ಕ್ರೈಂ

ಬಸ್ ನ ಸೀಟ್ ವಿಚಾರದಲ್ಲಿ ಮಾಲೀಕ ಮತ್ತು ಪ್ರಯಾಣಿಕರ ನಡುವೆ ಮಾರಾಮಾರಿ

ಸುದ್ದಿಲೈವ್.ಕಾಂ/ಸಾಗರ

ಬಸ್ ನ ಸೀಟ್ ವಿಚಾರದಲ್ಲಿ ಬಸ್ ನ ಮಾಲೀಕ ಮತ್ತು ಪ್ರಯಾಣಿಕರ ನಡುವೆ ಮಾರಾಮಾರಿಗಳೇ ನಡೆದು ಹೋಗಿದೆ. ಯಕಶ್ಚಿತ್ ಬಸ್ ನ ಸೀಟಿನ ವಿಚಾರದಲ್ಲಿ ಸಾಗರ ಖಾಸಗಿ ಬಸ್ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದ್ದು ಈ ಘಟನೆ ಸಂಬಂಧ ದೂರು ಪ್ರತಿದೂರು ದಾಖಲಾಗಿದೆ.‌

ಬಾಲಾಜಿ ಬಸ್ ನ ಮಾಲೀಕ ಮೊಹ್ಮದ್ ಸಾದ್ ಮತ್ತು ಪ್ರಯಾಣಿಕ ಪ್ರಶಾಂತ್ ನಡುವೆ ಈ ಗಲಾಟೆ ನಡೆದಿದೆ.‌ ಸೊರಬದಿಂದ ಸಾಗರದ ಮೂಲಕ ಬೆಂಗಳೂರಿಗೆ ಹೋಗುವ ಬಸ್ ಪ್ರತಿದಿನ 10 ಗಂಟೆಗೆ ಬರುತ್ತದೆ. ಬಸ್ ಬಂದಾಗ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ಪ್ರಶಾಂತ್ ಎಂಬುವರು ಬಸ್ ನ್ನ ಹತ್ತಿ ಸೀಟ್ ನಂಬರ್ ಯು1 ನ್ನ ನಾನು ಬುಕ್ ಮಾಡಿದ್ದೇನೆ ಎಂದಿದ್ದಾರೆ.

ಅದಕ್ಕೆ ಮಾಲೀಕ ಮೊಹಮದ್ ಸಾದಾ ಇಲ್ಲ ಇದನ್ನ ಕಾರ್ತಿಕ್ ಎಂಬುವರು ಆನ್ ಲೈನ್ ನಲ್ಲಿ ಬುಕ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇಷ್ಟಕ್ಕೆ  ಪ್ರಶಾಂತ್ ಮತ್ತು ಬಸ್ ಮಾಲೀಕರ ನಡುವೆ ವಾಗ್ಯುದ್ಧಗಳಾಗಿವೆ.  ನನಗೆ ಈ ಸೀಟು ಬೇಕು ಕೊಡದಿದ್ದರೆ ಬಸ್ ಹೊರಡಲು ಬಿಡುವುದಿಲ್ಲವೆಂದು ಪ್ರಶಾಂತ್ ಗಲಾಟೆ ಮಾಡಿದ್ದಾನೆ. ತಕ್ಷಣವೇ ಶಶಿ ಎಂಬುವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದಾನೆ.

ಶಶಿ‌ ಮತ್ತು ಇತರೆ ನಾಲ್ವರು ಬಸ್ ನಿಲ್ದಾಣಕ್ಕೆ ಬಂದು‌ ಮಾಲೀಕನ ಮೇಲೆನೆ ಹಲ್ಲೆ ನಡೆಸಿದ್ದಾರೆ. ಜಗಳ ಬಿಡಿಸಲು ಬಂದ ಮಣಿಕಂಠ ಎಂಬುವರಿಗೆ ಹೊಡೆತ ಬಿದ್ದಿದೆ. ಈ ವೇಳೆ ಮೊಹ್ಮದ್ ಸಾದ್ ಹಣ ಮತ್ತು ಐಫೋನ್ 7 ಪ್ಲಸ್ ಮೊಬೈಲ್ ಕಳೆದುಕೊಂಡಿದ್ದಾರೆ. ಈ ವೇಳೆ ಪೊಲೀಸ್ ಬಂದಿದ್ದನ್ನು ಕಂಡು ಶಶಿ ಅಂಡ್ ಟೀಮ್ ಪರಾರಿಯಾಗಿದೆ.

ನಂತರ ಬಸ್ ಮಾಲೀಕರಿಗೆ ಮೊಬೈಲ್ ಮೂಲಕ ಕರೆ ಮಾಡಿದ್ದು ನಿನ್ನ ಬಸ್ ಸುಟ್ಟು ಹಾಕುವುದಾಗಿ ಧಮ್ಕಿ ಕೊಟ್ಟಿರುವುದಾಗಿ ಸಾದ್ ಎಫ್ಐಆರ್ ನಲ್ಲಿ ದೂರು ಕೊಟ್ಟಿದ್ದಾರೆ. ಆದರೆ ಸಾದ್ ಪ್ರಶಾಂತ್ ಎಂಬುವರ ಹೆಸರಿನ ಮೇಲೆ ದೂರು ದಾಖಲಿಸದೆ ಅಪರಿಚಿತರು ಎಂದು ದೂರು ದಾಖಲಿಸಿದ್ದಾರೆ.

ಅದೇ ರೀತಿ ಪ್ರಶಾಂತ್ ಸಹ‌ ಬಸ್ ನ ಮಾಲೀಕ ಸಾದ್ ವಿರುದ್ಧ ಎರಡು ದಿನ ಬಿಟ್ಟು ದೂರು ದಾಖಿಸಿದ್ದಾರೆ. ಪ್ರಯಾಣದ ಹಿಂದಿನ ದಿನ ಬಾಲಾಜಿ ಬಸ್ ನ ಏಜೆಂಟ್ ಗೆ ಕರೆ ಮಾಡಿದ್ದ ಪ್ರಶಾಂತ್ ಬೆಂಗಳೂರಿಗೆ ಒಂದು ಟಿಕೇಟ್ ಬುಕ್ ಮಾಡಿದ್ದಾರೆ. ಬಾಲಾಜಿ ಬಸ್ ನ ಉದ್ಯೋಗಿ ನಾಗರಾಜ್ ಬಸ್ ಬುಕ್ಕಿಂಗ್ ನ್ನ ಪ್ರಶಾಂತ್ ಗೆ ಕನ್ಫರ್ಮ್ ಮಾಡಿದ್ದಾರೆ.

ಆದರೆ ಪ್ರಯಾಣದ ದಿನದಂದು ಪ್ರಶಾಂತ್ ಬಸ್ ಹತ್ತಿದಾಗ ಬಸ್ ನ ಮಾಲೀಕ ಮೊಹ್ಮದ್ ಸದಾ  ಯಾವ ಸೀಟು ಖಾಲಿ ಇಲ್ಲ ಎಲ್ಲಾ ಬುಕ್ಕಿಂಗ್ ಆಗಿದೆ ಎಂದಿದ್ದಾರೆ. ಈ ವೇಳೆ ಪ್ರಶಾಂತ್ ನಾನು ನಿನ್ನಯೇ ಕರೆ ಮಾಡಿ ನಿಮ್ಮ‌ಸಿಬ್ಬಂದಿಗೆ ಒಂದು ಸೀಟ್ ಕನ್ಫರ್ಮ್ ಮಾಡಿದ್ದೆನು ಎಂದು ಹೇಳಿದಾಗ ಸಾದ್ ಬಸ್ ನಿಂದ ಕೆಳೆಗೆ ಇಳಿದು ಹೋಗು ಎಂದು ಪ್ರಶಾಂತ್ ನ ಲಗೇಜ್ ನ್ನ ಬಸ್ ನಿಂದ ಹೊರಗೆ ಹಾಕಿದ್ದಾನೆ.

ಈ ವೇಳೆ ಸಾದ್ ನ ಐವರು ಕಡೆಯವರು ಪ್ರಶಾಂತ್ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಇತರೆ ಪ್ರಯಾಣಿಕರು ಮತ್ತು‌ಆತನ ಸ್ನೇಹಿತ‌ಜಗದೀಶ್ ಸಮಾಧಾನ ಮಾಡಿ ಅಪ್ಪರ್ ಸ್ಲೀಪರ್ ಸೀಟ್ ನಲ್ಲಿ ಪ್ರಶಾಂತ್ ಗೆ ಅವಕಾಶ ಕಲ್ಪಸಲಾಗಿದೆ. ಆದರೆ ಪ್ರಯಾಣದ ವೇಳೆ ಮಹ್ಮದ್ ಸಾದ್ ಈತನು ಸಾಗರಕ್ಕೆ ವಾಪಾಸ್ ಬಾ‌, ಬಸ್ ನ ಜಾಕ್ ನಿಂದ‌ ಹೊಡೆದು‌ ಸಾಯಿಸುವೆ ಎಂದು ಹಾಗೂ ಹಣದ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಿ ಪ್ರಶಾಂತ್ ಬೆಂಗಳೂರಿಗೆ ಹೋಗಿ ಸಾಗಕ್ಕೆ ವಾಪಾಸ್ ಬಂದ ನಂತರ ಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ‌

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button