ಸಿಗಂದೂರು ಬಳಿ ಟಿಟಿ ಪಲ್ಟಿ-ಐವರಿಗೆ ಗಾಯ

ಸುದ್ದಿಲೈವ್.ಕಾಂ/ಸಾಗರ
ಸಿಗಂದೂರಿನಲ್ಲಿ ಚೌಡೇಶ್ವರಿ ದೇವಿಯ ದೇವಸ್ಥಾನದ ಬಳಿಯ ಪಾರ್ಕಿಂಗ್ ಲಾಟ್ ನಲ್ಲಿ ಟೆಂಪೋಟ್ರಾವೆಲರ್ ಪಲ್ಟಿ ಹೊಡೆದಿದ್ದು, ಟಿಟಿಯಲ್ಲಿದ್ದ ಐವರಿಗೆ ಗಾಯಗಳಾಗಿರುವ ಘಟನೆ ಇಂದು ಮಧ್ಯಾಹ್ನ 2 ಗಂಟೆಯ ವೇಳೆಯಲ್ಲಿ ನಡೆದಿದೆ.
ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನ ಪಡೆದ 10 ಜನ ಪ್ರಯಾಣಿಕರು ಟಿಟಿ ಹತ್ತಿದ್ದು ಟಿಟಿ ಸಹ ಚಲಿಸುತ್ತಿದ್ದಂತೆ ದಿಡೀರೆಂದು ರಸ್ತೆ ಪಕ್ಕದ ತಗ್ಗಿನ ಪ್ರದೇಶಕ್ಕೆ ಪಲ್ಟಿ ಹೊಡೆದಿದೆ. ಟಿಟಿ ಚಾಲಕ ನವೀನ್ ಎಂಬುವರಿಗೆ ಸಡನ್ ಆಗಿ ಫಿಡ್ಸ್ ಕಾಣಿಸಿಕೊಂಡ ಕಾರಣ ಈ ಅವಘಡ ನಡೆದಿದೆ ಎನ್ನಲಾಗಿದೆ.
10 ಜನ ಪ್ರಯಾಣಿಕರಲ್ಲಿ ನಾಲ್ವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಬಾಬು,ಸುಚಿತ್ರ,ಡಿಂಪಾ,ಸಂಚಿತ ಮತ್ತು ಗುತ್ಯಮ್ಮ ಎಂಬುವರಿಗೆ ಗಾಯಗಳಾಗಿವೆ. ಇದರಲ್ಲಿ ಬಾಬು ಎಂಬುವರಿಗೆ ಕಾಲು ಮುರಿದಿದೆ ಎಂದು ಹೇಳಲಾಗುತ್ತಿದೆ. ಸ್ಥಳೀಯರು ಮತ್ತು ಪೊಲೀಸ್ ಇಲಾಖೆಯ ಸಮಯ ಪ್ರಜ್ಞೆಯಿಂದ ಪ್ರಯಾಣಿಕರನ್ನ ತಕ್ಷಣವೇ ತುಮರಿ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದೆ.
ಈ 10 ಜನರೂ ಸಹ ಬೆಂಗಳೂರಿನ ಬಿಡದಿ ನಿವಾಸಿಗಳಾಗಿದ್ದು ಒಂದೇ ಕುಟುಂಬದ 10 ಜನರು ದೇವಿಯ ದರ್ಶನಕ್ಕಾಗಿ ಸಿಗಂದೂರಿಗೆ ಬಂದಿದ್ದರು. ಅವಘಡದಲ್ಲಿ ಚಾಲಕ ಸೇರಿ ಐವರೂ ಸಹ ಸಧ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಲ್ಲೂ ಕೆಲಸಕ್ಕೆ ಬಾರದ ಅಂಬ್ಯುಲೆನ್ಸ್
ಪಲ್ಟಿ ಹೊಡೆದ ಟಿಟಿಯಿಂದ ಪ್ರಯಾಣಿಕರನ್ನ ದೇವಸ್ಥಾನದ ಅಂಬ್ಯುಲೆನ್ಸ್ ನಲ್ಲಿ ತುಮರಿ ಪ್ರಾಥಮಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಎರಡು ಅಂಬ್ಯುಲೆನ್ಸ್ ನ್ನ ಇಲ್ಲಿನ ಪ್ರಾಥಮಿಕ ಆಂಬ್ಯಲೆನ್ಸ್ ನ್ನ ನೀಡಲಾಗಿತ್ತು. ಆದರೆ ಒಂದು ಅಂಬ್ಯಲೆನ್ಸ್ ಸಾಗರಕ್ಕೆ ತೆರಳಿದೆ. ಇನ್ನೊಂದು ಟಿಟಿ ಕಳೆದ ಒಂದು ವರೆ ತಿಂಗಳಿಂದ ಆರ್ ಟಿ ಒ ದಾಖಲಾತಿಗಾಗಿ ಕಾಯಲಾಗುತ್ತಿದೆ.
ಒಟ್ಟಿನಲ್ಲಿ ಪ್ರಯಾಣಿಕರು ಹೆಚ್ಚಿರುವ, ಅವಘಡಗಳು ನಡೆಯ ಬಹುದಾದ ಜಾಗದಲ್ಲಿ ಆರೋಗ್ಯ ಇಲಾಖೆ ಸರಿಯಾದ ವ್ಯವಸ್ಥೆ ಮಾಡಿಕೊಳ್ಳದೆ ಇರುವುದು ನಿಜವಾಗಿಯೂ ದುರಂತವೇ ಸರಿ. ನಿರ್ಲಕ್ಷ ತನವೂ ಹೌದು. ಎಷ್ಟು ಅಭಿವೃದ್ಧಿ ಕೆಲಸ ಮಾಡಿದರೇನು? ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆಯಿಲ್ಲದ ಮೇಲೆ ಅಭಿವೃದ್ಧಿ ಎಷ್ಟು ಮಾಡಿದರೇನು ಎಂದು ಸ್ಥಳೀಯರು ಹಿಡಿ ಶಾಪಹಾಕುವಂತಾಗಿದೆ.
