಗಾಯಿಸಿದ್ದಾನೆ. ಕೊರೋನ ಹಿನ್ನಲೆಯಲ್ಲಿ ಹಾಡುವ ಕಾರ್ಯಕ್ರಮಗಳೇ ರದ್ದಾಗಿದ್ದು ಕಷ್ಟದಲ್ಲಿ ಜೀವನ ನಡೆಸುತ್ತಿದ್ದ ಕಸ್ತೂರಿಯವರ ಬ್ಯಾಂಕ್ ಅಂಕೌಟ್ ನಿಂದ ಹಣ ವರ್ಗಾಯಿಸಿಕೊಂಡಿದ್ದಕ್ಕೆ ಕಣ್ಣೀರಿಟ್ಟಿದ್ದಾರೆ. ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button