ಭದ್ರಾವತಿ ಬಾರಂದೂರಿನ ಬಳಿ ದರೋಡೆ ಪ್ರಕರಣ-ಮೂವರ ಬಂಧನ

ಸುದ್ದಿಲೈವ್.ಕಾಂ/ಭದ್ರಾವತಿ
ಬಾರಂದೂರಿನ ಕೃಷಿ ಇಲಾಖೆ ಸಮೀಪ ದರೋಡೆ ನಡೆಸಿದ ಮೂವರು ಆರೋಪಿಗಳನ್ನ ಬಂಧಿಸಿರುವ ಪೊಲೀಸರು 37 ಸಾವಿರ ರೂ ನಗದು ಮತ್ತು ಎರಡು ಬೈಕ್ ಗಳನ್ನವಶಕ್ಕೆ ಪಡೆದಿದ್ದರು.
ಲಗೇಜ್ ಆಟೋ ಚಾಲನೆ ಮಾಡಿಕೊಂಡು ಹೋಗುವಾಗ ಬೈಕ್ ನಲ್ಲಿ ಬಂದ ಅಪರಿಚಿತರು ಬಂದಿ ಆಟೋ ಚಾಲಕನ ಪ್ಯಾಂಟ್ ಜೇಬಿನಲ್ಲಿ 50 ಸಾವಿರ ರೂ. ಹಣ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿತ್ತು. ಈ ಘಟನೆಯನ್ನ ದಾಖಲಿಸಿಕೊಂಡು ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಕೆಂಚೇನಹಳ್ಳಿಯ ಬಸವರಾಜ್, ಪವನ್ ಮತ್ತು ಯರಗ ನಾಳ್ ಭರತ್ ನನ್ನ ಬಂಧಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೋಪಾಲ ಕಾಲೋನಿಯ ನಿವಾಸಿ ಜಯೇಂದ್ರ ಎಂಬ ರೈತ ತಮ್ಮಹೊಸ ಮನೆ ಗೃಹಪ್ರವೇಶಕ್ಕಾಗಿ ಭದ್ರಾವತಿಯ ಬೊಮ್ಮೇನಹಳ್ಳಿಯ ನಿವಾಸಿ ಅಂಕೇಗೌಡರರಿಂದ ಹಣ ಪಡೆಯಲು ಮೇ.9 ರಂದು ರಾತ್ರಿ ಲಗೇಜ್ ಆಟೋದಲ್ಲಿ ತಮ್ಮಯ್ಯರವರನ್ನ ಕೂರಿಸಿಕೊಂಡು ಬಂದಿದ್ದಾರೆ.
ಅಂಕೇಗೌಡರ ಬಳಿ 1 ಲಕ್ಷ ರೂ. ಹಣ ಪಡೆದುಕೊಂಡು ವಾಪಾಸ್ ತರೀಕೆರೆಗೆ ತೆರಳುವಾಗ ಸುಮಾರು 11-15 ರ ಸಮಯದಲ್ಲಿ ಬಾರಂದೂರಿನ ಪೆಟ್ರೋಲ್ ಬಂಕ್ ನಲ್ಲಿ ಲಗೇಜ್ ಆಟೋಕ್ಕೆ ಪೆಟ್ರೋಲ್ ಹಾಕಿಸಿಕೊಂಡು ವಾಪಾಸ್ ಮನೆಗೆ ತೆರಳುವ ವೇಳೆ ಕೃಷಿ ಇಲಾಖೆಯ ಎದುರು ಬೈಕ್ ನಲ್ಲಿ ಬಂದ ಅಪರಿಚಿತರು ಅಡ್ಡಕಟ್ಟಿದ್ದಾರೆ.
ಅಕ್ಸಿಡೆಂಟ್ ಮಾಡಿಕೊಂಡು ಇಲ್ಲಿಗೆ ಬಂದಿದ್ದೀರಾ ಎಂದು ಅಪರಿಚಿತ ಬೈಕ್ ಸವಾರರು ಕ್ಯಾತೆ ತೆಗೆದಿದ್ದಾರೆ. ಕ್ಯಾತೆ ತೆಗೆಯುತ್ತಿದ್ದಂತೆ ಮತ್ತೋರ್ವ ಬೈಕ್ ನಲ್ಲಿ ಬಂದು ಅಕ್ಸಿಡೆಂಟ್ ಮಾಡಿ ಇಲ್ಲಿಗೆಬಂದಿದ್ದೀರ ಎಂದು ಜಯೇಂದ್ರವರ ಮೇಲೆ ಹಲ್ಲೆ ನಡೆಸಿದ್ದಾರೆ. ಆಟೋದೊಳಗೆ ಕುಳಿತಿದ್ದ ತಮ್ಮಯ್ಯ ಬಿಡಿಸಲು ಮುಂದಾಗಿದ್ದಾರೆ.
ಈ ವೇಳೆ ಜಯೇಂದ್ರರವರ ಪ್ಯಾಂಟ್ ಜೇಬಿನಲ್ಲಿದ್ದ 50 ಸಾವಿರ ರೂ ಹಣವನ್ನ ಕಿತ್ತುಕೊಂಡು ವಾಪಾಸ್ ಬೈಕ್ ನಲ್ಲಿ ಬಾರಂದೂರು ಕಡೆ ತೆರಳಿದ್ದಾರೆ. ಜಗಳದಲ್ಲಿ ಜಯೇಂದ್ರ ಮತ್ತು ತಮಯ್ಯ ಮೈಕೈ ನೋವು ಪಡಿಸಿದ್ದರಿಂದ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ.
ಪ್ರಕರಣ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂರು ದಿನಗಳ ಒಳಗೆ ಆರೋಪಿಯನ್ನ ಪತ್ತೆಹಚ್ಚಿ 37 ಸಾವಿರ ರೂ. ಹಣ ವಶಪಡಿಸಿಕೊಂಡಿದ್ದಾರೆ.
