ತಾಲ್ಲೂಕು ಸುದ್ದಿ
ಭದ್ರಾವತಿ ಆಯುಕ್ತರಾಗಿ ಮನುಕುಮಾರ್ ನೇಮಕ

ಸುದ್ದಿಲೈವ್.ಕಾಂ/ಭದ್ರಾವತಿ
ಇಲ್ಲಿನ ನಗರಸೌಭೆ ಆಯುಕ್ತ ಪರಮೇಶ್ವರರವರ ವರ್ಗಾವಣೆ ಆಗಿದೆ. ಇವರ ಸ್ಥಾನಕ್ಕೆ ಮನುಕುಮಾರ್ ನೇಮಕಗೊಂಡಿದ್ದಾರೆ. ಕಳೆದ ಒಂದು ವರ್ಷ ಎರಡು ದಿನಗಳು ಕಾಲಾವಧಿಯ ವರೆಗೆ ಆಯುಕ್ತರಾಗಿದ್ದ ಪರಮೇಶ್ವರರವರ ವರ್ಗಾವಣೆ ಸಹಜವಾಗಿದ್ದರೂ ಅವರಿಗೆ ವರ್ಗಾವಣೆಯ ಸ್ಥಳ ನಿಗದಿಯಾಗಿಲ್ಲ.
2011 ರ ಕರ್ನಾಟಕ ಪೌರಾಡಳಿತ ಸೇವೆಯ ಮುಖ್ಯಾಧಿಕಾರಿ ಶೇಣಿ-01 ರ ಗ್ರೂಪ್-ಬಿ ಹುದ್ದೆಗಳಿಗೆ ಆಯ್ಕೆಯಾಗಿ ಸ್ಥಳ ನಿರೀಕ್ಷಣೆಯಲ್ಲಿದ್ದ 6 ಜನ ಅಧಿಕಾರಿಗಳು ವರ್ಗಾವಣೆಗಡಿದ್ದು ಇದರಲ್ಲಿ ಮನು ಕುಮಾರ್ ತಮ್ಮ ಸ್ಥಾನಕ್ಕೆ ವರ್ಗಾವಣೆ ಆಗಿದ್ದಾರೆ.
ಆದರೆ ಆಯುಕ್ತ ಪರಮೇಶ್ವರ್ ಅವರನ್ನ ವರ್ಗಾವಣೆಗೊಳಿಸಿದರೂ ಸ್ಥಳ ನಿಯೋಜನೆ ಮಾಡಿಲ್ಲ. ಮನುಕುಮಾರ್ ಇದೇ ಮೊದಲ ಬಾರಿಗೆ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
