ಸ್ಥಳೀಯ ಸುದ್ದಿಗಳು

ಮತಾಂತರ ಕಾಯ್ದೆಗೆ ವಿರೋಧವಿಲ್ಲ ಭಿನ್ನಾಭಿಪ್ರಾಯಗಳಿವೆ

ಸುದ್ದಿಲೈವ್. ಕಾಂ/ಶಿವಮೊಗ್ಗ

ಮಾ.29 ರಂದು ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಸಮಿತಿಯ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಎಂದು ಸಮಿತಿ ಅಧ್ಯಕ್ಷ ಶಾಂತಕುಮಾರ ಕೆನಡಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2009 ರ ವರೆಗೆ ಯಾವ ನಾಯಕರು ಸಮಿತಿ ರಚಿಸಲು ಕಾಳಜಿ ತೋರಲಿಲ್ಲ. ಕ್ರೈಸ್ತರನ್ನ ಬೇರುಮಟ್ಟದಿಂದ ಸಬಲಗೊಳ್ಳಬೇಕೆಂಬ ಉದ್ದೇಶದಿಂದ ಸಮತಿ ಸ್ಥಾಪನೆಯಾಗಿದೆ.ಕರ್ನಾಟಕ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ ಕ್ರೈಸ್ತರಿಗೆ ಸರ್ಕಾರದ ವಂಚನೆಯಾಗಿತ್ತುಬಿಎಸ್ ವೈ ನಿಂದ ಈ ಸಮಿತಿ ಉಗಮಗೊಂಡಿದೆ.

ಮೊದಲು ನಾನು ಮತ್ತು ವಿನ್ಸೆಂಟ್ ನವರು ಈ ಸಮಿತಿಗೆ ಸದಸ್ಯರಾಗಿದ್ದಾರೆ. ನಿಗಮಕ್ಕೆ ಆರಂಭದಲ್ಲಿ 50 ಕೋಟಿ ರೂ. ಹಣ ಎತ್ತಿಡಲಾಗಿತ್ತು. ನಂತರ ಬೇರೆ ಸರ್ಕಾರ ಬಂದಾಗ ಸ್ವಲ್ಪ ನಿರ್ಲಕ್ಷಕ್ಕೊಳಗಾಯಿತು. ದೂರುಗಳು ಬಂದು. ಈಗ ಬಿಜೆಪಿ ಸರ್ಕಾರ ಕ್ರೈಸ್ತ ಸಮುದಾಯಕ್ಕೆ ಮತ್ತೆ 50 ಕೋಟಿ ಹಣ ನೀಡಲಾಗಿದೆ. ಈಗ ವರ್ಷಕ್ಕೆ ಸಮಿತಿಗೆ 200 ಕೋಟಿ ರೂ. ಹಣಬಿಡುಗಡೆಗೆ ಸರ್ಕಾರ ಸಮ್ಮತಿ ನೀಡಿದೆ ಎಂದರು.

ಸಮಿತಿಯಲ್ಲಿ 8-9 ಯೋಜನೆಗಳಿವೆ, ಚರ್ಚ್, ದುರಸ್ತಿ ಮತ್ತು ಜೀರ್ಣೋದ್ದಾರ ಸಮಿತಿಯ ಪ್ರಮುಖ ಉದ್ದೇಶವಾಗಿದೆ. ಸಮುದಾಯ ಭವನಕ್ಕೆ ಅನುದಾನ, ವೃದ್ಧಾಶ್ರಮ, ಅನಾಥಾಶ್ರಮಗಳು, ವಿದೇಶಕ್ಕೆ ಶೈಕ್ಷಣಿಕ ಸಾಲ, ಸ್ಮಶಾನ ಗೋಡೆಗಳು ಸರಿಪಡಿಸುವ ಯೋಜನೆ ಸಮಿತಿ ಉದ್ದಾರ ಮಾಡುವ ಗುರಿ ಹೊಂದಿದೆ. ಜನಗಣತಿಯ ಪ್ರಕಾರ ಕ್ರೈಸ್ತ16 ಉಪಪಂಗಡವಿದೆ 7 ವರ್ಗಗಳಿವೆ. ಕಾಂಗ್ರೆಸ್ ಸರ್ಕಾರದ ಜನಗಣತಿ ಅವೈಜ್ಞಾನಿಕವಾಗಿದೆ ಎಂದರು.

ಮತಾಂತರ ಕಾಯ್ದೆಗೆ ವಿರೋಧವಿಲ್ಲ ಭಿನ್ನಾಭಿಪ್ರಾಯಗಳಿವೆ

ಸಮುದಾಯ ಆತಂಕ ವ್ಯಕ್ತವಾಗಿಲ್ಲ. ಹೊಸ ವಿಚಾರ ಬಂದಾಗ ವಿರೋಧ ನಡೆಯುತ್ತಿದೆ. ಮತಾಂತರನಿಷೇಧ ಕಾಯ್ದೆ ಅಲ್ಲ. ಧಾರ್ಮಿಕ ಸಂರಕ್ಷಣ ಕಾಯ್ದೆಯಾಗಿದೆ. ಬಹುಸಂಖ್ಯಾತರಿಂದ ಮನವಿ ಬಂದಾಗ ಅದನ್ನೂ ಪರಿಗಣಿಸಬೇಕು. ಆದರೆ ಇದನ್ನ ಚರ್ಚೆ ಮಾಡಿ ಜಾರಿಗೊಳಿಸಲಿ ಎಂಬುದು ಕ್ರೈಸ್ತರ ಭಾವನೆ ಅಷ್ಟೆ.

ನಾನು ಸರ್ಕಾರದ ಪ್ರತಿನಿಧಿಯಾಗಿ ಸರ್ಕಾರ ಸಮುದಾಯ ಏಳಿಗೆಗೆ ಇದೆ. ಬಿಜೆಪಿ ಎಲ್ಲಾ ಸಮುದಾಯದವರನ್ನ ನಿರ್ಲಕ್ಷಿಸಿಲ್ಲ. ಕ್ರೈಸ್ತ ಸಮುದಾಯ ಬಿಜೆಪಿಯ ಸರ್ಕಾರದಲ್ಲಿ ಸದೃಢವಾಗಿದೆ. ಬೇರುಮಟ್ಟದಲ್ಲಿ ಗಟ್ಟಿಯಾಗುತ್ತದೆ. ಮತಾಂತರ ಕಾಯ್ದೆಯನ್ನ ಸ್ವಾಗತಿಸುತ್ತೇನೆ. ಕಾಯ್ದೆಯ ಬಗ್ಗೆ ಭಿನ್ಬಾಭಿಪ್ರಾಯವಿದೆ ಆದರೆ ವಿರೋಧವಲ್ಲವೆಂದರು.

ಸುದ್ದಿಗೋಷ್ಠಿಯಲ್ಲಿ ವಿನ್ಸೆಂಟ್ ರೋಡ್ರಿಗೋ, ನವೀನ್ ಆಂಥೋನಿ, ಮಹ್ಮ ಶಫಿಉಲ್ಲಾ,ಮೊದಲಾದವರು ಉಪಸ್ಥಿತರಿದ್ದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button