ಶಿಕಾರಿಪುರದಲ್ಲಿ ಒಂದೇ ಬೀದಿಯ ಎರಡು ಮನೆಗಳಲ್ಲಿ ಕಳ್ಳತನ

ಸುದ್ದಿಲೈವ್. ಕಾಂ/ಶಿಕಾರಿಪುರ
ಶಿಕಾರಿಪುರದಲ್ಲಿ ಒಂದೇ ಬಡಾವಣೆಯ ಒಂದೇ ಬೀದಿಯಲ್ಲಿನ ಎರಡು ಬೇರೆ ಬೇರೆ ಮನೆಗಳಲ್ಲಿ ಕಳ್ಳತನ ನಡೆದಿದೆ. ಒಬ್ಬರು ಶಾಲಾ ಶಿಕ್ಷಕರ ಮನೆಯಲ್ಲಿ ಕಳ್ಳತನವಾದರೆ, ಇನ್ನೊಂದು ಕೂಲಿ ಕಾರ್ಮಿಕನ ಮನೆಯಲ್ಲಿ ಕಳ್ಳತನವಾಗಿದೆ.
ಚನ್ನಕೇಶವ ನಗರದ3 ನೇ ತಿರುವಿನ ಬಡಾವಣೆಯಲ್ಲಿರುವ ಶಿಕ್ಷಕರಾದ ಸಿದ್ದಪ್ಪನವರ ಮನೆಯಲ್ಲಿ ಕಳ್ಳತನವಾಗಿದ್ದು 38 ಸಾವಿರ ರೂ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಕಳವಾಗಿದೆ. ಇವರು ಹಾವೇರಿ ಜಿಲ್ಲೆ ರಟ್ಟೇಹಳ್ಳಿ ತಾಲೂಕಿನ ಕಡೂರು ಗ್ರಾಮಕ್ಕೆ ತೆರಳಿದಾಗೆ ಮನೆಯ ಮುಂಬಾಗಿಲು ಒಡೆದು ಕಳುವಾಗಿದೆ.
ಅದೇ ಬಡಾವಣೆಯ ವಸಂತ್ ಬಿ.ಎಂ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ವಸಂತ್ ಟೈಲ್ಸ್ ಕೆಲಸ ಮಾಡುತ್ತಿದ್ದು ಕೆಲಸ ಮೇಲೆಬೇರೆ ಹಳ್ಳಿಗೆ ಹೋದಾಗ ಮನೆಯಲ್ಲಿದ್ದ 40 ಸಾವಿರ ರೂ ಮೌಲ್ಯದ ಬೆಳ್ಳಿ, ಚಿನ್ಬಾಭತಣ ಮತ್ತು ನಗದು ಕಳುವಾಗಿದೆ.
ವಸಂತ್ ಹೊರಗೆ ಹೋದಾಗ ಮನೆಯ ಮುಂದಿನ ಚಿಲಕ ಒಡೆದು ಕಳುವು ಮಾಡಲಾಗಿದೆ. ಎರಡೂ ಪ್ರಕರಣದಲ್ಲಿ ಅಕ್ಕಪಕ್ಕದವರೆ ಕರೆ ಮಾಡಿ ಮನೆಯ ಬಾಗಿಲು ಒಡೆದಿರುವಾಗಿ ತಿಳಿಸಿದ್ದಾರೆ.
