ಹಿಂದೂ ಮುಸ್ಲೀಂ ಐಕ್ಯತೆಗೆ ಕಾಂಗ್ರೆಸ್ ಅಡ್ಡಿ-ಈಶ್ವರಪ್ಪ ಆರೋಪ

ಸುದ್ದಿಲೈವ್.ಕಾಂ/ಶಿವಮೊಗ್ಗ
ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಹಿಂದೂ ದೇವಾಲಯವನ್ನ ಧ್ವಂಸಗೊಳಿಸಿ ಮಸೀದಿ ಕಟ್ಟಿದ ವಿಚಾರದ ಬಗ್ಗೆ ಖುದ್ದು ಮುಸ್ಲೀಂರೇ ಒಪ್ಪಿಕೊಳ್ಳುತ್ತಿದ್ದು, ಕಾಂಗ್ರೆಸ್ ಈ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದೇ ಕುತೂಹಲವಾಗಿದೆ ಎಂದು ಮಾಜಿ ಸಚಿವ ಈಶ್ವರಪ್ಪ ತಿಳಿಸಿದರು
ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಶ್ರೀರಂಗಪಟ್ಟಣದ ಮಸೀದಿಯಲ್ಲಿ ಹಿಂದು ದೇವಾಲಯ ಇದ್ದ ವಿಚಾರದ ಬಗ್ಗೆ ಎಲ್ಲಾ ಟಿವಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶ್ರೀರಂಗಪಟ್ಟಣದ ಮಸೀದಿಯಲ್ಲಿ ಆಂಜನೇಯ ದೇವಸ್ಥಾನ ಇತ್ತು ಎಂಬುದನ್ನ ಮಸಲ್ಮಾನರೇ ಒಪ್ಪಿದ್ದಾರೆ ಎಂದರು.
ಆ ಸಂದರ್ಭದಲ್ಲಿ ದೇವಸ್ಥಾನವನ್ನು ಪಕ್ಕಕ್ಕೆ ಸ್ಥಳಾಂತರಿಸಿ, ಆಂಜನೇಯ ದೇವಸ್ಥಾನ ಉಳಿಸಿಕೊಟ್ಟಿದ್ದೇವೆ ಅಂತಾ ಹೇಳುತ್ತಿದ್ದಾರೆ. ದೇವಸ್ಥಾನ ಏಕೆ ಸ್ಥಳಾಂತರ ಮಾಡಿದ್ರಿ, ಮಸೀದಿ ಏಕೆ ಕಟ್ಟಿದ್ರಿ..? ಎಂದು ಪ್ರಶ್ನಿಸಿದ ಈಶ್ವರಪ್ಪ ಇದಕ್ಕೆ ಕಾಂಗ್ರೆಸ್ ನವರು ಏನು ಉತ್ತರ ಕೊಡ್ತಾರೆ ಕಾದು ನೋಡಬೇಕಿದೆ ಎಂದರು.
36 ಸಾವಿರ ಮಂದಿರಗಳು ಜೀರ್ಣೋದ್ಧಾರ
ಈ ದೇಶದಲ್ಲಿ ಮೊಘಲರು 36 ಸಾವಿರ ದೇವಸ್ಥಾನ ಛಿದ್ರ ಛಿದ್ರ ಮಾಡಿದ್ದಾರೆ.ಇದು ದಿನೇ ದಿನೇ ಬೆಳಕಿಗೆ ಬರುತ್ತಿದೆ. ಇಲ್ಲಿ ಹಿಂದೂ ಸಮಾಜ ಯಾವುದೇ ಸಂಘರ್ಷ ಇಲ್ಲದೇ ಕೋರ್ಟ್ ಆದೇಶದಂತೆ 36 ಸಾವಿರ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡ್ತೇವೆ ಎಂದು ಈಶ್ವರಪ್ಪ ತಿಳಿಸಿದರು.
ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವ ವಿಚಾರ.
ಮದರಗಳಲ್ಲಿ ರಾಷ್ಟ್ರಗೀತೆ ಹಾಡುವ ವಿಚಾರ ಕೇಳಿ ನನಗೆ ಬಹಳ ಸಂತೋಷವಾಗಿದೆ ಎಂದು ರೋರಿಂಗ್ ಸ್ಟಾರ್ ಈಶ್ವರಪ್ಪ ಹರ್ಷ ವ್ಯಕ್ತಪಡಿಸಿದರು.
ರಾಷ್ಟ್ರ ದ್ರೋಹಿಗಳು, ಭಯೋತ್ಪಾದಕರ ಬಾಯಲ್ಲಿ ಕೂಡಾ ರಾಷ್ಟ್ರಗೀತೆ ಹೇಳುತ್ತೇವೆ ಅಂತಾ ಹೇಳಿರುವುದನ್ನು ಸ್ವಾಗತ ಮಾಡ್ತೇನೆ ಎಂದು ಹೇಳಿದರು.
ಹಿಂದೂ ಮುಸ್ಲೀಂ ಐಕ್ಯತೆಗೆ ಕಾಂಗ್ರೆಸ್ ಅಡ್ಡಿ
ಆಜಾನ್ ಕೂಗುವ ವಿಚಾರದಲ್ಲಿ ಸಿದ್ದು, ಡಿಕೆಶಿ ಅವರು ಬಹಳ ವರ್ಷದಿಂದ ಆಜಾನ್ ಕೂಗುತ್ತಾರೆ ಬಿಜೆಪಿಯವರು ಏಕೆ ಅಡ್ಡ ಬರುತ್ತಾರೆ ಅಂತಿದ್ರು ಈಗ ಮುಸಲ್ಮಾನರೇ ದಿನಕ್ಕೆ ಐದು ಹೊತ್ತು ಮೈಕ್ ನಲ್ಲಿ ಆಜಾನ್ ಕೂಗುವುದನ್ನ 4 ಹೊತ್ತು ಕೂಗುವುದಾಗಿ ತಿಳಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಉತ್ತರಿಸಬೇಕಾಗುತ್ತದೆ ಎಂದರು.
ಉಮರ್ ಷರೀಫ್ ನೇತೃತ್ವದಲ್ಲಿ ಆಜಾದ್ ಕೂಗದಿರಲು ನಿರ್ಧರಿಸಿದ್ದಾರೆ. ಹಿಂದು ಮುಸಲ್ಮಾನರು ಒಟ್ಟಾಗಿ ಹೋಗೋಣ ಅಂದುಕೊಂಡಿದ್ದರೂ ಕಾಂಗ್ರೆಸ್ ನವರು ಇದಕ್ಕೆ ಬಿಡುತ್ತಿಲ್ಲ. ಕಾಂಗ್ರೆಸ್ ನವರು ಇದಕ್ಕೆ ಅಡ್ಡ ಬರುತ್ತಿದ್ದಾರೆ ಎಂದು ದೂರಿದರು.
