ಸ್ಥಳೀಯ ಸುದ್ದಿಗಳು
ಹುಲಿ-ಸಿಂಹಧಾಮದ ಹುಲಿಯ ಸಹಜ ಸಾವು

ಸುದ್ದಿಲೈವ್.ಕಾಂ/ಶಿವಮೊಗ್ಗ
ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದ ರಾಮ ಎಂಬ 17 ವರ್ಷದ ಗಂಡು ಹುಲಿ ವಯೋಸಹಜ ಕಾರಣದಿಂದ ಮೃತಪಟ್ಟಿದೆ.
ಈ ಬಗ್ಗೆ ಸ್ಪಷ್ಟಪಡಿಸಿರುವ ಕಾರ್ಯ ನಿರ್ವಾಹಕ ನಿರ್ದೇಶಕರು ಕಾನೂನು ರೀತ್ಯಾ ಮರಣೋತ್ತರ ಪರೀಕ್ಷೆಯನ್ನು ಜರುಗಿಸಿ, ದಹನ ಕ್ರಿಯೆ ಮಾಡಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಲಿ ರಾಮನ ಸಾವಿನಿಂದ ಇದರ ಸಂಖ್ಯೆ ಈಗ ಸಫಾರಿಯಲ್ಲಿ 5 ನೇ ಸ್ಥಾನಕ್ಕೆ ಕುಸಿದಿದೆ. ಮೊದಲು 6 ಇತ್ತು. ಮೈಸೂರಿನಿಂದ ಪೂರ್ಣಿಮ ಎಂಬ ಹುಲಿಯನ್ನ ಇತ್ತೀಚೆಗೆ ಸಫಾರಿಗೆ ಕರೆತರಲಾಗಿತ್ತು. ಇದರಿಂದ ಇದರ ಸಂಖ್ಯೆ 6 ಆಗಿತ್ತು. ರಾಮನ ಸಾವಿಂದ 5 ಕ್ಕೆ ಕುಸಿದಿದೆ.
ಈ ಬಗ್ಗೆ ಮಾಹಿತಿ ನೀಡಿದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಲ್ ಚಂದ್, ಕಾಡಿನಲ್ಲಿ ಹುಲಿಗಳು ಸುಮಾರು 13 ವರ್ಷ ಬದುಕುತ್ತವೆ. ಆದರೆ ರಾಮ 17 ವರ್ಷ 6 ತಿಂಗಳು ಬದುಕಿದೆ. ಇದಕ್ಕೆ ಕಾರಣ ಇದರ ಹುಲಿ-ಸಿಂಹದಾಮದಲ್ಲಿ ಅವುಗಳ ಆರೈಕೆ ಮತ್ತು ಸೂಕ್ತ ಸಮಯದಲ್ಲಿ ವೈದ್ಯಕೀಯ ಸೌಕರ್ಯ ಸಿಗುವುದರಿಂದ 5 ವರ್ಷ ಹೆಚ್ಚಿಗೆ ಬದುಕಿದೆ ಎಂದು ತಿಳಿಸಿದ್ದಾರೆ.
