ಕ್ರೈಂ
ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಹಣ ಆರಭರಣ ಕಳುವು

ಸುದ್ದಿಲೈವ್.ಕಾಂ/ಶಿವಮೊಗ್ಗ
ಕೆಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗಲೇ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಮತ್ತು ನಗದು ಹಣವನ್ನ ಕಳ್ಳತನ ಮಾಡಿರುವ ಘಟನೆ ನಿನ್ನೆ ನಡೆದಿದೆ.
ಸರ್ಕಾರಿ ನೌಕರರಾಗಿರುವ ಅನಿತಾ ಎಂಬುವರು ಹರಿಹರಕ್ಕೆ ಹೋಗುವ ಸಂಬಂದ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ದಾವಣಗೆರೆ ಫ್ಲಾಟ್ ಫಾರಂ ನಲ್ಲಿ ನಿಂತಿದ್ದ ಬಸ್ ನ್ನ ಹತ್ತುವಾಗ ಡೋರ್ ಬಳಿ ನಿಂತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಇವರ ವ್ಯಾನಿಟಿ ಬ್ಯಾಗ್ ನಲ್ಲಿದ್ದ
1,50,000/- ಬೆಲೆ ಬಾಳುವ 30 ಗ್ರಾಂ ಲಾಂಗ್ ಚೈನು , 5 ಸಾವಿರ ರೂ. ನಗದು, ಎಟಿಎಂ ಕಾರ್ಡ್, ವಾಹನದ ದಾಖಲಾತಿಯನ್ನ ಕಳವು ಮಾಡಿಕೊಂಡು ಹೋಗಿರುವುದಾಗಿ ಮಹಿಳೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
