ಅಕ್ರಮ ಅಕ್ಕಿ ಸಂಗ್ರಹ-90 ಸಾವಿರ ರೂ.ಮೌಲ್ಯದ ಅಕ್ಕಿ ವಶಕ್ಕೆ

ಸುದ್ದಿಲೈವ್.ಕಾಂ/ಹೊಳೆಹೊನ್ನೂರು
ಅಕ್ರಮ ಅಕ್ಕಿ ಸಂಗ್ರಹ ಮಾಡಲಾದ ಮನೆಯೊಂದ ಮೇಲೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕ ಮತ್ತು ಹೊಳೆಹೊನ್ನೂರು ಪಿಎಸ್ಐ ಲಕ್ಷ್ಮೀಪತಿ ನೇತೃತ್ವದಲ್ಲಿ ಭರ್ಜರಿ ದಾಳಿ ನಡೆದಿದ್ದು 90 ಸಾವಿರೂ ಮೌಲ್ಯದ 250 ಕೆ.ಜಿ ಅಕ್ಕಿಯನ್ನ ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಆಧಾರದ ಮೇರೆಗೆ ಜಾವಳ್ಳಿಯ ವಾಗೀಶ್ ಎಂಬುವರ ಮನೆಯಲ್ಲಿ ಜಂಟಿ ದಾಳಿ ನಡೆಸಿರುವ ಇಲಾಖೆಯ ಅಧಿಕಾರಿಗಳು ತಲಾ 50 ಕೆ.ಜಿಯ 49 ಅಕ್ಕಿಚೀಲಗಳನ್ನ ವಶಕ್ಕೆ ಪಡೆದಿದ್ದಾರೆ.
ಜಾವಳ್ಳಿಯ ತ್ಯಾವಣಿಗೆ ಗ್ರಾಮದಲ್ಲಿ ಎರಡು ಪ್ರತ್ಯೇಕ ಪೋರ್ಷನ್ ಮನೆಗಳು ಕಂಡು ಬಂದಿದೆ. ಇಲ್ಲಿ ಹೋಗಿನೋಡಿದಾಗ ಈ ಮಬೆಯಒಂದು ಪೋರ್ಷನ್ ಖಾಲಿ ಇದೆ. ಇನ್ನೋಂದು ಪೋರ್ಷನ್ ಮನೆಗೆ ಚಿಲಕ ಹಾಕಿತ್ತು.
ಚಿಲಕ ತೆಗೆದು ಒಳಗೆ ಹೋದಾಗ ನಡುಮನೆಯಲ್ಲಿ ಅಕ್ಕಿ ಚಲ್ಲಿರುವುದು ಕಂಡು ಬಂದಿದೆ. ನಡುಮನೆಗೆ ತಾಗಿಕೊಂಡಿದ್ದ ಕೋಣೆಯಲ್ಲಿ ಅಕ್ಕಿಯಚೀಲವನ್ನ ಒಂದರ ಮೇಲೊಂದು ಜೋಡಿಸಲಾಗಿತ್ತು.
ಇದು ವಾಗೀಶ್ ಎಂಬುವರಿಗೆ ಸೇರಿದೆ ಎನ್ನಲಾಗಿದ್ದು, ಅಧಿಕಾರಿಗಳ ದಾಳಿಯ ವೇಳೆ ಯಾರೂ ಮನೆಯಲ್ಲಿರಲಿಲ್ಲವೆಂದು ಹೇಳಲಾಗಿದೆ. ಸರ್ಕಾರದ ಪರವಾನಗಿ ಇಲ್ಲದೆ ಕಾಳಸಂತೆಯಲ್ಲಿ ಈ ಅಕ್ಕಿಗಳನ್ನ ಮಾರಲು ಸಂಗ್ರಹಿಸಲಾಗಿದೆ ಎಂದು ಕಂಡು ಬಂದಿದ್ದು ಇದನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಆಹಾರ ನಿರೀಕ್ಷಕಿ ಸುನೀತಾ ಹೊಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
