ಗೋಲ್ಡ್ ಲೋನ್ ತೀರಿಸಲು ಹೋಗಿ ಯುವಕನಿಗೆ ಲಕ್ಷಾಂತರ ರೂ ವಂಚನೆ

ಸುದ್ದಿಲೈವ್.ಕಾಂ/ಶಿವಮೊಗ್ಗ
ಹಣ ವರ್ಗಾವಣೆಯಲ್ಲಿಯೇ ಯಾಮಾರಿಸಿ ಯುವಕನಿಗೆ ಲಕ್ಷಾಂತರ ರೂ ಹಣ ವಂಚಿಸಿರುವ ಪ್ರಕರಣ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮುತ್ತೂಟ್ ಫೈನಾನ್ಸ್ ನಲ್ಲಿ ಅಡವಿಟ್ಟಿದ್ದ ಚಿನ್ನಾಭರಣಗಳನ್ನ ಬಿಡಿಸಿಕೊಳ್ಳು ಮುಂದಾಗಿದ್ದ ಯುವಕ ತಮ್ಮ ಕೆನರಾ ಬ್ಯಾಂಕ್ ಅಕೌಂಟ್ ಗೆ ನೇರವಾಗಿ 1,90,000/- ರೂ.ಹಣ ಡಿಪಾಸಿಟ್ ಮಿಷಿನ್ ನಲ್ಲಿ ಡಿಪಾಸಿಟ್ ಮಾಡಿದ್ದಾರೆ. ಅದರ ಸ್ಲಿಪ್ ಸಹ ಪಡೆದಿದ್ದಾರೆ. ಆಭರಣಗಳನ್ನ ಬಿಡಿಸಿಕೊಳ್ಳಲು ಈ ಹಣ ಕಡಿಮೆ ಇರುವುದರಿಂದ ಪರಿಚಯಿಸ್ಥರಿಗೆ ಕರೆ ಮಾಡಿ 1,80,000/- ರೂ. ಹಣ ಡಿಪಾಸಿಟ್ ಮಾಡುವಂತೆ ಯುವಕ ಕೇಳಿಕೊಂಡಿದ್ದಾರೆ.
ಪರಿಚಯಸ್ಥರು ಸಹ ನೆಫ್ಟ್ ಬ್ಯಾಂಕಿಂಗ್ ಮಾಡಿ ಹಣ ತುಂಬಿರುವುದಾಗಿ ತಿಳಿಸಿದ್ದಾರೆ. ಆದರೆ ಆ ಹಣ ತಮ್ಮ ಖಾತೆಗೆ ಹಣ ತುಂಬಿದ್ದರ ಬಗ್ಗೆ ಮೊಬೈಲ್ ಮೆಸೇಜ್ ಬಂದಿರುವುದಿಲ್ಲ. ಹಣವನ್ನ ಡ್ರಾ ಮಾಡಲು ಹೋದಾಗ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲವೆಂದು ಮೆಸೇಜ್ ಬಂದಿರುತ್ತದೆ.
ಬ್ಯಾಂಕ್ ಕ್ಯಾಂಡಿ ಆಪ್ ನಲ್ಲಿ ಬ್ಯಾಲೆನ್ಸ್ ನೋಡಲು ಹೋದಾಗ ಒಮ್ಮೆ 1 ಲಕ್ಷ ರೂ. ಮತ್ತೊಮ್ನೆ 90 ಸಾವಿರ, ಮಗದೊಮ್ಮೆ 80 ಸಾವಿರ ಹಾಗೂ ಇನ್ನೊಮ್ಮೆ 1 ಲಕ್ಷ ರೂ. ಹಣ IMPS ಮೂಲಕ ಹಣ ಡ್ರಾ ಮಾಡಲಾಗಿದೆ. ಇದರಿಂದ 3,70,000/- ರೂ. ಹಣ ವಿತ್ ಡ್ರಾ ಮಾಡಲಾಗಿದೆ. ಈ ಹಣ ಅಪರಿಚಿತನ ಬ್ಯಾಂಕ್ ಖಾತೆಗೆ ವರ್ಗಾವಣೆಗೊಂಡಿರುವುದು ತಿಳಿದು ಬಂದಿದ್ದು ಯುವಕ ಸಂಜಯ್ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
