ಸ್ಥಳೀಯ ಸುದ್ದಿಗಳು
ವೆಬ್ ಇಂಡೆಂಟ್ ತೆಗೆದು ಹಳೇ ಪದ್ದತಿ ಜಾರಿಗೊಳಿಸುವಂತೆ ಮನವಿ

ಸುದ್ದಿಲೈವ್.ಕಾಂ/ಶಿವಮೊಗ್ಗ
ಮದ್ಯ ಮಾರಾಟಗಳ ಕೇಂದ್ರಗಳಿಗೆ ಆನ್ ಲೈನ್ ಇಂಡೆಂಟ್ ವ್ಯವಸ್ಥೆಗಳನ್ನ ತೆಗೆದುಹಾಕಿ ಹಳೇ ಪದ್ದತಿಯನ್ನ ಜಾರಿಗೊಳಿಸುವಂತೆ ಒತ್ತಾಯಿಸಿ ಇಂದು ಜಿಲ್ಲಾ ಮದ್ಯ ಮಾರಾಟಗಾರರ ಸಂಘ ಪಾನೀಯ ನಿಗಮದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಏ.1 ರಿಂದ ಪಾನೀಯ ನಿಗಮಗಳಲ್ಲಿ ವೆಬ್ ಇಂಡೆಂಟ್ ಗಳಿಗೆ ಅವಕಾಶ ಕೊಟ್ಟ ಹಿನ್ನಲೆಯಲ್ಲಿ ಆನ್ ಲೈನ್ ಸಮಸ್ಯೆ ಕಂಡುಬರುತ್ತಿದೆ. ಮದ್ಯ ಮಾರಾಟ ಕೇಂದ್ರಗಳಿಗೆ ಸಮಸ್ಯೆ ಉಂಟಾಗುತ್ತಿರುವುದರಿಂದ ಸರಿಯಾಗಿ ಪಾನೀಯಗಳು ಲಭ್ಯವಾಗುತ್ತಿಲ್ಲವೆಂದು ಸಂಘದ ಆರೋಪವಾಗಿದೆ.
ಈ ಹಿನ್ನಲೆಯಲ್ಲಿ ಈ ಹೊಸ ಪದ್ಧತಿಯನ್ನ ಕೈಬಿಟ್ಟು ಹಳೆ ಮ್ಯಾನ್ಯೂಯಲ್ ಇಂಡೆಂಟ್ ನ್ನ (ಕೈಬರಹ) ಜಾರಿಗೊಳಿಸುವಂತೆ ಸಂಘ ಮನವಿ ಮಾಡಿದೆ.
ಮನವಿ ಸಲ್ಲಿಸುವ ವೇಳೆ ಸಂಘದ ಅಧ್ಯಕ್ಷ ಜಿಎಂ ಗೌಡ,ತಾಲೂಕು ಕಾರ್ಯದರ್ಶಿ ಜಗದೀಶ್ ಮಾತನಣ್ಣನವರ್, ಮಹೇಶ್ ಮೊದಲಾದವರು ಉಪಸ್ಥತಿರಿದ್ದರು.
