ಕ್ರೈಂ
ಶವವಾಗಿ ಬಾಲಕಿ ಪತ್ತೆ,ಬಾಲಕನಿಗಾಗಿ ಮುಂದುವರೆದ ಶೋಧ

ಸುದ್ದಿಲೈವ್.ಕಾಂ/ಭದ್ರಾವತಿ
ಸಮೀಪದ ಹೆಂಚಿನ ಸಿದ್ದಾಪುರದಲ್ಲಿ ನಿನ್ನೆ ಬೆಳಿಗ್ಗೆ ಭದ್ರಾ ಬಲದಂಡೆ ನಾಲೆಗೆ ದೊಡ್ಡಪ್ಪನ ಜೊತೆಗೆ ಈಜಲು ಹೋದಾಗ ನಡೆದ ಅವಘಡದಲ್ಲಿ ನೀರುಪಾಲಾಗಿದ್ದ ಇಬ್ಬರು ಮಕ್ಕಳಲ್ಲಿ ಬಾಲಕಿಯು ಶವ ಪತ್ತೆಯಾಗಿದ್ದು, ಬಾಲಕನಿಗಾಗಿ ಶೋಧಕಾರ್ಯ ಮುಂದುವರೆದಿದೆ.
ಬಾಲಕಿ ಚಂದನ ಶವವಾಗಿ ಪತ್ತೆಯಾಗಿದ್ದಾಳೆ. ನೀರಿಗೆ ಇಳಿದ ಜಾಗದಿಂದ 300 ಮೀಟರ್ ದೂರದಲ್ಲಿ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಬಾಲಕ ಹರ್ಷನಿಗಾಗಿ ಶೋಧ ಮುಂದುವರೆದಿದೆ.
ನಿನ್ನೆ ದೊಡ್ಡಪ್ಪ ಕುಬೇರಪ್ಪನ ಜೊತೆ ಸ್ವಾತಿ,ವರಮಹಾಲಕ್ಷ್ಮೀ, ಚಂದನ ಮತ್ತು ಹರ್ಷ ಈ ನಾಲ್ವರು ಸ್ನಾನಕ್ಕೆ ಹೆಂಚಿನ ಸಿದ್ದಾಪುರದ ಭದ್ರ ನಾಲೆಗೆ ಕೈ ಕೈ ಹಿಡಿದುಕೊಂಡು ನೀರಿಗೆ ಇಳಿದ್ದರು. ಅದೃಷ್ಠವಶಾತ್ ಸ್ವಾತಿ ಮತ್ತು ವರಮಹಾಲಕ್ಷ್ಮೀ ನೀರಿನಲ್ಲಿ ಕೊಚ್ಚಿಕೊಂಡು ಹೋಗುವುದನ್ನ ತಪ್ಪಿಸಲಾಗಿತ್ತು.
ಆದರೆ ಚಂದನ(14) ಮತ್ತು ಹರ್ಷ(10) ನೀರುಪಾಲಾಗಿದ್ದರು. ಚಂದನ ಇಂದು ಸಂಜೆ 5 ಗಂಟೆಯ ವೇಳೆಗೆ ಆಕೆಯ ಮೃತದೇಹವಮ್ನ ಅಗ್ನಿಶಾಮಕದಳದವರು ಪತ್ತೆ ಮಾಡಿದ್ದಾರೆ.
