ಸುದ್ದಿ

ಬಂಗಾರದ ಪಾಲಿಶ್ ಗೆ ಮಹಿಳೆಯರ ಮಾಂಗಲ್ಯ ಸರವೇ ಟಾರ್ಗೆಟ್!

ಸುದ್ದಿಲೈವ್.ಕಾಂ/ಭದ್ರಾವತಿ

ಬಂಗಾರದ ಪಾಲಿಶ್ ನ್ನ ನಿರಾಕರಿಸಿದ ಮಹಿಳೆಯೋರ್ವಳ ಕಣ್ಣಿಗೆ ಪೌಡರ್ ಎರಚಿ ಆಕೆಯ ಕುತ್ತಿಗೆಯಲ್ಲಿದ್ದ 40 ಗ್ರಾಂ ಮಾಗಲ್ಯಸರವನ್ನ ಕಿತ್ತುಕೊಂಡು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಂಗಾರದ ಪಾಲಿಶ್ ಹಾಕುವವರು ಎಂದು ಹೇಳಿಕೊಂಡು ಭದ್ರಾವತಿಯ ಕೋಡಿಹಳ್ಳಿ ಗ್ರಾಮದ ಶಿವಲಿಂಗಪ್ಪನವರ ಮನೆಗೆ ಬಂದಿದ್ದ ಇಬ್ಬರು ಅಪರಿಚಿತರಿಂದ ಈ ಘಟನೆ ನಡೆದಿದೆ. ಶಿವಲಿಂಗಪ್ಪನವರ ಮನೆಗೆ ಬಂದಿದ್ದ ಇಬ್ವರು ಶಿವಲಿಂಗಪ್ಪನವರ ಪತ್ನಿ ಹೆಸರನ್ನ ಕೂಗಿ ಕರೆದಿದ್ದಾರೆ.

ಈ ವೇಳೆ ಶಿವಲಿಂಗಪ್ಪನವರು ಮನೆಯಲ್ಲಿ ಇಲ್ಲದೆ ಇರುವುದರಿಂದ ಮನೆಯಲ್ಲಿ ಮಕ್ಕಳು ಮತ್ತು ಪತ್ನಿ ಶೀಲಾ ಇದ್ದಿದ್ದರಿಂದ ಬಟ್ಟೆ ಒಗೆಯುತ್ತಿದ್ದ ಪತ್ನಿಶೀಲಾ ಯಾರು ಎಂದು ಮನೆಯ ಪ್ರವೇಶ ದ್ವಾರದ ಬಳಿ ಬಂದು ಕೇಳಿದ್ದಾರೆ. ಬಂಗಾರದ ಆಭರಣಗಳಿಗೆ ಪಾಲಿಶ್ ಹಾಕುವರು ಎಂದು ಅಒರಿಚಿತರು ಹೇಳಿದ್ದಾರೆ.

ಯಾವುದಾದರೂ ಬಂಗಾರ ತಂದುಕೊಡಿ ಪಾಲಿಶ್ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. ಯಾವ ಬಂಗಾರವೂ ನಮ್ಮ ಬಳಿ ಇಲ್ಲ. ಪಾಲಿಶ್ ಮಾಡಿಸೊಲ್ಲವೆಂದು ಶೀಲಾ ಉತ್ತರಿಸಿದ್ದಾರೆ.

ಉತ್ತರ ನೀಡಿದ ಮರುಕ್ಷಣವೇ ಅಪರಿಚಿತರು ತಾವು ತಂದಿದ್ದ ಪೌಡರ್ ನ್ನ ಮುಖಕ್ಕೆ ಎರಚಿ ಆಕೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ವೇಳೆ ಶೀಲಾರವರು ಕಿರುಚಾಡಿದ್ದಾರೆ. ಒಳಗೆ ಹೋಗಿ ಕಣ್ಣಿಗೆ ನೀರು ಹಾಕಿಕೊಂಡು ಬರುವಷ್ಟರಲ್ಲಿ ಅಪರಿಚಿತರು ಮಂಗಮಾಯವಾಗಿದ್ದಾರೆ.

ಮಕ್ಕಳು ಸಹ ಅಪರಿಚಿತರನ್ನ ಹುಡುಕಿದ್ದಾರೆ ಆದರೆ ಯಾವ ಪ್ರಯೋಜನಕ್ಕೂ‌ ಬಂದಿಲ್ಲ. ಶಿವಲಿಂಗಪ್ಪನವರು ಮನೆಗೆ ಬಂದಾಗ ಪತ್ನಿ ಘಟನೆಯನ್ನ ವಿವರಿಸಿದ್ದಾರೆ. ನಂತರ ಅವರೂ ಸಹ ಗ್ರಾಮದಲ್ಲಿ ಹುಡುಕಿದ್ದಾರೆ. ಆದರೆ ಯಾರೂ ಪತ್ತೆಯಾಗಿಲ್ಲ. ಕೋಡಿ ಹಳ್ಳಿ ಗ್ರಾಮದಲ್ಲಿ ಶಿವಲಿಂಗಪ್ಪನವರ ಮನೆ ಸ್ವಲ್ಪ ಹೊರವಲಯದಲ್ಲಿದ್ದು ಚೋರರಿಗೆ ಈ ಮನೆ ಟಾರ್ಗೆಟ್ ಆಗಿದೆ.

ಅಂತರಾಜ್ಯ ಗ್ಯಾಂಗ್ ಗಳು ಸಕ್ರಿಯವಾಗಿವೆಯಾ?

ಈ ಘಟನೆಗಳನ್ನ ಸೂಕ್ಷ್ಮವಾಗಿ ಗಮನಿಸಿದರೆ ಸ್ಥಳೀಯರಲ್ಲದೆ ಇತರೆ ರಾಜ್ಯಗಳಿಂದ ಬಂದು ಪ್ರಕರಣಗಳನ್ನ ಎಸಗಲಾಗುತ್ತಿದೆಯಾ‌ ಎಂಬ ಅನುಮಾನ ಹುಟ್ಟುತ್ತದೆ. ಜಾರ್ಕಂಡ್, ಬಿಹಾರ ಮತ್ತು ಉ.ಪಿಯಿಂದ ಬಂದ ಗ್ಯಾಂಗ್ ಈ ಘಟನೆ ನಡೆಸುತ್ತಿರಬಹುದು ಎಂದು ಸಮಕಿಸಲಾಗುತ್ತಿದೆ.

ಒಂದು ಜಿಲ್ಲೆಯ ಗ್ರಾಮದಲ್ಲಿ ಎಸೆಗಿದ ಕೃತ್ಯವನ್ನ ಮತ್ತೆ ಅದೇ ಜಿಲ್ಲೆಯ ಯಾವುದಾದರೂ ಗ್ರಾಮದಲ್ಲಿ ಎಸಗಲು 10-15 ದಿನಗಳ ವರೆಗೆ ಗ್ಯಾಪ್ ಕೊಟ್ಟು ಎಸೆಯಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬರುತ್ತಿದೆ. ಪಾಲಿಶ್ ನೆಪಹೇಳಿಕೊಂಡು ಬಙದು ಚಿನ್ನಾಭರಣ ಕಳವು ಆಗುತ್ತಿರುವ ಘಟನೆ ಇದುವರೆಗೂ 7 ಕ್ಕೂ ಹೆಚ್ಚು ಎಫ್ಐಆರ್ ಆಗಿರಬಹುದು.

ಸಡನ್ ಶಿಫ್ಟ್!

ಬಂಗಾರದ‌ ಪಾಲಿಶ್ ಹಾಕುವ ನೆಪದಲ್ಲಿ ಬರುವ ಈ ಗ್ಯಾಂಗ್ ಇಂದು ಒಂದು ಜಿಲ್ಲೆಯ ಗ್ರಾಮದಲ್ಲಿ ಬಂಗಾರವನ್ನ ಕದ್ದರೆ ನೆಕ್ಸ್ಟ್ ಟಾರ್ಗೆಟ್ ಬೇರೆ ಜಿಲ್ಲೆಯ ಗ್ರಾಮವೊಂದಕ್ಕೆ ಸಡನ್ ಶಿಫ್ಟ್ ಆಗುತ್ತಿದೆ. ಅಲೆಮಾರಿಗಳಂತೆ ಬಂದು ಮಹಿಳೆಯರನ್ನ ಗುರಿಯಾಗಿಸಿಕೊಂಡು ಆಭರಣಗಳನ್ನ ಅಪಹರಿಸುತ್ತಿದ್ದಾರೆ. ಹೊರರಾಜ್ಯಗಳಿಂದ ಬಂದ ತಂಡವೊಂದು ಕೃತ್ಯವೆಸಗಗುತ್ತಿದೆಯಾ ಎಂಬ ಅನುಮಾನಕಾಡುತ್ತಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button